ಬಡವರು, ನಿರ್ಗತಿಕರು ಮತ ಹಾಕಲು ಮಾತ್ರ ಬೇಕೆ?

5 years ago

ಬೆಂಗಳೂರು: ಬಡವರು, ನಿರ್ಗತಿಕರು ನಿಮಗೆ ವೋಟ್ ಹಾಕಲು ಬೇಕು, ಕಷ್ಟಕಾಲಕ್ಕೆ ನಾವೆಲ್ಲ ಬೇಡ ಅಲ್ಲವೇ ಎಂದು ಸವಿತಾ ಸಮಾಜದ ರಾಜು ಜಡೆಕುಂಟೆ ಪ್ರಶ್ನಿಸಿದ್ದಾರೆ.

ಅನ್ಯರಾಜ್ಯಗಳಲ್ಲಿ ತಮ್ಮ ಸಮುದಾಯಕ್ಕೆ ನೆರವು ನೀಡಿರುವುದನ್ನು ಸ್ಮರಿಸಿರುವ ಅವರು, 2000 ರೂಪಾಯಿ ಪ್ಯಾಕೇಜ್ ಘೋಷಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾಸಕರು, ಸಚಿವರು, ಮುಖ್ಯಮಂತ್ರಿಗಳೇ ನಿಮ್ಮ ಕ್ಷೇತ್ರದಲ್ಲಿ ನೀವು ಸಹಾಯ ಮಾಡಬಹುದಾಗಿತ್ತಲ್ಲ. ನಿಮ್ಮ ಬಳಿ ಎಷ್ಟೆಷ್ಟು ಕೋಟಿಗಳಿವೆ. ಗೋಣಿ ಚೀಲದಲ್ಲಿ ತುಂಬಬಹುದಾದಷ್ಟು ಹಣ ನಿಮ್ಮ ಬಳಿ ಇದೆ ಎಂದು ಹೇಳಿದ್ದಾರೆ.

ಯಡಿಯೂರಪ್ಪನವರು ಕಳೆದ ಬಾರಿ 5000 ಘೋಷಣೆ ಮಾಡಿ ಕಣ್ಣೊರೆಸುವ ತಂತ್ರ ಮಾಡಿದ್ದರು. ಇದರಲ್ಲಿ ಅರ್ಧ  ಜನಕ್ಕೆ ನೆರವು ಸಿಕ್ಕಿತ್ತು. ಎಲ್ಲರಿಗೂ ಸಿಕ್ಕಿಲ್ಲ. ಜನ ಸಾಯುತ್ತಿದ್ದಾರೆ. ಕೆಲವರು ಹೆಣದ ಮೇಲೆ ಹಣ ಮಾಡುತ್ತಿದ್ದಾರೆ. 180 ರೂ. ಅಡುಗೆ ಎಣ್ಣೆ ದರ ಆಗಿದೆ. ನಿಮ್ಮ ಭಾಗದ ಸಚಿವರು, ಶಾಸಕರಿಗೆ ಎಲ್ಲ ವೃತ್ತಿಯ ಜನರಿಗೂ ನೆರವು ನೀಡುವಂತೆ ಸಲಹೆ ನೀಡಿ ಎಂದಿದ್ದಾರೆ.

ನನಗೆ 2000 ತಲುಪಿದ್ದೇ ಆದರೆ ನಿಮಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸುತ್ತೇನೆ ಎಂದಿರುವ ಅವರು ನೀವು ಕೊಟ್ಟಿರುವ ಹಣವನ್ನು ಹಾಳು ಮಾಡುವುದಿಲ್ಲ. ನಿಮಗೇ ಸನ್ಮಾನ ಮಾಡುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2000 ರೂ. ಪ್ಯಾಕೇಜ್ ನಿಂದ ಏನೂ ಆಗುವುದಿಲ್ಲ ಎಂದಿದ್ದಾರೆ. ಕೇಂದ್ರ, ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ನಗೆಪಾಟಲಿನ ಲಾಕ್ ಡೌನ್ ಮಾಡಿದ್ದೀರಿ. ಮಾಡುವುದಾದರೆ ಎಲ್ಲವನ್ನೂ ಬಂದ್ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ.

Leave a Reply