ಮಾಜಿ ಡಿಸಿಎಂ ಜಿ.ಪರಮೇಶ್ವರ ಅವರಿಗೆ ಅವಹೇಳನ: ತನಿಖೆ ಆರಂಭ

3 years ago

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಬಗ್ಗೆ ಅವಹೇಳನಕಾರಿ ವಿಡಿಯೋ ಪ್ರಸಾರ ಸಂಬಂಧ‌ ಪ್ರಕರಣ‌ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗದ ಪೊಲೀಸರು‌ ತನಿಖೆ ಚುರುಕುಗೊಳಿಸಿದ್ದಾರೆ‌.

ಫೇಸ್ಬುಕ್ ಹಾಗೂ ಯೂಟ್ಯೂಬ್ ಸೇರಿದಂತೆ‌ ಸಾಮಾಜಿಕ‌ ಜಾಲತಾಣದಲ್ಲಿ‌ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಹಾಗೂ ಅವರ ಮಗಳ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದ್ದವರ ವಿರುದ್ಧ ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಂಬಂಧಪಟ್ಟ ಯೂಟ್ಯೂಬ್ ಚಾನಲ್‌ ಮಾಲೀಕರಿಗೆ ನೋಟಿಸ್ ಜಾರಿ‌ ಮಾಡಿದ್ದಾರೆ.

ಫೇಸ್ಬುಕ್ ಮತ್ತು ಯೂಟ್ಯೂಬ್ನಲ್ಲಿ ನಕಲಿ ಖಾತೆ ತೆರೆದು ವಿಡಿಯೋ ಅಪ್ಲೋಡ್ ಮಾಡಿ ಅವಹೇಳನ ಮಾಡಲಾಗಿದೆ. ರಾಜಕೀಯವಾಗಿ ಅವರನ್ನು ತಗ್ಗಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದಾರೆ. ಅಲ್ಲದೆ ಪರಮೇಶ್ವರ್ ಘನತೆಗೆ ಕುಂದು ತರಲು ಯತ್ನಿಸಿದ್ದಾರೆ‌ ಎಂದು ಅವರ ಆಪ್ತ ಸೋಮಶೇಖರ್ ಎಂಬುವರು ದೂರಿನಲ್ಲಿ ಉಲ್ಲೇಖಿಸಿದ್ದರು.

Leave a Reply