ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಮೂಲಕ ಬಿಜೆಪಿ ಇಂದು ಅನಧೀಕೃತ ತುರ್ತುಸ್ಥಿತಿ ಘೋಷಿಸಿದಂತಿದೆ: ಸತೀಶ್ ಜಾರಕಿಹೊಳಿ

3 years ago

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಇತಿಹಾಸದಲ್ಲಿ ಇಂದು ಅತ್ಯಂತ ಕರಾಳ ದಿನವಾಗಿದೆ. Rahul Gandhi ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಮೂಲಕ ಬಿಜೆಪಿಯವರು ಇಂದು ಅನಧೀಕೃತ ತುರ್ತುಸ್ಥಿತಿ ಘೋಷಿಸಿದಂತಿದೆ, ಸತ್ಯವನ್ನು ಎದುರಿಸಲಾಗದೆ ತನ್ನ ಹೇಡಿತನವನ್ನು ಜಗಜ್ಜಾಹೀರ ಮಾಡಿದೆ.

ರಾಹುಲ್ ಗಾಂಧಿ ಅವರನ್ನು ತುರ್ತಾಗಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ನ್ಯಾಯಾಂಗ ಮತ್ತು ಶಾಸಕಾಂಗದ ನಿಯಮಾವಳಿಗೆ ವಿರುದ್ಧವಾಗಿದೆ. ಯಾವುದೇ ವ್ತಕ್ತಿಯ ವಿರುದ್ದ ನ್ಯಾಯಾಲಯ ತೀರ್ಪು ನೀಡಿದರೆ ಅಥವಾ ಶಿಕ್ಷೆಗೆ ಒಳಪಡಿಸಿದರೆ ಅವರಿಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ಇರುತ್ತದೆ. ರಾಹುಲ್ ಗಾಂಧಿಗೆ ಎರಡು ವರ್ಷದ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯವೇ “ಆದೇಶ ಪ್ರತಿ ಕೈ ಸೇರಿದ 30 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಯವರೆಗೆ ಜಾಮೀನು ಮಂಜೂರು ಮಾಡಲಾಗಿದೆ” ಎಂದು ಆದೇಶ ನೀಡಿದೆ.

ಇನ್ನೂ ನ್ಯಾಯಾಲಯದ ಆದೇಶದ ಸರ್ಟಿಫೈಡ್ ಪ್ರತಿ ರಾಹುಲ್ ಗಾಂಧಿ‌ ಅವರಿಗೆ ಲಭ್ಯವಾಗಿಲ್ಲ. ಸರ್ಟಿಫೈಡ್ ಕಾಪಿ ಬಂದ ಬಳಿಕವಷ್ಟೇ ರಾಹುಲ್ ಮೇಲ್ಮನವಿ ಸಲ್ಲಿಸಬಹುದು. 30 ದಿನಗಳ ಬಳಿಕವೂ ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸದೇ ಇದ್ದರೆ ಮಾತ್ರ ಸರ್ಟಿಫೈಡ್ ಕಾಪಿ ಪಡೆದುಕೊಂಡು ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಬಹುದು.
ಆದರೆ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ತುರ್ತಾಗಿ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕಿದೆ. ಅದಕ್ಕಾಗಿ ಅಡ್ಡದಾರಿ ಹಿಡಿಯಲಾಗಿದೆ. ಇಂತಹ ದ್ವೇಷದ, ಅನೈತಿಕ ರಾಜಕಾರಣ ನಮ್ಮ ತಲೆಮಾರು ನೋಡುತ್ತಿರುವುದು ಇದೇ ಮೊದಲು.

ಈ‌ ದೇಶದ ಪ್ರಜ್ಞಾವಂತ ಜನರು ಬಿಜೆಪಿಯ ಈ ಅನೈತಿಕ ರಾಜಾರಣವನ್ನು ಖಂಡಿಸುತ್ತಿದ್ದಾರೆ. ಭಾರತದ ಮೂಲೆ ಮೂಲೆಗಳಿಂದ ರಾಹುಲ ಗಾಂಧಿ ಅವರಿಗೆ ಬೆಂಬಲ ದೊರೆಯುತ್ತಿದೆ. ಕಾಂಗ್ರೆಸ್ ಪಕ್ಷದವರು ಬ್ರಿಟಿಷ್ ಸಾಮ್ರಾಜ್ಯದ ಎದುರು ಹಿಂಜರಿಯಲಿಲ್ಲ ಈಗ ಇವರ ಹಿಂದೆ ಹಿಂಜರಿಯುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ರಾಹುಲ ಗಾಂಧಿ ಅವರೊಂದಿಗೆ ನಿಲ್ಲುತ್ತೇವೆ.

-ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ

Leave a Reply