ಅಕ್ಟೋಬರ್ 31ರಂದು CPIM ಮಂಗಳೂರು ನಗರ ಉತ್ತರ ಸಮ್ಮೇಳನ

4 years ago

ಮಂಗಳೂರು: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮಂಗಳೂರು ನಗರ ಸಮ್ಮೇಳನವು 31-10-2021ರಂದು ಭಾನುವಾರ ಬೆಳಿಗ್ಗೆ 9ಕ್ಕೆ ಕೂಳೂರು ಬಳಿಯಲ್ಲಿರುವ ವಿಶ್ವರಾಜ್ ಹಾಲ್ ನಲ್ಲಿ ಜರುಗಲಿದೆ ಎಂದು CPIM ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಸಮ್ಮೇಳನವನ್ನು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ರವರು ಉದ್ಘಾಟಿಸಲಿದ್ದು, ಸಭೆಯ ಅಧ್ಯಕ್ಷತೆಯನ್ನು CPIM ಮಂಗಳೂರು ನಗರ ಉತ್ತರ ಸಮಿತಿ ಕಾರ್ಯದರ್ಶಿ ದಯಾನಂದ ಶೆಟ್ಟಿ ವಹಿಸಲಿದ್ದಾರೆ. ಪ್ರಾರಂಭದಲ್ಲಿ CPIM ಹಿರಿಯ ಸದಸ್ಯ ನಾರಾಯಣ ಕೊಂಚಾಡಿಯವರು ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.

ದುಡಿಯುವ ವರ್ಗದ ಚಳುವಳಿಗಾಗಿ ಅವಿಶ್ರಾಂತವಾಗಿ ದುಡಿದ ಪಕ್ಷದ ಹಿರಿಯ ಸದಸ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ. ಸಮ್ಮೇಳನ ನಡೆಯುವ ಸ್ಥಳಕ್ಕೆ ಕಾಂ.ಬಿ.ಮಾಧವ ವೇದಿಕೆ, ಕಾಂ.ಶೇಷಗಿರಿರಾವ್ ನಗರ ಎಂದೂ, ಬಹಿರಂಗ ಸಭೆ ನಡೆಯುವ ಸ್ಥಳಕ್ಕೆ ಕಾಂ.ಹರಿಶ್ಚಂದ್ರ ರಾವ್ ವೇದಿಕೆ, ಕಾಂ.ಉಮೇಶ್ ಶ್ರೀಯಾನ್ ನಗರ ಎಂದು ನಾಮಕರಣ ಮಾಡಲಾಗಿದೆ.

ಉದ್ಘಾಟನಾ ಸಮಾರಂಭದ ಬಳಿಕ ಪ್ರತಿನಿಧಿ ಅಧಿವೇಶನ ಜರುಗಲಿದ್ದು, ಕಳೆದ 4 ವರ್ಷಗಳ ಅವಧಿಯಲ್ಲಿ ನಡೆದ ಚಳುವಳಿ ಹೋರಾಟಗಳ ಬಗ್ಗೆ ವಿಮರ್ಶೆ ನಡೆದು ಮುಂದಿನ ದಿನಗಳಲ್ಲಿ ಮಂಗಳೂರು ನಗರದಲ್ಲಿ ಪ್ರಬಲ ಜನಚಳುವಳಿಯನ್ನು ಕಟ್ಟಲು ಸಮ್ಮೇಳನ ನಾಂದಿ ಹಾಡಲಿದೆ. ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಲಿರುವ ಸಮ್ಮೇಳನ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಹೋರಾಟವನ್ನು ರೂಪಿಸಲಿದೆ. ಹಾಗೂ ನೂತನ ನಾಯಕತ್ವವನ್ನು ಆಯ್ಕೆಮಾಡಲಿದೆ.

ಸಂಜೆ 5 ಗಂಟೆಗೆ ಪಂಜಿಮೊಗರು ವಾರ್ಡಿನ ವಿದ್ಯಾನಗರ ಜಂಕ್ಷನ್ ನಲ್ಲಿ ಬಹಿರಂಗ ಸಬೆ ಜರುಗಲಿದ್ದು, ಮುಖ್ಯ ಭಾಷಣಕಾರರಾಗಿ DYFI ರಾಜ್ಯಾಧ್ಯಕ್ಷ, CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ ಹಾಗೂ ಇತರ ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ.

ಸಮ್ಮೇಳನ ಯಶಸ್ವಿಗೊಳಿಸಲು ಈಗಾಗಲೇ ಸ್ವಾಗತ ಸಮಿತಿ ರಚನೆಗೊಂಡಿದ್ದು, ಕಾರ್ಯಾಧ್ಯಕ್ಷರಾಗಿ ಅಹಮದ್ ಬಶೀರ್, ಅಧ್ಯಕ್ಷರಾಗಿ ಮುಸ್ತಾಫ, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಡಿಸೋಜ, ಖಜಾಂಚಿಯಾಗಿ ಶೆರೀಫ್ ಅ ರವರ ಮುಂದಾಳತ್ವದಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.

Leave a Reply