ವಿರೋಧ ಪಕ್ಷದಲ್ಲಿದ್ದು ಕಡ್ಲೆಪುರಿ ತಿಂತಿದ್ದೇನಪ್ಪ: ದಾಖಲೆ ಬಿಡುಗಡೆ ಮಾಡುತ್ತೇನೆಂದ ಬೊಮ್ಮಾಯಿಗೆ ಸಿದ್ದು ಗುದ್ದು

4 years ago

ಬೆಂಗಳೂರು: ಪಿಎಸ್ಐ ಹಗರಣ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದ್ದರೆ ವಿರೋಧ ಪಕ್ಷದಲ್ಲಿದ್ದು ನೀವು ಯಾಕೆ ಸುಮ್ಮನಿದ್ದೀರಿ ನನ್ನನ್ನು ಉಳಿಸಲಿಕ್ಕಾ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ  ಸಿಎಂ ಬೊಮ್ಮಾಯಿ ವಿರುದ್ಧ ಹರಿಹಾಯ್ದಿದ್ದಾರೆ.

ಪಿಎಸ್ ಹಗರಣದಲ್ಲಿ ಮಾಜಿ ಸಿಎಂ  ಯಡಿಯೂರಪ್ಪ ಅವರ ಮಗ ವಿಜಯೇಂದ್ರ ನೇರವಾಗಿ ಶಾಮಿಲಾಗಿದ್ದಾರೆ ಎಂದು ಆರೋಪಿಸಿದ್ದ ಸಿದ್ಧರಾಮಯ್ಯ ಅವರಿಗೆ ಸಿಎಂ ಬೊಮ್ಮಾಯಿ ಅವರು  ಪಿಎಸ್ಐ ಹಗರಣ  ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದೆ ಇದಕ್ಕೆ ಮೂರು ದಿನಗಳಲ್ಲಿ ಜನರ ಮುಂದೆ ದಾಖಲೆ ಬಿಡುಗಡೆಗೊಳಿಸುತ್ತೇನೆ ಎಂದು ಸವಾಲು ಹಾಕಿದ್ದರು.

ಇದರ ಕುರಿತು ಸುದ್ದಿಗಾರರು ಇಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದಾಗ ದಾಖಲೆಗಳಿದ್ದರೆ ಅಂದೇ ಯಾಕೆ ಬಿಡುಗಡೆ ಮಾಡಲಿಲ್ಲ. ಆವಾಗ ವಿರೋಧ ಪಕ್ಷದಲ್ಲಿದ್ದು  ಕಡ್ಲೆಪುರಿ ತಿಂತಿದ್ದೀರಾ. ದಾಖಲೆಗಳಿದ್ದರೆ ತನಿಖೆ ನಡೆಸಿ ಎಂದು ಮರುಸವಾಲು ಹಾಕಿದರು. ನೀವು ಜನರ ಮುಂದೆ ಸುಳ್ಳು ಹೇಳುವ ಮೊದಲು ಅದರ ತನಿಖೆ ನಡೆಸಿ ಎಂದರು.

ಆವಾಗಲೇ  ಹಗರಣ ಪ್ರಸ್ತಾಪ ಮಾಡಿದ್ದರೆ 5-10 ಸಲಾ ರಾಜೀನಾಮೆ  ಕೊಡಬೇಕಾಗಿತ್ತು ಎಂಬ ಬೊಮ್ಮಾಯಿ ಹೇಳಿಕೆಗೆ ತಮ್ಮದೇ ಶೈಲಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಸಿದ್ಧರಾಮಯ್ಯ ಅವರು ಓಹ ನನ್ನನ್ನು ಉಳಿಸಲು ಪ್ರಸ್ತಾಪ ಮಾಡಲಿಲ್ಲಾ ಎಂದರು. ದಾಖಲೆಗಳಿದ್ದು ನೀವು ಬಿಡುಗಡೆಗೊಳಿಸಿಲಿಲ್ಲ ಎಂದರೆ ಅದು ಕ್ರಿಮಿನಲ್ ಅಪರಾಧವಾಗುತ್ತದೆ  ಎಂದರು.

Leave a Reply