ಈ ಕಾಲ್ದಲ್ಲಿ ಜಾತಿಗೀತಿ ಎಲ್ಲಿದೇರಿ? ಎನ್ನುವವರು ಎಲ್ಲಿದ್ದಾರೆ ಗೊತ್ತೇ?
ಜಾತಿಗೀತಿ
‘ಈ ಕಾಲ್ದಲ್ಲಿ ಜಾತಿಗೀತಿ ಎಲ್ಲಿದೇರಿ? ಮೇಲ್ಜಾತಿ, ಕೆಳಜಾತಿ ಅನ್ನೋದು ಈಗ ಉಳಿದಿಲ್ಲ ಕಣ್ರಿ. ಜನ ಜಾತಿಯನ್ನೆ ಮರೆತ್ಬಿಟ್ಟಿದಾರೆ. ನಾನಂತೂ ಜಾತಿ ನಂಬಲ್ಲ’….. ಇತ್ಯಾದಿತ್ಯಾದಿಯಾಗಿ ಮಾತಾಡುತ್ತಿದ್ದ ಸುಭಗರೇ ಈಗ ಜಾತಿಗಣತಿಯ ವಿರುದ್ಧ ಅಬ್ಬರಿಸುತ್ತಿದ್ದಾರೆ. ಸರ್ಕಾರವನ್ನೇ ಬೀಳಿಸಿಬಿಡ್ತೀವಿ, ರಾಜ್ಯವನ್ನೆ ಬಂದ್ ಮಾಡ್ತೀವಿ ಅನ್ನೋ ಫ್ಯೂಡಲ್ ಭಾಷೆ ಬಳಸುತ್ತಿದ್ದಾರೆ. ಇದರರ್ಥ ಇಷ್ಟೆ, ಜಾತಿ ಇತ್ತು, ಇದೆ ಮತ್ತು ಇರಲಿದೆ. ಜಾತಿಯ ಸಂತ್ರಸ್ತರನ್ನು ಯಾಮಾರಿಸಲು ಜಾತಿಯ ಫಲಾನುಭವಿಗಳು ಈ ಕಾಲ್ದಲ್ಲಿ ಜಾತಿಗೀತಿ ಎಲ್ಲಿದೇರಿ? ಅನ್ನೊ ಸುಭಗ ಮಾತುಗಳನ್ನಾಡುತ್ತಾರಷ್ಟೆ. ವಿಪರ್ಯಾಸವೇನು ಗೊತ್ತಾ, ಸೋಕಾಲ್ಡ್ ಮೇಲ್ಜಾತಿ ಜನಗಳಿಗೆ ಅನುಕೂಲವಾಗುವ ಆರ್ಥಿಕ ಮೀಸಲಾತಿ ಅರ್ಥಾತ್ 10% ಇ.ಡಬ್ಲ್ಯು.ಎಸ್. ಮೀಸಲಾತಿಯನ್ನು ಬಿಜೆಪಿ ಸರ್ಕಾರ ಸಮರ್ಪಕ ಚರ್ಚೆಯೇ ಇಲ್ಲದೆ ಅಸಂವಿಧಾನಿಕವಾಗಿ ಜಾರಿಗೆ ತಂದಾಗ ಈ ದೇಶ ತುಟಿಬಿಚ್ಚಲಿಲ್ಲ. ಆದ್ರೆ, ದಲಿತರು-ಒಬಿಸಿಗಳು ಈಗ ಹೊಸ ಮೀಸಲಾತಿಯನ್ನೇನು ಕೇಳ್ತಾ ಇಲ್ಲ, ಜಸ್ಟ್ ನಮ್ಮ ಜನಸಂಖ್ಯೆ ಮತ್ತು ಸ್ಥಿತಿಗತಿ ತಿಳ್ಕೊತೀವಿ ಅಂತಿದಾರೆ. ಅಷ್ಟಕ್ಕೇ ಫ್ಯೂಡಲ್ ಜಾತಿಗಳು ಸರ್ಕಾರಕ್ಕೇ ಧಮ್ಕಿ ಹಾಕ್ತಿವೆ. ಇದ್ರಲ್ಲೇ ಅರ್ಥ ಆಗಲ್ವಾ, ಜಾತಿ ಅನ್ನೋದು ಈ ಕಾಲದಲ್ಲೂ ಎಷ್ಟು ಇಂಟಿಗ್ರೇಟೆಡ್ ಆಗಿ ತನ್ನ ಪ್ರೆಸೆನ್ಸ್ ಉಳಿಸ್ಕೊಂಡಿದೆ ಅಂತ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
‘ಇಕ್ಕುರ್ಲಾ ಓದಿರಲಾ ಈ ನನ್ನ ಮಕ್ಕಳ ಚರ್ಮ ಎಬ್ಬುರ್ಲಾ’ ಎಂದು ತಿರುಗಿಬಿದ್ದಿದ್ದ ನಮ್ಮನ್ನು ನಯವಾಗಿ ಸಂಭಾಳಿಸಿ ಸತ್ಯನಾರಾಯಣ ಪೂಜೆ ಮಾಡುತ್ತಾ ಕೂರುವಂತೆ ಮಾಡಲು ಹೀಗೆ ತಲೆನೇವರಿಸಿ ‘ಈ ಕಾಲ್ದಲ್ಲಿ ಜಾತಿಗೀತಿ ಇಲ್ಲ ಕಣ್ರಿ’ ಎಂದು ಯಾಮಾರಿಸುತ್ತಾ ಬಂದರು. ಈಗ ಅವರೊಳಗಿನ ಜಾತಿ ಹೊರಬಂದಿದೆ. ಈಗ ನಾವೇನು ಮಾಡಬೇಕು? ತುರ್ತಾಗಿ ಕೇಳಿಕೊಳ್ಳಬೇಕಿರುವ ಪ್ರಶ್ನೆ ಇದು. ಫ್ಯೂಡಲ್ ಜಾತಿಯವರಂತೆ ಧ್ವನಿ ಬಿಚ್ಚುವುದು, ಧಮ್ಕಿ ಹಾಕುವುದು ನಮಗೆ ಸ್ವಲ್ಪ ಕಷ್ಟವಿರಬಹುದು. ಆದರೆ, ಭಿನ್ನತೆಗಳನ್ನು ಬದಿಗಿರಿಸಿ ಒಗ್ಗೂಡುವುದು ಅಸಾಧ್ಯವೇನಲ್ಲ. ಒಗ್ಗೂಡಲೇಬೇಕು. Now or Never….
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




