ಜನರ ಸಹಕಾರ, ಬೆಂಬಲ ಅವಿಸ್ಮರಣೀಯ: ಡಾ.ಸಿ.ಎನ್.ಅಶ್ವಥ್ ನಾರಾಯಣ್

3 years ago

ಬೆಂಗಳೂರು: ಉನ್ನತ ಶಿಕ್ಷಣ ಐ.ಟಿ.ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಭಿವೃದ್ದಿ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವಥ್ ನಾರಯಣ್ ಹುಟ್ಟುಹಬ್ಬದ ಅಚರಣೆಯನ್ನು ಅಭಿಮಾನಿಗಳು, ಸ್ನೇಹಿತರು ಮತ್ತು ಬಿ.ಜೆ.ಪಿ.ಕಾರ್ಯಕರ್ತರುಗಳು ಏರ್ಪಡಿಸಿದ್ದರು. ಅಶ್ವಥ್ ನಾರಾಯಣ್ ರವರು ಕೇಕ್ ಕತ್ತರಿಸಿ, ಸಿಹಿ ವಿತರಿಸಿದರು.

ಇದೇ ವೇಳೆ ಮಾತಾಡಿದ ಸಿ.ಎನ್.ಅಶ್ವಥ್ ನಾರಾಯಣ್, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಪ್ರಜ್ಞಾವಂತ, ಬುದ್ದಿವಂತರು ಇರುವ ಕ್ಷೇತ್ರ. ನನ್ನ ಹುಟ್ಟಿದ ಹಬ್ಬ ಅಚರಣೆ ಅನ್ನುವುದಕ್ಕಿಂತ ಇಂದು ಕ್ಷೇತ್ರದ ಜನರ ಮತ್ತು ಕಾರ್ಯಕರ್ತರ ದಿನ ಎಂದು ಹೇಳಬಹುದು. ಪಕ್ಷ ಸಂಘಟನೆ ಮತ್ತು ಕ್ಷೇತ್ರದ ಅಭಿವೃದ್ದಿಗೆ ಕಾರ್ಯಕರ್ತರ ಕೊಡುಗೆ ಅಪಾರ ಎಂದರು.

ಭಾರತ ದೇಶ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ವಿಶ್ವಗುರುವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ, ಒಳಚರಂಡಿ ಮತ್ತು ಉದ್ಯಾನವನಗಳು ನವೀಕರಣ ಮತ್ತು ಸ್ಯಾಂಕಿ ಕೆರೆ ನವೀಕರಣ ಹಲವಾರು ಅಭಿವೃದ್ದಿ ಕೆಲಸಗಳು ಶರವೇಗದಲ್ಲಿ ಸಾಗುತ್ತಿವೆ. ನಮ್ಮ ಕ್ಷೇತ್ರದ ಜನರ ಸಹಕಾರ, ಬೆಂಬಲ ಅವಿಸ್ಮರಣೀಯ, ಅವರಿಗೆ ಹೃತ್ವೂರ್ವಕ ಧನ್ಯವಾದಗಳು ಎಂದರು.

Leave a Reply