ಜಾಹಿರಾತು ನೀಡಿಕೆಯಲ್ಲಿ ಸರಕಾರದ ಜಾತಿ ತಾರತಮ್ಯ – ಸಿಪಿಐ(ಎಂ) ಖಂಡನೆ

3 years ago

ಬೆಂಗಳೂರು: ಕರ್ನಾಟಕ ಸರಕಾರ ತನ್ನ ಸಾಧದನೆಗಳನ್ನು ಪ್ರಚುರ ಪಡಿಸಲು ಮಾಧ್ಯಮಗಳಿಗೆ ನೀಡುವ ಜಾಹಿರಾತುಗಳಲ್ಲಿಯು, ಬ್ರಾಹ್ಮಣರ ಮಾಲೀಕತ್ವದಲ್ಲಿರುವ ಮಾಧ್ಯಮಗಳಿಗೆ ಪ್ರತಿ ತಿಂಗಳು ಎರಡು ಜಾಹಿರಾತು ನೀಡುವಂತೆ ಆದೇಶಿಸುವ ಮೂಲಕ ಜಾತಿ ತಾರತಮ್ಯ ಮೆರೆದಿರುವ, ಜಾತಿವಾದಿ ನೀತಿಯನ್ನು ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ ಮತ್ತು ಇದೊಂದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾದ ದುಷ್ಕೃತ್ಯವಾಗಿದ್ದು, ಕೂಡಲೇ ಅಂತಹ ತಾರತಮ್ಯ ನೀತಿಯನ್ನು ಮತ್ತು ಸುತ್ತೋಲೆಯನ್ನು ವಾಪಾಸು ಪಡೆಯುವಂತೆ ಬಲವಾಗಿ ಒತ್ತಾಯಿಸಿದೆ.

ಇದು, ಅದಾಗಲೇ ಜಾತಿ ತಾರತಮ್ಯವನ್ನು ಬಲಗೊಳಿಸುವ ನೀತಿಯನ್ನು ಜಾರಿಗೊಳಿಸಲು, ಕರ್ನಾಟಕ ರಾಜ್ಯ ಧಾರ್ಮಿಕ ಸ್ವಾತಂತ್ಯ ಸಂರಕ್ಷಣೆಯ ಸುಗ್ರಿವಾಜ್ಞೆಯನ್ನು ಹೊರಡಿಸಿರುವುದರ ಮುಂದುವರೆದ ಭಾಗವಾಗಿದೆ. ಈ ರಾಜ್ಯ ಸರಕಾರ ಕೇವಲ ಜಾತಿ ತಾರತಮ್ಯ ಎಸಗುತ್ತಿರುವುದು ಮಾತ್ರವಲ್ಲಾ, ಧಾರ್ಮಿಕ ತಾರತಮ್ಯವನ್ನು ಮುಂದುವರೆಸಿದೆ.

ಧಾರ್ಮಿಕ ದ್ವೇಷಕ್ಕೆ ಬಲಿಯಾದ ಹಿಂದುತ್ವವಾದಿ ಯುವಜನರಿಗೆ ನೀಡುತ್ತಿರುವ 25 ಲಕ್ಷ ರೂಗಳ ಪರಿಹಾರವನ್ನು ಅದೇ ರೀತಿ ಧಾರ್ಮುಮಿಕ ದ್ವೇಷಕ್ಕೆ ತುತ್ತಾದ ಮುಸ್ಲಿಂ ಯುವಕರ ಕುಟುಂಬಗಳಿಗೆ ಪರಿಹಾರ ನೀಡಲು ನಿರಾಕರಿಸುತ್ತಿದೆ. ಮಾತ್ರವಲ್ಲಾ, ಹಿಂದುತ್ವವಾದಿ ಕೊಲೆಗಡುಕರ ಮೇಲೆ ಕಠಿಣ ಕ್ರಮವಹಿಸದೇ ಮೀನ ಮೇಷ ಮಾಡುತ್ತಾ ನಿರಾಕರಿಸುತ್ತಿರುವುದು ಹಿಂದುತ್ವ ಮತಾಂಧರಿಗೆ ನೀಡುವ ಕುಮ್ಮಕ್ಕಾಗಿದೆ.

ಇಂತಹ ಎಲ್ಲ ಜಾತಿವಾದಿ ಹಾಗೂ ಕೋಮುವಾದಿ ತಾರತಮ್ಯವನ್ನು ಈ ಕೂಡಲೇ ನಿಲ್ಲಿಸುವಂತೆ ಸಿಪಿಐ(ಎಂ)  ಒತ್ತಾಯಿಸಿದೆ.

Leave a Reply