ಕೊರೋನಾ ವಾರಿಯರ್ಸ್ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ

4 years ago

ಬೆಂಗಳೂರು: ಗೋವಿಂದರಾಜನಗರ ವಾರ್ಡ್ ಬಿ.ಬಿ.ಎಂ.ಪಿ. ಸದಸ್ಯ ಕೆ.ಉಮೇಶ್ ಶೆಟ್ಟಿ ಅವರ ನಿವಾಸದಲ್ಲಿ ಸಕಾಲ ಸಂಕಷ್ಟ ನಿವಾರಣೆಗಾಗಿ ಮತ್ತು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ಲಭಿಸಲಿ ಎಂದು ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಸಮಾರಂಭ ಮತ್ತು ನಮ್ಮ ಬಾಂಧವ್ಯ ಕಾರ್ಯಕ್ರಮದಲ್ಲಿ ದೀಪಾವಳಿ ಹಬ್ಬದ ಶುಭಾಶಯ ಕೋರಿ ಬಂದ ಅತಿಥಿಗಳಿಗೆ ಕತ್ತಲೆಯಿಂದ, ಬೆಳಕಿನೆಡೆಗೆ ಜೀವನ ಸಾಗಿಸಲಿ ಎಂದು ಶುಭ ಸಂದೇಶದೊಂದಿಗೆ ಎಲ್ಲರಿಗೂ ದೀಪದ ಹಣತೆ, ಸಿಹಿ ತಿನಿಸುಗಳನ್ನು ವಿತರಿಸಿದರು.

ಈ ವೇಳೆ ಪೌರ ಕಾರ್ಮಿಕ ಮಹಿಳೆಯರಿಗೆ ಸೀರೆಗಳನ್ನು ಮತ್ತು ಪೌರ ಕಾರ್ಮಿಕ ಪುರುಷರು ಮತ್ತು ಆಟೋ ಚಾಲಕರು, ಕಸದ ಟಿಪ್ಪರ್ ಚಾಲಕರಿಗೆ ಪ್ಯಾಂಟ್ ಮತ್ತು ಶರ್ಟು ಬಟ್ಟೆಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ವಸತಿ ಸಚಿವ ವಿ.ಸೋಮಣ್ಣ ಮತ್ತು ಲೋಕಸಭೆ ಸದಸ್ಯ ತೇಜಸ್ವಿ ಸೂರ್ಯ,  ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಮಾಜಿ ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ ಮತ್ತು ದಕ್ಷಿಣ ಪ್ರಾಂತ್ಯ ಬಿ.ಜೆ.ಪಿ. ಪ್ರಮುಖ ತಿಪ್ಪೇಸ್ವಾಮಿ, ರಾಜ್ಯ ಬಿ.ಜೆ.ಪಿ. ಯುವ ನಾಯಕ ಡಾ.ಅರುಣ್ ಸೋಮಣ್ಣ ಮತ್ತು ಗೋವಿಂದರಾಜನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ ಮತ್ತು ವಿಜಯನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ಟಿ.ವಿ.ಕೃಷ್ಣ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಡಾ.ಎಸ್.ರಾಜು, ಮೋಹನ್ ಕುಮಾರ್, ಲಕ್ಷ್ಮೀನಾರಾಯಣ್ ದಾಸೇಗೌಡ, ವಾಗೇಶ್, ರೂಪ ಲಿಂಗೇಶ್ವರ್, ರಾಜೇಶ್ವರಿ ಬೆಳಗೋಡ್, ಮಾಜಿ ಉಪ ಮೇಯರ್ ಎಸ್.ಹರೀಶ್ ಮತ್ತು ಬಿ.ಜೆ.ಪಿ. ಯುವ ಮುಖಂಡ ವೇಣುಗೌಡ ಮತ್ತು  ಬಿ.ಜೆ.ಪಿ.ಪಕ್ಷದ ಪ್ರಮುಖರು, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

Leave a Reply