ಬೆಂಗಳೂರು: ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪಕ್ಷ ಎಂದು ರಾಜಾಜಿನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಘುವೀರ್ ಗೌಡ ಹೇಳಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಕಾಶನಗರ ವಾರ್ಡ್ ನಲ್ಲಿ ಆಟೋ ಚಾಲಕರಿಗೆ ಉಚಿತವಾಗಿ ಟೈಯರ್ ಗಳನ್ನು ವಿತರಿಸಿ ಮಾತಾಡಿದ ಅವರು, ಕಾಂಗ್ರೆಸ್ ನಾಯಕರು ಬಡವರ, ದೀನದಲಿತರ ಯೋಜನೆ ರೂಪಿಸಿದರು, ದೇಶದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಆರ್ಥಿಕವಾಗಿ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಬೀದಿ ಬದಿಯ ವ್ಯಾಪಾರಿಗಳಿಗೆ ತಳ್ಳುವ ಕೈಗಾಡಿ, ಬಿಸಿಲು, ಮಳೆ ರಕ್ಷಣೆಗೆ ಬೃಹತ್ ಛತ್ರಿಗಳನ್ನು ವಿತರಿಸಲಾಗಿದೆ ಎಂದರು.
ಆಟೋ ಚಾಲಕರು ಜನರ ಜೀವನಾಡಿಯಾಗಿ ಕೆಲಸ ಮಾಡುತ್ತಾರೆ, ಪ್ರತಿನಿತ್ಯ ಜನ ಸೇವೆಯ ಮೂಲಕ ನಿತ್ಯ ಕಾಯಕ ಮಾಡುವ ಆಟೋ ಚಾಲಕರಿಗೆ ಟೈಯರ್ ನೀಡಲಾಗಿದೆ. ಆಟೋ ಚಾಲಕರಿಗೆ 15 ತಾರೀಖು ಸಮವಸ್ತ್ರ ವಿತರಿಸಲಾಗುವುದು ಎಂದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಕಾಂಕ್ಷಿಯಾಗಿದ್ದೇನೆ. ಜನ ಸೇವೆ ಮಾಡುತ್ತಾ, ಜನರ ಸಮಸ್ಯೆ ಅಲಿಸುತ್ತಾ ಬಂದಿರುವ ನನಗೆ ಕ್ಷೇತ್ರದ ಜನರ ಸಹಕಾರ, ಬೆಂಬಲ ಆಶೀರ್ವಾದ ಇರಲಿ. ನನಗೆ ಅವಕಾಶ ಸಿಕ್ಕರೆ ರಾಜಾಜಿ ನಗರವನ್ನು ಮಾದರಿ ಕ್ಷೇತ್ರವಾಗಿಸುತ್ತೇನೆ ಎಂದರು.
ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.




