ಕಲಾವಿದ ತಲ್ಲೂರು ಎಲ್. ಎನ್ ಅವರ ಕಲಾಕೃತಿ “ವಿ+ಮಾನ” ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರದರ್ಶನ

3 years ago

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ (T2) ಕಟ್ಟಡದಲ್ಲಿ, ವಿದೇಶಯಾನಿಗಳ ಚೆಕ್‌ಇನ್ ಲೌಂಜಿನಲ್ಲಿ ಕಲಾವಿದ ತಲ್ಲೂರು ಎಲ್ ಎನ್ (Tallur LN) ಅವರ ಹೊಸ ಸಾರ್ವಜನಿಕ ಕಲಾಕೃತಿ “ವಿ+ಮಾನ” ಶಾಶ್ವತ ಪ್ರದರ್ಶನಕ್ಕಾಗಿ ಎರಡು-ಮೂರು ದಿನಗಳ ಹಿಂದೆ ಸ್ಥಾಪನೆಗೊಂಡಿದೆ.

ಸುಮಾರು ಹದಿನೆಂಟು ಅಡಿ ಎತ್ತರದ, ಕಂಚಿನ ಈ ಶಿಲ್ಪವನ್ನು ವಿಮಾನ ನಿಲ್ದಾಣ ಪ್ರಾಧಿಕಾರವು ಕಲಾವಿದ ತಲ್ಲೂರು ಅವರಿಗೆ ಆಹ್ವಾನ ನೀಡಿ ಮಾಡಿಸಿಕೊಂಡಿದೆ. ಮಣಿಪಾಲದ “ಕಾಯ್ನೇಜ್ (ಕಾಯಿನ್ ಸರ್ಕಲ್)” ಸಾರ್ವಜನಿಕ ಶಿಲ್ಪದ ಬಳಿಕ ಇದು ಕರ್ನಾಟಕದಲ್ಲಿ ತಲ್ಲೂರು ಅವರ ಎರಡನೆಯ ಮಹತ್ವದ ಸಾರ್ವಜನಿಕ ಶಿಲ್ಪವಾಗಲಿದೆ.

ಆಸಕ್ತರು ಟರ್ಮಿನಲ್ 2ಗೆ ಭೇಟಿ ನೀಡಿದಾಗ ಈ ಶಿಲ್ಪವನ್ನು ವೀಕ್ಷಿಸಬಹುದು. ತಲ್ಲೂರು ಅವರ ಕಲಾಕೃತಿಗಳು ಈಗ ಬೆಂಗಳೂರಿನಲ್ಲೇ MAP ಮ್ಯೂಸಿಯಂನಲ್ಲಿ (ವಿಶ್ವೇಶ್ವರಯ್ಯ ತಂತ್ರಜ್ಞಾನ ಮ್ಯೂಸಿಯಂನ ಎದುರು) ಪ್ರದರ್ಶಿತವಾಗುತ್ತಿದ್ದು, ಆಸಕ್ತರು ಅಲ್ಲಿಗೆ ಭೇಟಿ ನೀಡಿ ಅವರ “ಚಿರಾಗ್-ಇ -AI” ಪ್ರದರ್ಶನದಲ್ಲಿರುವ ಕಲಾಕೃತಿಗಳನ್ನು ಅನುಭವಿಸಬಹುದು

Leave a Reply