ಬೆಂಗಳೂರು: ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ಬಡಜನತೆ ಜೀವನ ಪನಡೆಸುವುದು ದುಸ್ಥರವಾಗಿದೆ. ಪೆಟ್ರೊಲ್, ಡಿಸೇಲ್ 100ರ ಗಡಿ ದಾಟಿದೆ. ಅಗತ್ಯವಸ್ತುಗಳ ಬೆಲೆಗಗನಕ್ಕೇರಿದೆ. ಜನರ ಕಷ್ಟದ ಜೊತೆಗೆ ಕಾಂಗ್ರೆಸ್ ಸದಾ ಜೊತೆಗಿರುತ್ತದೆ. ಇಂತಹ ಭ್ರಷ್ಟ ಬಿಜೆಪಿ ಸರ್ಕಾರ ಈ ಕೂಡಲೇ ಆಡಳಿತದಿಂದ ಕೆಳಗಿಳಿಯಬೇಕು ಎಂದು ಯಲಹಂಕ ಕಾಂಗ್ರೆಸ್ ಮುಖಂಡ ಎಂ.ಎನ್. ಗೋಪಾಲಕೃಷ್ಣ ಆಗ್ರಹಿಸಿದರು.

ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ, ತೈಲಬೆಲೆ ಏರಿಕೆ ಖಂಡಿಸಿ ಯಲಹಂಕ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃಷ್ಣ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಫ್.ಎಂ ಶ್ರೀಧರ್ ನೇತೃತ್ವದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ವೇಳೆ ಮಾತಾಡಿದ, ಗೋಪಾಲಕೃಷ್ಣ, ಈ ಕೂಡಲೇ ಪೆಟ್ರೊಲ್ ಡಿಸೇಲ್, ಗ್ಯಾಸ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಇಳಿಕೆ ಮಾಡಬೇಕು ಇಲ್ಲವಾದರೆ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆಂದು ಎಚ್ಚರಿಕೆ ನೀಡಿದರು.
ಯಲಹಂಕ ಹಳೆನಗರದ ಕಾಮಾಕ್ಷಮ್ಮ ಲೇಔಟ್ ಬಳಿ ನೆರೆದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸೈಕಲ್ ಜಾಥಾ ನಡೆಸಲು ಮುಂದಾದ ಕಾಂಗ್ರೆಸ್ ನಾಯಕರನ್ನು ರಸ್ತೆಯಲ್ಲಿಯೆ ತಡೆದ ಪೊಲೀಸರು ಯಲಹಂಕ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಅವರ ನಿರ್ದೇಶದನದಲ್ಲಿ ಬಂಧಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಜಯರಾಮಯ್ಯ, ಕೆಪಿಸಿಸಿ ಸದಸ್ಯ ಹಾಗೂ ಬೆಂ.ಉ.ನಗರಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಬಾಷಾ, ಹಿರಿಯ ಮುಖಂಡರಾದ ರಾಜಕುಮಾರ್, ಕಾಂತರಾಜು, ಬೆಂ.ನಗರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾಗೇನಹಳ್ಳಿ ಶ್ರೀನಿವಾಸ್, ತಿಮ್ಮರಾಜು, ಎನ್.ಶ್ರೀನಿವಾಸ್, ಮಹಿಳಾ ಅಧ್ಯಕ್ಷೆ ನಾಗವೇಣಿ, ಬಿಬಿಎಂಪಿ ಮಾಜಿ ಸದಸ್ಯೆ ಪದ್ಮಾವತಿ ಅಮರನಾಥ್, ಯುವ ಮುಖಂಡ ಮುಖಂಡ ಸಂತೋಷ್ ಮೊದಲಾದವರು ಹಾಜರಿದ್ದರು.




