ಮಾನ್ಯ ಛಲವಾದಿ ನಾರಾಯಣಸ್ವಾಮಿಯವರು ನನ್ನ ಬಗ್ಗೆ ಬಗೆಬಗೆಯ ಮಾತುಗಳನ್ನಾಡಿದ್ದಾರೆ. ಬಹುಶಃ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ನನ್ನ ಬಗ್ಗೆ ಮಾತನಾಡುವುದು ಅವರಿಗೆ ಅನಿವಾರ್ಯ. ನನ್ನ ಕುರಿತು ಮಾತನಾಡುವುದನ್ನು ನಿಲ್ಲಿಸಿದ ದಿನವೇ ಅವರ ರಾಜಕೀಯದ ಕೊನೆಯ ದಿನವಾಗುತ್ತದೆ!
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
RSS ನವರ ಚಡ್ಡಿಗಳನ್ನು ತಲೆ ಮೇಲೆ ಹೊತ್ತು ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಬದಲು, ನನ್ನ ತಂದೆಯವರ ಸೈದ್ಧಾಂತಿಕ ನೆರಳಿನಲ್ಲಿ ಮುಂದುವರೆಯುವುದು ಅತ್ಯಂತ ಗೌರವಯುತ ರಾಜಕಾರಣ ಎಂದು ಭಾವಿಸಿದ್ದೇನೆ.
ವಂಶಪರಂಪರೆಯ ರಾಜಕಾರಣದ ಬಗ್ಗೆ ಮಾತನಾಡಲೇಬೇಕು ಎಂದಿದ್ದರೆ, ತಮ್ಮದೇ ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾದ ಅರವಿಂದ್ ಬೆಲ್ಲದ್ ಅವರಿಂದ ಮಾತನಾಡಲು ಶುರು ಮಾಡಲಿ. ಆ ಧೈರ್ಯ ನಾರಾಯಣಸ್ವಾಮಿಯವರಿಗಿದೆಯೇ?
ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ, ದಲಿತತ್ವ ಎಂದರೆ ಸ್ವಾಭಿಮಾನ, ದಲಿತತ್ವ ಎಂದರೆ ಅನ್ಯಾಯಕ್ಕೆ ಪ್ರತಿರೋಧ, ದಲಿತತ್ವ ಎಂದರೆ ಆತ್ಮಬಲ.
ದಲಿತತ್ವದ ಸ್ವಾಭಿಮಾನವನ್ನು ಆರ್ಎಸ್ಎಸ್ನವರ ಚಡ್ಡಿಗಳಿಗೆ ಅಡ ಇಟ್ಟವರು, ದಲಿತತ್ವದ ಪಾಠ ಹೇಳುವುದು ಕುಚೋದ್ಯವಲ್ಲದೆ ಇನ್ನೇನು!
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ




