ಹಾಸನದಲ್ಲಿ ಜೂನ್ 12 ರಂದು ನೇರ ಸಂದರ್ಶನ

1 year ago

ಹಾಸನ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಮತ್ತು ಜೆಕೆ ಟೈರ್ & ಇಂಡಸ್ಟ್ರೀಸ್ ಲಿಮಿಟೆಡ್, ಮೈಸೂರು (JK Tyre & Industries Ltd., Mysore) ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಯೋಗ ನೀಡುವ ಸಂಬಂಧ ಜೂನ್.12 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರೈಲ್ವೇ ಸ್ಟೇಷನ್ ಹತ್ತಿರ, ಸರ್ಕಾರಿ ಐ.ಟಿ.ಐ. ಕಾಲೇಜು ಆವರಣ, ಹಾಸನ ಇಲ್ಲಿ ನೇರ ಸಂದರ್ಶನ ನಡೆಯಲಿದೆ.

ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ (ಯಾವುದೇ ಶಾಖೆ), ಡಿಪ್ಲೊಮಾ (ಯಾವುದೇ ಶಾಖೆ)ಪಾಸಾದ ಪುರುಷ/ಮಹಿಳಾ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು.

ದೂರವಾಣಿ ಸಂಖ್ಯೆ : 08172-296374, 9743144950, ಹಾಗೂ 8722606874 ರವರನ್ನು ಕಚೇರಿ ವೇಳೆಯಲ್ಲಿ ಮಾತ್ರ ಸಂಪರ್ಕಿಸಬಹುದು.

Leave a Reply