ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ

2 years ago

#fake #WhatsAppaccount #PoliceCommissioner #demanded #money

ಬೆಂಗಳೂರು: ಆನ್ ಲೈನ್ ವಂಚಕರ ಹಾವಳಿ‌ ಇತ್ತೀಚೆಗೆ ತೀವ್ರಗೊಂಡಿದೆ. ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ತೆರೆದು ಹಣಕ್ಕಾಗಿ ಬೇಡಿಕೆಯಿಟ್ಟಿರುವ ಖದೀಮರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಯುಕ್ತರ ಹೆಸರಲ್ಲಿ ನಕಲಿ ವಾಟ್ಸಪ್ ಅಕೌಂಟ್ ಕ್ರಿಯೆಟ್ ಮಾಡಿದ್ದ ಕಿಡಿಗೇಡಿ, ಐ ಆ್ಯಮ್ ಬಿ.ದಯಾನಂದ್ ಬೆಂಗಳೂರು ಪೊಲೀಸ್ ಕಮಿಷನರ್ ಎಂದು ಮೆಸೇಜನ್ನು ಸಾಕಷ್ಟು ಜನರಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದನು.

ಆರೋಪಿ ಕಮಿಷನರ್ ಹೆಸರಲ್ಲಿ ಹಣ ವಸೂಲಿ ಮಾಡಲು ಮುಂದಾಗಿದ್ದನು ಎನ್ನುವದರ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ. ಸದ್ಯ ಅಕೌಂಟ್ ಅನ್ನು ಡಿ ಆ್ಯಕ್ಟಿವೇಟ್ ಮಾಡಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply