ಸಾವಿತ್ರಿ ಬಾಯಿ ಫುಲೆ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆ ಎಂದು ಘೋಷಿಸಿ: ಸತೀಶ್ ಜಾರಕಿಹೊಳಿ

3 years ago

#Declare #SavitriBaiPhule #birthday #LadyTeachersDay #SatishJarakiholi #education #women

ಬೆಂಗಳೂರು: ಸಾವಿತ್ರಿ ಬಾಯಿ ಫುಲೆ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆ ಎಂದು ಘೋಷಿಸಬೇಕು ಎಂದು ಸತೀಶ್ ಜಾರಕಿಹೊಳಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಅವರು, ಮಾತೆ ಸಾವಿತ್ರಿಬಾಯಿ ಫುಲೆ ಇವರನ್ನು ಆಧುನಿಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂದು ಗುರುತಿಸಲಾಗಿದೆ. ಇವರು 3 ಜನೆವರಿ 1831ರಲ್ಲಿ ಮಹಾರಾಷ್ಟ್ರ ಸಾತಾರ ಜಿಲ್ಲೆಯಲ್ಲಿ ನೈಗಾಂವನಲ್ಲಿ ಜನಿಸಿದರು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾ ಫುಲೆ ಅವರಿಗೆ ಸಲ್ಲಬೇಕು. 1847ರಲ್ಲಿ ಇವರು ಶ್ರೀಮತಿ ಮಿಚೆಲ್ ಅವರ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು. 1848ರಿಂದ 1852ರ ವರೆಗೆ 18 ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು. ಈ ಎಲ್ಲಾ ಸಾಧನೆಗಳನ್ನು ಗುರುತಿಸಿ, ಬ್ರಿಟಿಷ್ ಸರ್ಕಾರ “ಇಂಡಿಯಾ ಫಸ್ಟ್ ಲೇಡಿ ಟೀಚರ್” ಎಂಬ ಬಿರುದು ಕೊಟ್ಟಿತು ಎಂದು ಹೇಳಿದ್ದಾರೆ.

ಆದ್ದರಿಂದ ಇವರ ಜನ್ಮ ದಿನವಾದ ಜನವರಿ 3ನೇ ತಾರೀಖು “ಶಿಕ್ಷಕಿಯರ ದಿನಾಚಾರಣೆ”ಯನ್ನಾಗಿ ಘೋಷಣೆ ಮಾಡಿ ಸರ್ಕಾರದ ವತಿಯಿಂದ ಆಚರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ತಮ್ಮಲ್ಲಿ ವಿನಂತಿಸಿದ್ದಾರೆ.

Leave a Reply