ಬೆಂಗಳೂರು: ಯಶವಂತಪುರದ ಚಿತ್ರಕೂಟ ಶಾ ಲೆಯ ಆವರಣದಲ್ಲಿ ಚಿತ್ರಕೂಟ ಶಾಲೆಯ 16 ಮಕ್ಕಳು ಯೂತ್ ಗೇಮ್ಸ್ ಕೌನ್ಸಿಲ್, ಯೂತ್ ಇಂಡೋ-ನೇಪಾಳ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ 9 ಚಿನ್ನ ಮತ್ತು 7ಬೆಳ್ಳಿ ಪದಕ ಪ್ರಶಸ್ತಿ ಗೆದ್ದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಚಿತ್ರಕೂಟ ಶಾಲೆಯ ವ್ಯವಸ್ಥಾಪಕ ಚೈತನ್ಯ, ಪ್ರಾಂಶುಪಾಲರಾದ ಜೋಯಿತ ಚಟರ್ಜಿರವರು ಮತ್ತು ದೈಹಿಕ ಶಿಕ್ಷಕರಾದ ರಂಗನಾಥ್, ಕುಮಾರಿ ಸಂಗೀತಾರವರು ಪದಕ ವಿಜೇತ ಮಕ್ಕಳಿಗೆ ಸನ್ಮಾನ ಮಾಡಿದರು.
ಯೂತ್ ಗೇಮ್ಸ್ ಕೌನ್ಸಿಲ್ ನ ಎರಡನೇ ಯೂತ್ ಗೇಮ್ಸ್ ಇಂಡೋ ನೇಪಾಲ್ ಅಂತರಾಷ್ಟ್ರೀಯ ಸರಣಿಯು 2022ರ ಆಗಸ್ಟ್ 27 ರಿಂದ 29 ರವರೆಗೆ ನೇಪಾಳದ ಪೋಖ್ರದ ದಶರಥ್ ರಂಗಶಾಲಾ ಸ್ಟೇಡಿಯಂನಲ್ಲಿ ನಡೆಯಿತು.
ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನದ ತಂಡಗಳು ಹಾಗೂ ನೇಪಾಳದ ಮೂರು ವಿವಿಧ ರಾಜ್ಯಗಳ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
ಚಿತ್ರಕೂಟ ಶಾಲೆಯ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ 14 ಮತ್ತು 16 ವಯಸ್ಸಿನ ವಿಭಾಗಗಳಲ್ಲಿ 800 ಮೀ, 1500 ಮೀ ಮತ್ತು 3000 ಮೀ ಸ್ಪರ್ಧೆಗಳಲ್ಲಿ 9 ಚಿನ್ನ ಮತ್ತು 7 ಬೆಳ್ಳಿಯ ಪದಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. 1500 ಮೀ ಮತ್ತು 3000 ಮೀ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದರು.
ನೇಪಾಳ ಅಂತರಾಷ್ಟ್ರೀಯ ಕ್ರೀಡಾ ಸರಣಿಯ ಗೆಲುವಿನಲ್ಲಿ ಶಾಲೆಯ ದೈಹಿಕ ಶಿಕ್ಷಕರಾದ ರಂಗನಾಥ್ ಮತ್ತು ಸಂಗೀತಾರವರ ಪರಿಶ್ರಮ ಬಹುಮುಖ್ಯವಾದದು. ವಿದ್ಯಾರ್ಥಿಗಳು ರಾಷ್ಟ್ರವನ್ನು ಪ್ರತಿನಿಧಿಸಿ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದುದು ಎಲ್ಲರೂ ಹೆಮ್ಮೆ ಪಡುವಂತಹ ಸಂಗತಿಯಾಗಿದೆ.




