ದೇಶ ಜಾಗತೀಕರಣ ನೀತಿ ಅಪ್ಪಿಕೊಂಡ ನಂತರ ಸಾಮಾಜಿಕ ವ್ಯವಸ್ಥೆ ಕೂಡ ಭ್ರಷ್ಟಗೊಂಡಿದೆ
ಭ್ರಷ್ಟಾಚಾರದಿಂದ ಬಾಧೆಗೊಳಗಾದ ದುಡಿಯುವ ಜನರು ಬಲಿಷ್ಠ ಚಳುವಳಿಯೊಂದಿಗೆ ಭ್ರಷ್ಟಾಚಾರದ ಬೇರುಗಳನ್ನು ನಾಶಗೊಳಿಸಬೇಕಾಗಿದೆ
ದೇಶದ ಮಹಾ ಜನತೆ ಬಿಜೆಪಿಗೆ ಬಹುಮತ ಕೊಡದೆ ದೊಡ್ಡ ಹೊಡೆತ ಕೊಟ್ಟಿದ್ದಾರೆ. ಮೋದಿಜಿ ಯವರು ಮೈತ್ರಿಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿ ಪಟ್ಟಕ್ಕೇರಿ ತಮ್ಮ ಹಿಂದಿನ ಎರಡನೆಯ ಅವಧಿಯ ಸರ್ಕಾರದ ನೀತಿಗಳನ್ನು ಮತ್ತಷ್ಟು ಉಗ್ರರೂಪದಲ್ಲಿ ಜಾರಿಗೊಳಿಸುತ್ತಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕಾರ್ಪೋರೆಟ್ ಸುಲಿಗೆಗೆ ಅನುಕೂಲ ಮಾಡಲು ಜುಲೈ 1-2024 ರಂದು ಮೂರು ಕ್ರಿಮಿನಲ್ ಕಾಯ್ದೆಗಳಿಗೆ ತಿದ್ದುಪಡಿ ತಂದು ಪ್ರಜಾಸತಾತ್ಮಕ ಹಕ್ಕುಗಳನ್ನು ದ್ವಂಸಗೊಳಿಸುತ್ತಿದ್ದಾರೆ.
ಈ ಕಾಯ್ದೆಗಳ ಜಾರಿಯಿಂದ ನೆಲ, ಜಲ, ಖನಿಜ ಸಂಪತ್ತು ಮತ್ತು ಜನತೆಯ ಹಕ್ಕುಗಳ ರಕ್ಷಣೆಗಾಗಿ ಹೋರಾಡುವವರನ್ನು ಬಗ್ಗು ಬಡಿಯಲು ಕೆಳ ಹಂತದ ಪೋಲಿಸ್ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ದೊರೆತಿದೆ.
RBI, SBI ಪೋಷಿತ ಸಂಸ್ಥೆಗಳ ಮೂಲಕ ಸರ್ವೆ ನಡೆಸಿ 10 ವರ್ಷಗಳಲ್ಲಿ ದೇಶದಲ್ಲಿ ಬಡತನ, ನಿರುದ್ಯೋಗ ಕಡಿಮೆಯಾಗಿದೆ ಮತ್ತು 8 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಸುಳ್ಳು ಪ್ರಚಾರ ನಡೆಸಲಾಗಿದೆ.
ದೇಶ ಹೊಸ ಆರ್ಥಿಕ ನೀತಿ ಹಾಗೂ ಜಾಗತೀಕರಣವನ್ನು ಅಪ್ಪಿಕೊಂಡ (1992-94) ನಂತರ ಭ್ರಷ್ಟಾಚಾರ ಸರ್ವೇ ಸಾಮಾನ್ಯ ಎನ್ನುವಂತಾಗಿದೆ.
ಕಾರ್ಪೋರೇಟ್ ಕಂಪನಿಗಳು ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುವ ನೀತಿಗಳಿಗಾಗಿ ಸರ್ಕಾರಿ ಯಂತ್ರಾಂಗವನ್ನು ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರಕ್ಕೆ ದೊಡ್ಡ ದಾರಿ ನಿರ್ಮಿಸಿದರು.
ಕಾಂಗ್ರೆಸ್ ಸರ್ಕಾದ ಅವಧಿಯ 2.G.ಜಿ ಸ್ಪೆಕ್ಟರಂ ಹಗಣದಿಂದ ಬಿಜೆಪಿಯ ಅವಧಿಯ (2024) ಚುನಾವಣೆ ಬಾಂಡ್ ಗಳ ಹಗರಣಗಳವರೆಗೆ ನಡೆದ ಸರಣೆ ಭ್ರಷ್ಟಾಚಾರಗಳು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ನೇರವಾಗಿ ಸಂಬಂಧಿಸಿವೆ.
ವಾಲ್ಮೀಕಿ ನಿಗಮದ 97 ಕೋಟಿ (187 ಕೋಟಿ ಭ್ರಷ್ಟಾಚಾರ ನಡೆದಿಲ್ಲವೆಂದು ಮುಖ್ಯಮಂತ್ರಿಗಳು ಹೇಳಿಕೊಂಡಿದ್ದಾರೆ) ಭ್ರಷ್ಟಾಚಾರವನ್ನು ಕಾರ್ಪೋರೇಟ್ ಕಂಪನಿಗಳ ರಾಜಕಾರಣದ ಹಿನ್ನೆಲೆಯಿಂದಲೆ ನೋಡಬೇಕಾಗಿದೆ.
ವಿವಿಧ ಜಾತಿ ಜನಾಂಗದ ಅಭಿವೃದ್ಧಿ ಹೆಸರಿನಲ್ಲಿ ಸ್ಥಾಪನೆಕೊಂಡಿರುವ ಎಲ್ಲಾ ನಿಗಮಗಳು (ಸಾವಿರಾರು ಕೋಟಿ) ಭ್ರಷ್ಟಾಚಾರದ ಕೂಪಗಳಾಗಿವೆ.
SC,ST ಜನಸಂಖ್ಯೆಗನುಗುಣವಾಗಿ ಬಜೆಟಿನಲ್ಲಿ ಹಣ ಮೀಸಲಿಡುವ ಕಾಯ್ದೆ ಜಾರಿಗೊಳಿಸಿ ದೇಶಕ್ಕೆ (ಆಂದ್ರಪ್ರದೇಶ, ತೆಲಾಂಗಾಣ ರಾಜ್ಯಗಳನ್ನು ಹೊರತುಪಡಿಸಿ )ಮಾದರಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯವರು, SCP TSP ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡಿದ್ದು ಸರಿಯಾದ ಬೆಳವಣಿಗೆಯಲ್ಲ.
ಈ ಕಾಯ್ದೆಯನ್ನು, ತಾವು ಅಧಿಕಾರ ನಡೆಸುವ ಯಾವ ರಾಜ್ಯದಲ್ಲೂ ಜಾರಿಗೆ ತರದ ಬಿಜೆಪಿ SC, ST ಜನಾಂಗದ ಕುರಿತು ಮೊಸಳೆ ಕಣ್ಣೀರು ಹರಿಸುತ್ತಿರುವುದು ಅತ್ಯಂತ ನಾಚಿಕೆಗೇಡು.
– ಡಿ.ಹೆಚ್.ಪೂಜಾರ, ರಾಜ್ಯ ಕಾರ್ಯದರ್ಶಿ, CPI(ML) ಮಾಸ್ ಲೈನ್ ಕರ್ನಾಟಕ ರಾಜ್ಯ ಸಮಿತಿ




