ಬೆಂಗಳೂರು: ಇಂಧನ ಹೊಂದಾಣಿಕೆ ವೆಚ್ಚ ಹೆಚ್ಚಳ, ಪೂರೈಕೆಯಲ್ಲಿ ನಷ್ಟ ಸೇರಿದಂತೆ ಹಲವು ವಲಯಗಳಲ್ಲಿ ವಿದ್ಯುತ್ ವಿತರಣಾ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದು, ಇದನ್ನು ಭರಿಸುವ ದೃಷ್ಟಿಯಿಂದ ವಿದ್ಯುತ್ ದರ ಹೆಚ್ಚಳಕ್ಕೆ ಅವಕಾಶ ನೀಡುವಂತೆ ಕೆಇಆರ್ ಸಿಗೆ ಮನವಿ ಸಲ್ಲಿಸಿವೆ.
ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ವಿದ್ಯುತ್ ಏರಿಕೆಯ ಪ್ರಸ್ತಾಪವವನ್ನು ಸಲ್ಲಿಸಿದ್ದು, ಚುನಾವಣೆಗೂ ಮೊದಲೇ ವಿದ್ಯುತ್ ದರ ಏರಿಕೆಯಾಗುತ್ತದೋ ಇಲ್ಲವೆ ಚುನಾವಣೆ ನಂತರ ದರ ಏರಿಕೆ ತೀರ್ಮಾನಗಳು ಆಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯದ ನಾಲ್ಕು ಎಸ್ಕಾಂಗಳು ಪ್ರತಿ ಯುನಿಟ್‌ಗೆ 1.50 ಪೈಸೆಯಿಂದ 2 ರೂ. ದರ ಏರಿಕೆಗೆ ಕೋರಿಕೆ ಸಲ್ಲಿಸಿವೆ. ಎಸ್ಕಾಂಗಳ ದರ ಏರಿಕೆ ಬಗ್ಗೆ ಕೆಇಆರ್‌ಸಿ ಸಾರ್ವಜನಿಕರ ಆಕ್ಷೇಪಣೆಗಳನ್ನು ಆಲಿಸಲು ಫೆ. 13 ರಿಂದ ಮಾ.1ರ ತನಕ ಸಾರ್ವಜನಿಕ ಅದಾಲತ್ ನಡೆಸಲಿದೆ.
ಎಸ್ಕಾಂಗಳು ಪ್ರತಿವರ್ಷವೂ ವಿದ್ಯುತ್ ದರ ಏರಿಕೆಗೆ ಕೆಇಆರ್‌ಸಿ ಮುಂದೆ ಪ್ರಸ್ತಾವನೆ ಸಲ್ಲಿಸುವುದು ಸಾಮಾನ್ಯ. ಅದರಂತೆ ಈ ಬಾರಿ 1.50 ಪೈಸೆಯಿಂದ 2 ರೂ.ವರೆಗೆ ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಿದೆ.
ಈ ಬಗ್ಗೆ ಕೆಇಆರ್‌ಸಿ ಸಾರ್ವಜನಿಕ ಅದಾಲತ್ ನಂತರ ತೀರ್ಮಾನ ಪ್ರಕಟಿಸಲಿದೆ. ಕೆಇಆರ್‌ಸಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲೇ ದರ ಏರಿಕೆಯ ತೀರ್ಮಾನ ಮಾಡಬೇಕು. ಒಂದು ವೇಳೆ ನೀತಿ ಸಂಹಿತೆ ಜಾರಿಯಾದರೆ ದರ ಪರಿಷ್ಕರಣೆ ಪ್ರಕಟಿಸಲು ಸಾಧ್ಯವಿಲ್ಲ. ಹಾಗಾಗಿ, ಚುನಾವಣೆಗೂ ಮೊದಲೇ ವಿದ್ಯುತ್ ದರ ಪರಿಷ್ಕರಣೆಯಾಗುತ್ತದೋ ಇಲ್ಲ ಚುನಾವಣೆ ನಂತರ ವಿದ್ಯುತ್ ದರ ಪರಿಷ್ಕರಣೆ ತೀರ್ಮಾನ ಆಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.




