ಧಾರವಾಡ: ಬೆಳೆ ಹಾನಿ, ಬೆಳೆ ಪರಿಹಾರ ಜಮೆ ಅಗದೆ ಇರುವ ರೈತರು ತಾವು ಖಾತೆ ಹೊಂದಿರುವ ಬ್ಯಾಂಕ್ ಗೆ ಭೇಟಿ ನೀಡಿ, ಖಾತೆ ಚಾಲ್ತಿ ಇರುವ ಬಗ್ಗೆ, ಕೆವೈಸಿ ಅಪ್ಡೇಟ್ ಆಗಿರುವ ಬಗ್ಗೆ ಮತ್ತು ಪ್ರೂಟ್ಸ್ ಸಂಖ್ಯೆ ಹೊಂದಿರುವ ಬಗ್ಗೆ ಪರಿಶೀಲಿಸಿ, ಖಾತರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಕೌಂಟ್ಗಳನ್ನು ನಿರ್ಬಂಧಿಸಿರುವುದು ಅಥವಾ ಫ್ರೀಜ್ ಮಾಡಿರುವುದು ಹಾಗೂ ಯಾವ ರೈತರ ಖಾತೆಯನ್ನು ಮುಚ್ಚಲಾಗಿದೆಯೋ ಅಂತಹ ಫಲಾನುಭವಿಗಳು ಬ್ಯಾಂಕ್ಗೆ ಹೋಗಿ ಅಕೌಂಟ್ ರಿ ಓಪನ್ ಮಾಡಿಸಬೇಕು. ಫ್ರೂಟ್ಸ್ ಅಪ್ಡೇಟ್ನಲ್ಲಿ ಆಧಾರ್ ಹೆಸರು ಹೊಂದಿಕೆಯಾಗುತ್ತಿಲ್ಲ, ಆ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ಅಪ್ಡೇಟ್ ಮಾಡಿಸಬೇಕು. ಆಧಾರ್ ಅನ್ನು ಬ್ಯಾಂಕ್ನೊಂದಿಗೆ ಸೀಡ್, ಖಾತೆಗೆ ಆಧಾರ್ ಮ್ಯಾಪ್, ಕುಸಿದ ಪಾವತಿ ಹಾಗೂ ಎನ್.ಪಿ.ಸಿ.ಐ ಸೀಡಿಂಗ್ ಸಮಸ್ಯೆ ಇರುವಂತ ಫಲಾನುಭವಿಗಳು ಬ್ಯಾಂಕ್ಗೆ ಹೋಗಿ ಎನ್.ಪಿ.ಸಿ.ಐ ಮಾಡಿಸಬೇಕು ಎಂದು ತಿಳಿಸಿದ್ದಾರೆ.
ಅಮಾನ್ಯ ಸ್ವೀಕೃತ ಐ.ಎಫ್.ಎಸ್.ಸಿ ಕೋಡ್ ಹೊಂದಿರುವ ಫಲಾನುಭವಿಗಳು ಬ್ಯಾಂಕ್ಗೆ ಹೋಗಿ ಐ.ಎಫ್.ಎಸ್.ಸಿ ಕೋಡ್ ಅಪ್ಡೇಟ್ ಮಾಡಿಸಿ ಎನ್.ಪಿ.ಸಿ.ಐ ಮಾಡಿಸಬೇಕು. ಹೆಚ್ಚಿನ ವಿವರ, ಮಾಹಿತಿ ಅಗತ್ಯವಿದ್ದಲ್ಲಿ ರೈತರು ಆಯಾ ತಾಲೂಕಿನ ತಹಶಿಲ್ದಾರ ಕಚೇರಿಯಲ್ಲಿ ತೆರೆದಿರುವ ಬರಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಅಥವಾ ಅಲ್ಲಿನ ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.



