ಸ್ಪೂರ್ತಿ ತರಬೇತಿ ಕೇಂದ್ರದಲ್ಲಿ ವೀಲ್ ಚೇರ್ ವಿತರಣೆ

3 years ago

#Distribution #wheelchairs #SpurtiTrainingCentre

ವಿಕಲಚೇತನರು ಆರ್ಥಿಕ ಸ್ವಾವಲಂಬಿಗಳಾಗಬೇಕು: ಲೋಕೇಶ್

ಚಿತ್ರದುರ್ಗ: ವಿಕಲಚೇತನರು ಸ್ವಾಭಿಮಾನಿ, ಆರ್ಥಿಕ ಸ್ವಾವಲಂಬಿ ಬದುಕು ರೂಪಿಸಿಕೊಂಡರೆ ಸಮಾಜದಲ್ಲಿ ಸಮಾನವಾಗಿ ಬದುಕು ಕಟ್ಟಿಕೊಳ್ಳಬಹುದು ಎಂದು ಲೋಕೇಶ್ ಹೇಳಿದರು.

ಸ್ಪೂರ್ತಿ ವಿಕಲಚೇತನರ ಟ್ರಸ್ಟ್( ರಿ) ಮತ್ತು ಬೆಂಗಳೂರು ಪ್ರಗತಿ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನ ಮಕ್ಕಳಿಗೆ ವೀಲ್ ಚೇರ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸ್ಪೂರ್ತಿ ಸಂಸ್ಥೆ ವಿಕಲಚೇತನರಿಗಾಗಿ ಹಲವು ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸುತ್ತಿರುವುದು ಅತ್ಯುತ್ತಮ ಬೆಳವಣಿಗೆ ಎಂದರು.

ಸರ್ಕಾರದ ವತಿಯಿಂದ ವಿಕಲಚೇತನರ ಕಲ್ಯಾಣಕ್ಕೆ ಹಲವು ಯೋಜನೆ ರೂಪಿಸಲಾಗಿದ್ದು, ಸಂಘ, ಸಂಸ್ಥೆಗಳು ಸರ್ಕಾರಿ ಯೋಜನೆಗಳನ್ನು ಬಳಕೆ ಮಾಡಿಕೊಂಡು ವಿಕಲಚೇತನ ಅಭಿವೃದ್ಧಿಗಾಗಿ ಶ್ರಮಿಸಲು ಸಲಹೆ ನೀಡಿದರು.

ಸ್ಪೂರ್ತಿ ವಿಕಲಚೇತನರ ಟ್ರಸ್ಟ್ ಅಧ್ಯಕ್ಷ ತಿಪ್ಪಮ್ಮ ಮಾತನಾಡಿ, ಬೆಂಗಳೂರು ಪ್ರಗತಿ ಚಾರಿಟೇಬಲ್ ಟ್ರಸ್ಟ್ ನೆರವಿನೊಂದಿಗೆ ವೀಲ್ ಚೇರ್ ವಿತರಣೆ ಮಾಡಲಾಗುತ್ತಿದ್ದು, ಕಳೆದ ಐದಾರು ವರ್ಷಗಳಿಂದ ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಮಾಡಿಕೊಂಡು ಬರಲಾಗಿದೆ. ಹಾಗೆಯೇ ಕೋವಿಡ್ ಸಂದರ್ಭದಲ್ಲಿ ರೇಷನ್ ಕಿಟ್ ವಿತರಣೆ, ವ್ಯಾಕ್ಸಿನೇಷನ್‌ ನಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿಕಲಚೇತನರಿಗಾಗಿ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ವಿಕಲಚೇತನರಿಗೆ ತರಬೇತಿ ನೀಡಿ ಜಾಬ್ ಪ್ಲೇಸ್ ಮೆಂಟ್ ಮಾಡಲಾಗಿದೆ ಎಂದರು.

ವೀಲ್ ಚೇರ್ ವಿತರಣಾ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ACDOP ದಾಸಪ್ಪ, ಸಹಕಾರಿ ಪತ್ತಿನ ಬ್ಯಾಂಕ್ CEO ರಾಮಸ್ವಾಮಿ, ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಶೃತಿ, ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸುಮಾರು 25 ರಿಂದ 30 ಕ್ಕೂ ಹೆಚ್ಚು ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಮಾಡಲಾಯಿತು.

Leave a Reply