ಮಹಾರಾಷ್ಟ್ರ ಚುನಾವಣೆಯಲ್ಲಿ ನಡೆದ ವಂಚನೆಯ ಕುರಿತು ಶ್ರೀ Rahul Gandhi ಯವರು ಇತ್ತೀಚಿಗೆ ಬಯಲಿಗೆಳೆದ ಅಂಶಗಳಿಂದ ಪ್ರೇರಿತವಾಗಿ ಚುನಾವಣಾ ಸಮಗ್ರತೆಯ ಕುರಿತು ನಡೆಯುತ್ತಿರುವ ಮತ್ತು ಅತ್ಯಂತ ಅಗತ್ಯವಾದ ಚರ್ಚೆಯ ದೃಷ್ಟಿಯಿಂದ, ಕಳೆದ ವರ್ಷದ ಕೊನೆಯಲ್ಲಿ ಚುನಾವಣಾ ಆಯೋಗದೊಂದಿಗೆ ನಾನು ಔಪಚಾರಿಕವಾಗಿ ಎತ್ತಿದ್ದ ಕಳವಳಗಳು ಹಾಗೂ ಸಂಭಾವ್ಯ ಪರಿಹಾರಗಳನ್ನು ಹಂಚಿಕೊಳ್ಳುವುದು ಸಕಾಲಿಕವೆಂದು ನಾನು ಭಾವಿಸಿದ್ದೇನೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
2024ರ ಡಿಸೆಂಬರ್ 3ರಂದು ಆಯುಕ್ತರಿಗೆ ನಾನು ಬರೆದ ಪತ್ರದಲ್ಲಿ, ಹೊಂದಾಣಿಕೆಯಾಗದ ಮತ ಎಣಿಕೆಗಳು ಮತ್ತು ಮತದಾರರ ಪಟ್ಟಿಯಲ್ಲಿನ ಅಸಂಗತತೆಗಳಿಂದ ಹಿಡಿದು ಮತದಾನದ ಅಸಮಂಜಸ ಶೇಕಡಾವಾರು ಲೆಕ್ಕಾಚಾರ, ಕಾಣೆಯಾದ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳು ಹಾಗೂ ನಿಯಂತ್ರಣ ಘಟಕಗಳಲ್ಲಿನ ದುರ್ಬಲತೆಗಳವರೆಗೆ ಹಲವಾರು ಸಂಬಂಧಿತ ಉದಾಹರಣೆಗಳನ್ನು ವಿವರಿಸಿದ್ದೇನೆ. ಚುನಾವಣಾ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕುವ ಕಾರ್ಯವಿಧಾನದ ಅಂತರಗಳನ್ನು ಸಹ ನಾನು ಗುರುತಿಸಿದ್ದೆ.
ಈ ಸಮಸ್ಯೆಗಳನ್ನು ಪರಿಹರಿಸಲು, ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಮತ್ತು ಪ್ರತಿಷ್ಠಿತ ಖಾಸಗಿ ತಂತ್ರಜ್ಞಾನ ಸಂಶೋಧನೆ ಹಾಗೂ ಅಭಿವೃದ್ಧಿ ಪರಿಣತರನ್ನು ಒಳಗೊಂಡ ಇವಿಎಂಗಳ ಕಠಿಣ ತಾಂತ್ರಿಕ ಲೆಕ್ಕಪರಿಶೋಧನೆಯಾದ ನೈತಿಕ ಹ್ಯಾಕಥಾನ್ ಅನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಕರ್ನಾಟಕ ಸರ್ಕಾರದ ಪರವಾಗಿ ನಾವು ಪ್ರಸ್ತಾಪಿಸಿದ್ದೇವೆ. ಕರ್ನಾಟಕವು ವಿಶ್ವದ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್‌ಗೆ ನೆಲೆಯಾಗಿದೆ ಮತ್ತು ನಮ್ಮ ಇಕೋ ಸ್ಟಿಸ್ಟಂ ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್‌ನಿಂದ ಮತ ಮುದ್ರಣ ಮತ್ತು ಎಣಿಕೆಯವರೆಗೆ ಸಂಪೂರ್ಣ ಇವಿಎಂ ರಚನೆಯನ್ನು ನ್ಯಾಯಾಂಗ ಮತ್ತು ಶೈಕ್ಷಣಿಕ ಮೇಲ್ವಿಚಾರಣೆಯಲ್ಲಿ ಪರೀಕ್ಷಿಸಲು ಸೂಕ್ತವಾದ ಸ್ಥಾನದಲ್ಲಿದೆ.
ಆದರೆ, ಈ ಪ್ರಸ್ತಾವನೆಗೆ ಇಸಿಐ ಇನ್ನೂ ಪ್ರತಿಕ್ರಿಯಿಸದಿರುವುದು ನಿರಾಶಾದಾಯಕವಾಗಿದೆ. ಆಯೋಗವು ತುರ್ತಾಗಿ ಕಾರ್ಯನಿರ್ವಹಿಸಬೇಕು ಮತ್ತು ನಾವು ಪ್ರಾಮಾಣಿಕ ನಂಬಿಕೆಯಿಂದ ಮಾಡಿರುವ ಲೆಕ್ಕಪರಿಶೋಧನೆಯ ಕೋರಿಕೆಗೆ ಮನ್ನಣೆ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ.
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ







