ಬಿಬಿಎಂಪಿ ನೌಕರರ ಸಹಕಾರ ಸಂಘದ ಚುನಾವಣೆ

2 years ago

ಎ.ಅಮೃತ್ ರಾಜ್ ಮತ್ತು ಕೆ.ಜಿ.ರವಿ ತಂಡದಿಂದ ಬಿರುಸಿನ ಪ್ರಚಾರ

ಬೆಂಗಳೂರು: ವಿ.ಟಿ.ಪ್ಯಾರಡೈಸ್ ಸಭಾಂಗಣದಲ್ಲಿ ಬಿಬಿಎಂಪಿ ನೌಕರರ ಸಹಕಾರ ಸಂಘದ 2023-2028ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ ಕುರಿತು ಸಭೆ ಅಧ್ಯಕ್ಷ ಎ. ಅಮೃತ್ ರಾಜ್ ಮತ್ತು ಕೆ. ಜಿ.ರವಿ ನೇತೃತ್ವದಲ್ಲಿ ಸಭೆ ಜರುಗಿತು.

ನೂತನವಾಗಿ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ರಾಜಶೇಖರ್, ಮಂಜುನಾಥ್ ಜೆ, ಮಹಿಳೆ ಸ್ಥಾನದಲ್ಲಿ ಅಕ್ಕಮಹಾದೇವಿ, ಮಹಾದೇವಿ ಸಂಗಪ್ಪ ಗಾಣಿಗೇರ, ವಾಣಿ ಅರ್.ಪಿ.ರವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.

ಇದೇ ಭಾನುವಾರ 17ನೇ ತಾರೀಖು ಉಳಿದ 8 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎ.ಅಮೃತ್ ರಾಜ್ ಮತ್ತು ಕೆ.ಜಿ.ರವಿ ತಂಡದಲ್ಲಿ ಸಿ.ಎಂ.ಮುನಿರಾಜು, ಮಹೇಶ್ ಎಂ ಮತ್ತು ಮಂಜುನಾಥ್ ಎಲ್.ಆರ್ ಹಾಗೂ ಹರೀಶ್ ಕುಮಾರ್ ಎನ್, ವಿನಯಕುಮಾರ್, 7 ಸಾಮಾನ್ಯ ವರ್ಗ ಹಾಗೂ ಕೆ.ಎನ್.ಗಂಗಾಧರ್ (ಲಾಲಿ)ರವರು 1 ಪರಿಶಿಷ್ಟ ಜಾತಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಈಗಾಗಲೇ 5 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎ.ಅಮೃತ್ ರಾಜ್, ಕೆ.ಜಿ ರವಿ ತಂಡ ಬಿಬಿಎಂಪಿ ನೌಕರರ ಸಹಕಾರ ಸಂಘದ ಚುನಾವಣೆಯಲ್ಲಿ ಭಾರಿ ಮೈಲುಗೈ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಮಾತಾಡಿದ ನೌಕರರ ಸಹಕಾರ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ನೂರ ಹನ್ನೊಂದು ವರ್ಷದ ಇತಿಹಾಸವಿರುವ ಬಿಬಿಎಂಪಿ ನೌಕರರ ಸಂಘದಲ್ಲಿಕಳೆದ ಐದು ವರ್ಷದಲ್ಲಿ ನಾನು ಅಧ್ಯಕ್ಷನಾಗಿ ನಮ್ಮ ತಂಡದ ಸಹಕಾರದಿಂದ ಪಾರದರ್ಶಕ ಆಡಳಿತ ನೀಡಿ, ಸಂಘವು ಲಾಭಂಶ ಬರುವಂತೆ ಚುರಕಿನ ಆಡಳಿತ ನೀಡಲಾಗಿದೆ. ಐದು ವರ್ಷಗಳ ಸಾಧನೆಗಳನ್ನು ಸದಸ್ಯರಿಗೆ ತಿಳಿಸಿ ಮತಯಾಚನೆ ಮಾಡುತ್ತಿದ್ದೇನೆ ಮತ್ತು ನಮ್ಮ ತಂಡದಲ್ಲಿ ಐದು ಸದಸ್ಯರು ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದರು.

ಸಹಕಾರ ಸಂಘದ ಸಂಸ್ಥಾಪಕ ದಿನಾಚರಣೆ ಪ್ರಯುಕ್ತ ಐದು ವರ್ಷದಲ್ಲಿ 750ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗಿದೆ. ನೌಕರರಿಗೆ ಕಡಿಮೆ ಬಡ್ಜಿಯಲ್ಲಿ ಸರಳ ಸಾಲ ಸೌಲಭ್ಯ ಮತ್ತು ನೌಕರರ ಕುಟುಂಬದವರು ಮೃತಪಟ್ಟರೆ ಉಚಿತವಾಗಿ ಶವಸಂಸ್ಕಾರಕ್ಕೆ ಎರಡು ವಾಹನವನ್ನು ಉಚಿತವಾಗಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘದ ವತಿಯಿಂದ ಅಧಿಕಾರಿ ಮತ್ತು ನೌಕರರ ಕುಟುಂಬಕ್ಕೆ ಶುಭ ಕಾರ್ಯಗಳಿಗೆ ಸಮುದಾಯ ಭವನ ನಿರ್ಮಾಣ ಯೋಜನೆ ರೂಪಿಸಲಾಗಿದೆ ಎಂದರು

ಸಹಕಾರ ಸಂಘದ ಉತ್ತಮ ಆಡಳಿತ ವ್ಯವಸ್ಥೆಯಿಂದ ಎ.ಶ್ರೇಣಿ ಪಡೆದಿದೆ. ನಮ್ಮ ತಂಡದಲ್ಲಿ ಈಗಾಗಲೇ 5 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐದು ವರ್ಷದ ಸಾಧನೆ ಮತ್ತು ಸಹಕಾರ ಸಂಘದ ಮುಂದಿನ ಯೋಜನೆಗಳನ್ನು ಸದಸ್ಯರಿಗೆ ತಿಳಿಸಿ ಮತಯಾಚನೆ ಮಾಡಲಿದ್ದೇವೆ. ಈಗಾಗಲೇ ಅಧಿಕಾರಿ, ನೌಕರರ ಬೆಂಬಲ ಸಹಕಾರ ನೀಡುತ್ತಿದ್ದಾರೆ ನಮ್ಮ ತಂಡದ ಗೆಲುವು ಸುಲಭವಾಗಲಿದೆ ಎಂದರು.

ಚುನಾವಣಾ ಉಸ್ತುವಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಮತ್ತು ಎಸ್.ಜಿ.ಸುರೇಶ್, ರುದ್ರೇಶ್, ಸಂತೋಷ್ ಕುಮಾರ್, ಮಂಜುನಾಥ್, ಮಂಜೇಗೌಡ, ನರಸಿಂಹ, ರೇಣುಕಾಂಬ, ಸೋಮಶೇಖರ್, ಶ್ರೀಧರ್, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ಸದಸ್ಯರು ಉಪಸ್ಥಿತರಿದ್ದರು.

Leave a Reply