ಶಿವಮೊಗ್ಗ: ಬಿ ವೈ ರಾಘವೇಂದ್ರ ಅವರ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರ ಹಲವಾರು ವರ್ಷಗಳ ಸತತ ಪ್ರಯತ್ನದ ಫಲವಾಗಿ ಆಗಸ್ಟ್ 10 ರಿಂದ ವಿ ಐ ಎಸ್ ಎಲ್ ಕಾರ್ಖಾನೆಯ ಉತ್ಪಾದನಾ ಚಟುವಟಿಕೆ ಪುನರಾರಂಭವಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ಬಿಜೆಪಿ ಭದ್ರಾವತಿ ಮಂಡಲದ ವತಿಯಿಂದ ಹಾಗೂ ವಿ ಎಸ್ ಎಲ್ ಕಾರ್ಮಿಕ ಸಂಘ ಹಾಗೂ ಗುತ್ತಿಗೆ ಕಾರ್ಮಿಕ ಸಂಘ ಹಾಗೂ ನಿವೃತ್ತ ಕಾರ್ಮಿಕ ಸಂಘ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕರು, ವಿ ಐ ಎಸ್ ಎಲ್ ಕಾರ್ಖಾನೆಯ ಉತ್ಪಾದನಾ ಚಟುವಟಿಕೆ ಪುನರಾರಂಭಿಸಲು ಕೇಂದ್ರ ಸರ್ಕಾರದಿಂದ ಇದಕ್ಕೆ ಕಾರಣರಾದ ಪ್ರಧಾನ ಮಂತ್ರಿಗಳಾದ Narendra Modi, ಕೇಂದ್ರ ಗೃಹ ಸಚಿವ Amit Shah, ಕೇಂದ್ರ ಹಣಕಾಸು ಸಚಿವೆ Nirmala Sitharaman ಮತ್ತು ಕೇಂದ್ರ ಉಕ್ಕು ಸಚಿವ Jyotiraditya M Scindia ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಭದ್ರಾವತಿ ಮಂಡಲ ಅಧ್ಯಕ್ಷ ಧರ್ಮ ಪ್ರಸಾದ್, ವಿ ಐ ಎಸ್ ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್.ಯ, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ಹಾಗೂ ಕುಮಾರಸ್ವಾಮಿ, ನಿವೃತ್ತ ಕಾರ್ಮಿಕ ಸಂಘದ ಅಧ್ಯಕ್ಷ ರಾಮಲಿಂಗಯ್ಯ ಅವರ ನೇತೃತ್ವದಲ್ಲಿ ಬಿ ವೈ ರಾಘವೇಂದ್ರ ಅರವರಿಗೆ ಅಭಿನಂದಿಸಲಾಯಿತು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಕುಮಾರಿ ಮಂಜುಳಾ, ಜಿಲ್ಲಾ ಕಾರ್ಯದರ್ಶಿ ಪ್ರಭಾಕರ್, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ಮಂಡಲದ ಪ್ರಧಾನ ಕಾರ್ಯದರ್ಶಿ ಚೆನ್ನೇಶ್, ಬಿಜೆಪಿಯ ಮುಖಂಡರಾದ ತೀರ್ಥಯ್ಯ, ಆನಂದ್ ಕುಮಾರ್ ಜಿ, ಸುರೇಶಪ್ಪ, ಜಿಲ್ಲಾ ಪ್ರಕೋಷ್ಠಗಳ ಸಹ ಸಂಯೋಜ ಮಂಗಳ ನಾಗೇಂದ್ರ, ನಗರಸಭಾ ಸದಸ್ಯರಾದ ಅನುಪಮಾ ಚೆನ್ನೇಶ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಸದಸ್ಯರು ಹಾಗೂ ಬಿಜೆಪಿಯ ಕಾರ್ಯಕರ್ತರು. ವಿ.ಐ ಎಸ್ ಎಲ್ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.



