ಪ್ರಧಾನಿ @narendramodi ಜೀ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡಲು ಘೋಷಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಂಮರಿಗೆ ಈದ್ ಕಿಟ್ ಕೊಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಕಾಂಗ್ರೆಸ್ ನವರು ಇದನ್ನು ಮಾಡಿದ್ದರೆ, ತುಷ್ಟೀಕರಣ ರಾಜಕಾರಣ, ಒಂದು ಸಮುದಾಯವನ್ನು ಮಾತ್ರ ಓಲೈಸುವ ರಾಜಕಾರಣವೆಂದು ಹೀಗೆಳೆಯುವ @BJP4India ಅವರನ್ನು ಕೇಳುತ್ತಿದ್ದೇವೆ, ಇದು ಓಲೈಕೆ ಅಲ್ಲವೇ?? ಇದಕ್ಕೆ ಬೇರೆ ಏನಾದರೂ ಹೆಸರಿದೆಯೇ??
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ದೇಶದ್ಯಾಂತ ಯುಗಾದಿ ಹಬ್ಬವನ್ನು ರಂಜಾನ್ ಗೆ ಒಂದು ದಿನ ಮೊದಲೇ ನವ ವರ್ಷ, ಬಿಹು, ವೈಶಾಖಿ, ಪಾನ ಸಂಕ್ರಾಂತಿ, ಗುಡಿ ಪಾಡ್ವಾ, ಬೈಶಾಖ ಎಂಬ ಹೆಸರುಗಳಿಂದ ಹಬ್ಬವನ್ನು ಆಚರಿಸುತ್ತಿರುವ ಹಿಂದೂಗಳ ಬಗ್ಗೆ ಮೋದಿ ಜೀ ಅವರಿಗೆ ಪ್ರೇಮ ಬರಲಿಲ್ವಾ?
@INCIndia ನವರು ಮಾಡಿದರೆ ಒಂದು ವ್ಯಾಖ್ಯಾನ, ಮೋದಿ ಜೀ ಅವರು ಮಾಡಿದರೆ ಮಾತ್ರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ವ್ಯಾಖ್ಯಾನವೇ? ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ “ಸೌಗಾತ್-ಎ ಮೋದಿ” ಅಭಿಯಾನದ ಮೂಲಕ ಈದ್ ಗೆ ವಿತರಿಸುತ್ತಿರುವ ಕಿಟ್ ಗಳು, ಹಿಂದೂ ಹಬ್ಬಕ್ಕೆ ಹಿಂದೂಗಳಿಗೆ ವಿತರಿಸಲು ಸಾಧ್ಯವಾಗದಿರುವುದಕ್ಕೆ? ಬಿಜೆಪಿ ಅವರ ಬಳಿ ಉತ್ತರವಿದೆಯೇ??
– ರಾಮಲಿಂಗಾರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಸಚಿವ




