ದಲಿತ ಸಮುದಾಯ ಒಗ್ಗಟ್ಟಾದರೆ ಸಮಾಜದ ಅಭಿವೃದ್ಧಿ: ಎಂ.ವೆಂಕಟಸ್ವಾಮಿ

5 years ago

ಬೆಂಗಳೂರು: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ 130ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ದಲಿತ ಸಮುದಾಯದ ಎಲ್ಲರು ಒಗ್ಗಟ್ಟಾಗಿ, ಒಂದಾಗಿ ಸಂಘಟನೆಯಾದರೆ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಆರ್.ಪಿ.ಐ. ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಅಭಿಪ್ರಾಯಪಟ್ಟರು.

ವಿಶ್ವಕ್ಕೆ ಶಾಂತಿ ಧರ್ಮ ಬೋಧಿಸಿದ ಬುದ್ದ ಧರ್ಮ ಆಳವಡಿಸಿಕೊಳ್ಳಿ. ಇದರಿಂದ ಗುಲಾಮಗಿರಿ ಹೋಗುತ್ತದೆ. ಈ ಬಾರಿ ಕೊವಿಡ್ ಸಾಂಕ್ರಮಿಕ ಕಾರಣದಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರಕಾಯ್ದುಕೊಂಡು ಬಾಬಾ ಸಾಹೇಬ್ ಅವರ ಹುಟ್ಟು ಹಬ್ಬ ಅಚರಿಸಲು ಸರ್ಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಭಾರತರತ್ನ ಡಾ.ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ 130ನೇ ಹುಟ್ಟುಹಬ್ಬದ ಅಚರಣೆ ಪ್ರಯುಕ್ತ ಶೋಷಿತರ ಸಮಾಗಮ, ಸಂವಾದ ಕಾರ್ಯಕ್ರಮವನ್ನು ರಾಜಾಜಿನಗರ ಡಾ.ಭೀಮರಾವ್ ಪ್ಯಾಲೇಸ್ ಏರ್ಪಡಿಸಲಾಗಿತ್ತು.

ಎಂ.ವೆಂಕಟಸ್ವಾಮಿ, ಛಲವಾದಿ ಮಹಸಭಾ ಅಧ್ಯಕ್ಷ ಬಿದರಹಳ್ಳಿ ಮಹದೇವಸ್ವಾಮಿ, ಕನ್ನಡ ಪರ ಹೋರಟಗಾರ ಎಂ.ತಿಮ್ಮಯ್ಯ, ಪಾಲನೇತ್ರ, ಹಿರಿಯ ಪತ್ರಕರ್ತ ಶಾಂತರಾಜು, ಕೊಳಚೆ ನಿರ್ಮೂಲನ ಮಂಡಳಿ ಅಧ್ಯಕ್ಷ ಕ್ರಾಂತಿರಾಜು, ಡಾ.ಗೋವಿಂದ್, ವಿಜಯಕುಮಾರ್, ಕೇಶವ್ ಮೊದಲಾದವರು ದೀಪ ಬೆಳಗಿಸಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Leave a Reply