ಸಬ್ ಕಾ ಸಾತ್,ಸಬ್ ಕಾ ವಿಕಾಸ್ ಮೂಲಕ ಅಭಿವೃದ್ದಿ : ವಿ.ಸೋಮಣ್ಣ

4 years ago

ಬೆಂಗಳೂರು: ನರೇಂದ್ರಮೋದಿ ಅವರ 72ನೇ ವರ್ಷದ ಹುಟ್ಟುಹಬ್ದದ ಪ್ರಯುಕ್ತ ರೆಫರಲ್ ಆಸ್ಪತ್ರೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರು ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು

ವಿ.ಸೋಮಣ್ಣ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯಾದ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ತತ್ವವನ್ನು ಗೋವಿಂದರಾಜನಗರದಲ್ಲಿ ಆಳವಡಿಕೊಂಡು ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ಆರೋಗ್ಯ ಸೇವೆ ಪ್ರತಿಯೊಬ್ಬ ನಾಗರಿಕರಿಗೂ ಲಭ್ಯವಾಗಬೇಕು. ಆರೋಗ್ಯದ ರಕ್ಷಣೆಗೆ ಬೇಕಾದ ಸೌಲಭ್ಯಗಳು ಉಚಿತವಾಗಿ ಒದಗಿಸಬೇಕು ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 9ವಾರ್ಡ್ ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಕ್ಕರೆ ಖಾಯಿಲೆ,ಬಿ.ಪಿ, ರಕ್ತಪರೀಕ್ಷೆ ,ಮೂತ್ರ ಪರೀಕ್ಷೆ ಮತ್ತು ಇನ್ನಿತರ ಖಾಯಿಲೆಗಳಿಗೆ ಉಚಿತವಾಗಿ ಪರೀಕ್ಷೆ, ಔಷಧಿ ವಿತರಿಸಲಾಗುತ್ತಿದೆ ಹಾಗೂ ತಜ್ಞ ವೈದ್ಯರುಗಳು ಮತ್ತು ದಾದಿಯರನ್ನು ನೇಮಿಸಲಾಗಿದೆ ಎಂದರು.

ದಾಸರಹಳ್ಳಿ ವಾರ್ಡ್ ನಲ್ಲಿ 290 ಹಾಸಿಗೆ ಸಾಮ್ಯರ್ಥವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆರು ಅಪರೇಷನ್ ಥೀಯಟರ್,ಐ.ಸಿ.ಯು.ಸೌಲಭ್ಯ ಒದಗಿಸಲಾಗುತ್ತಿದೆ.ಪಂತರಪಾಳ್ಯದ ಹೈಟೆಕ್ ಆಸ್ಪತ್ರೆಯಲ್ಲಿ 40ಹಾಸಿಗೆ ಪ್ರಿಮೆಚ್ಯೂರ್ ಮಕ್ಕಳ ಚಿಕಿತ್ಯೆಗೆ ನಿರ್ಮಾಣ ಮಾಡಲಾಗುತ್ತಿದೆ,60ಹಾಸಿಗೆಯ ಕಿಡ್ನಿ ಡಯಾಲಿಸಿಸ್ ಸೆಂಟರ್ ಆರಂಭಿಸಲಾಗಿದೆ.ಬಿ.ಪಿ.ಎಲ್.ಕಾರ್ಡ್ ದಾರರಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ಲಭ್ಯವಿದೆ ಎಂದು ತಿಳಿಸಿದರು.

ಬಡತನ ಶಾಶ್ವತವಲ್ಲ ,ಬಡತನ ನಿವಾರಣೆಗೆ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಬೇಕು.ಶಿಕ್ಷಣಕ್ಕೆ ಆದ್ಯತೆ ನೀಡಿ ಮಾಗಡಿ ರೋಡ್ ಪೊಲೀಸ್ ಠಾಣೆ ಹಿಂಭಾಗದಲ್ಲಿ ಹೈಟೆಕ್ ಶಾಲೆ ಮತ್ತು ಅರುಂದತಿ ನಗರ,ಮಾನಸ ನಗರ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಉರ್ದು ಶಾಲೆ ನವೀಕರಣ ಮಾಡಲಾಗುತ್ತಿದೆ.50ಕ್ಕೂ ಹೆಚ್ಚು ಉದ್ಯಾನವನಗಳ ನವೀಕರಣ,ಉನ್ನತೀಕರಣ ಮಾಡಲಾಗಿದೆ ಎಂದರು.

ಪ್ರತಿಯೊಂದು ರಸ್ತೆಗಳಿಗೆ ಮಾದರಿ ರಸ್ತೆ, ಹೈಟೆಕ್ ಪಾದಚಾರಿ ಮಾರ್ಗ ಮತ್ತು ಕುಡಿಯುವ ನೀರಿನ ಸಮಸ್ಯೆಗೆ 70ಕ್ಕೂ ಹೆಚ್ಚು ಶುದ್ದ ಕುಡಿಯುವ ನೀರಿನ ಘಟಕ ಮತ್ತು 9000ಸಾವಿರ ಕುಟುಂಬಗಳಿಗೆ ಕಾವೇರಿ ನೀರು ಸರಾಬರಾಜಿಗೆ ಜಲಸಂಗ್ರಾಹಕ ಕೇಂದ್ರ, ಪ್ರಧಾನಮಂತ್ರಿ ಆವಾಸ್ ಯೋಜನೆ ಅನುದಾನದ ಅಡಿಯಲ್ಲಿ ಲಕ್ಷಾಂತರ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಜನಸಾಮಾನ್ಯರನ್ನ ಸಬ್ ಕಾ ಸಾತ್,ಸಬ್ ಕಾ ವಿಕಾಸ್ ಮೂಲಕ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.

Leave a Reply