ದಕ್ಷಿಣ ಕನ್ನಡ: ಸುಳ್ಯ ಜಯನಗರ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಚುಚ್ಚುಮದ್ದು ಕಾರ್ಯಕ್ರಮವನ್ನು ನಡೆಸಲಾಯಿತು.
ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್ ಕೋಡಂಕೇರಿ, ಶಿಲ್ಪಾ ಸುದೇವ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ವಕೀಲ ಸೂರ್ಯನಾರಾಯಣ ಭಟ್ ಕೊಡಂಕೇರಿ ಪ್ರಥಮ ವ್ಯಾಕ್ಸಿನ್ ಚುಚ್ಚುಮದ್ದು ಪಡೆದುಕೊಳ್ಳುವ ಮೂಲಕ ಜನರಲ್ಲಿ ಧೈರ್ಯ ತುಂಬಿದರು.
ಈ ವೇಳೆ ಆರೋಗ್ಯ ಸಹಾಯಕಿಯರಾದ ಕನಕಾಂಗಿ, ಲೀಲಾವತಿ, ಶಶಿಕಲಾ, ಅಂಗನವಾಡಿ ಕಾರ್ಯಕರ್ತೆ ತಿರುಮಲೇಶ್ವರಿ, ಶಾಲಾ ಮುಖ್ಯೋಪಾಧ್ಯಾಯ ತೀರ್ಥರಾಮ ಅಡ್ಕಬಳೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಹಸೈನಾರ್ ಜಯನಗರ, ಸುಳ್ಯ ನಗರ ಪಂಚಾಯತ್ ಸಿಬ್ಬಂದಿ ಸುದೇವ್ ಹಾಗೂ ಸ್ಥಳೀಯರು ಹಾಜರಿದ್ದರು.
ಎಸ್.ಡಿ.ಎಂ.ಸಿ ಸಮಿತಿ ಸದಸ್ಯ ನವೀನ ಮಚ್ಚಾದೋ, ಸ್ಥಳೀಯರಾದ ಸುಂದರ ಕುತ್ಪಾಜೆ, ಶಾಲಾ ವಿದ್ಯಾರ್ಥಿಗಳಾದ ಮಹಮ್ಮದ್ ಶಫೀಕ್, ಅನಿಶ್ ಮಚ್ಚಾದೋ, ಮಹಮ್ಮದ್ ಶಾಹಿದ್ ಮೊದಲಾದವರು ಸಹಕಾರ ನೀಡಿದರು.



