ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ

2 years ago

ರಾಜಕೀಯ ಪಕ್ಷಗಳೊಂದಿಗೆ ಸಭೆ

2025 ಜನವರಿ 1 ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ

ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಭಾವಚಿತ್ರವಿರುವ ಮತದಾರರ ಪಟ್ಟಿಯ ಸಂಕ್ಷಿಪ್ತ ವಿಶೇಷ ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ್ದು 2025 ರ ಜನವರಿ 1 ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ 17 ವರ್ಷ ತುಂಬಿ 18 ನೇ ವರ್ಷಗಳಲ್ಲಿರುವ ಯುವ ಮತದಾರರು ಬರುವ ಜನವರಿ 1 ಕ್ಕೆ 18 ವರ್ಷ ತುಂಬುವ ಎಲ್ಲಾ ಹೊಸ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಬಹುದಾಗಿದೆ ಎಂದರು.

ಹೊಸದಾಗಿ ನೊಂದಾಯಿಸಲು ನಮೂನೆ-6, ಹೆಸರು ಕೈಬಿಡಲು ನಮೂನೆ-7, ತಿದ್ದುಪಡಿ, ಸ್ಥಳಾಂತರ, ವಿಶೇಷ ಚೇತನರ ಗುರುತಿಸುವಿಕೆಗೆ ನಮೂನೆ-8, ವಿದೇಶದಲ್ಲಿ ನೆಲೆಸಿರುವ ಭಾರತೀಯವರು ನಮೂನೆ-6ಎ ರಡಿ ವಿವರವನ್ನು ಭರ್ತಿ ಮಾಡಿ ಮತದಾರರ ನೊಂದಣಾಧಿಕಾರಿಗಳಿಗೆ ನೀಡಬೇಕು ಎಂದರು.

ವೋಟರ್ ಹೆಲ್ಪ್ ಲೈನ್ ಆಪ್ ಅಥವಾ  http;//voters.eci.gov.in/  ವೆಬ್ಸೈಕಟ್ ಮೂಲಕವೂ ನೊಂದಣಿ, ತಿದ್ದುಪಡಿ, ವರ್ಗಾವಣೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇದೆ. ದಾವಣಗೆರೆ ಮತ್ತು ಹೊನ್ನಾಳಿ ಉಪವಿಭಾಗಾಧಿಕಾರಿಗಳು, ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಮತದಾರರ ನೊಂದಣಾಧಿಕಾರಿಗಳಾಗಿದ್ದು ಆಯಾ ತಾಲ್ಲೂಕಿನ ತಹಶೀಲ್ದಾರರು, ಪಾಲಿಕೆ ಪರಿಷತ್ ಕಾರ್ಯದರ್ಶಿ ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿರುತ್ತಾರೆ ಎಂದರು.

ಪರಿಷ್ಕರಣೆ ಅವಧಿಯಲ್ಲಿ ಮತಗಟ್ಟೆ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಸಂಕ್ಷಿಪ್ತ ಪರಿಷ್ಕರಣೆ ನಡೆಸುವರು. ಈಗಾಗಲೇ ವರ್ಗಾವಣೆಯಿಂದ ತೆರವಾಗಿರುವ ಬಿಎಲ್ಓ್ಗಳನ್ನು ಸಹ ನೇಮಕ ಮಾಡಲಾಗಿದೆ. ಭಾವಚಿತ್ರ ಸ್ಪಷ್ಟವಾಗಿ ಕಾಣದಿರುವ ಪಟ್ಟಿಯನ್ನು ಸಹ ಪರಿಷ್ಕರಿಸಲಿದ್ದು ಅಂತಹ ಮತದಾರರನ್ನು ಸಂಪರ್ಕಿಸಲಾಗುತ್ತದೆ. ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಏಜೆಂಟರ ಮೂಲಕ ಸಂಕ್ಷಿಪ್ತ ಪರಿಷ್ಕರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು.

ಚುನಾವಣಾ ಆಯೋಗದ ನಿರ್ದೇಶನದನ್ವಯ ಪ್ರತಿ ಮತಗಟ್ಟೆಗಳಲ್ಲಿ ಕನಿಷ್ಠ 300 ರಿಂದ 1500 ಮತದಾರರನ್ನು ಹೊಂದಿರುತ್ತದೆ. ಈ ಸಂಖ್ಯೆ ಕಡಿಮೆ ಆದಲ್ಲಿ ಪರಿಷ್ಕರಣೆ ಮತ್ತು ಹೆಚ್ಚಾದಲ್ಲಿ ಹೆಚ್ಚುವರಿ ಮತಗಟ್ಟೆ  ಸ್ಥಾಪನೆ ಮಾಡಲು ಪರಿಶೀಲಿಸಲಿದ್ದು ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ಗಮನಕ್ಕೆ ತರಲಾಗುತ್ತದೆ ಎಂದರು.

ಸಂಪರ್ಕಿಸಬೇಕಾದ ತಹಶೀಲ್ದಾರರ ದೂರವಾಣಿ; ಜಗಳೂರು 9164687171, ದಾವಣಗೆರೆ 9108268759, ಹರಿಹರ 9880994147, ಪಾಲಿಕೆ ಕಂದಾಯಾಧಿಕಾರಿ 9901768584, ಪರಿಷತ್ ಕಾರ್ಯದರ್ಶಿ 7892012952, ಚನ್ನಗಿರಿ 9880383519, ಹೊನ್ನಾಳಿ 9480545472 ಮೊಬೈಲ್ಗೆಣ ಕರೆ ಮಾಡಬಹುದು.

ಪರಿಷ್ಕರಣೆ ಅವಧಿ: ಮತದಾರರ ಪಟ್ಟಿಯ ಕರಡು ಪಟ್ಟಿಯನ್ನು 2024 ರ ಅಕ್ಟೋಬರ್ 29 ರಂದು ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳಿದ್ದಲ್ಲಿ 2024 ರ ನವೆಂಬರ್ 28 ರೊಳಗಾಗಿ ಸಲ್ಲಿಸಬಹುದಾಗಿದೆ. ಈ ಅವಧಿಯಲ್ಲಿನ ಎರಡನೇ ಶನಿವಾರ, ಭಾನುವಾರ ರಜಾ ದಿನಗಳಂದು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಸಲ್ಲಿಕೆಯಾಗುವ ಎಲ್ಲಾ ಆಕ್ಷೇಪಣೆಗಳನ್ನು 2024 ರ ಡಿಸೆಂಬರ್ 24 ರೊಳಗಾಗಿ ಇತ್ಯರ್ಥ ಮಾಡಿ 2025 ರ ಜನವರಿ 6 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಚುನಾವಣಾ ತಹಶೀಲ್ದಾರ್ ಕವಿರಾಜ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.

Leave a Reply