ಬೆಂಗಳೂರು: ಸಮಾಜ ನನಗೇನು ಕೊಟ್ಟಿದೆ ಏನ್ನುವುದಕ್ಕಿಂತ ಸಮಾಜಕ್ಕೆ ನಾನು ಏನು ಕೊಟ್ಟಿದ್ದೇನೆ ಎಂಬುದು ಮುಖ್ಯ ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿಯಲ್ಲಿ ಯಶ್ವಸಿನಿ ಫೌಂಡೇಷನ್ ಸಂಸ್ಥಾಪಕ, ಸಮಾಜ ಸೇವಕ ಡಾ.ಎಂ.ಸೋಮಶೇಖರ್ ರವರು ಸಮಾಜ ಸೇವೆ ಗುರುತಿಸಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತಾಡಿದ ಅವರು, ಕಾಯಕ ಮಹತ್ವ ಮತ್ತು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದಾಸೋಹ ಸಿದ್ದಾಂತವನ್ನು ಪಾಲಿಸುತ್ತಿರುವ ಎಂ.ಸೋಮಶೇಖರ್ ಅವರದು ಸರಳ,ಸಜ್ಞನ ವ್ಯಕ್ತಿತ್ವ ಎಂದರು.
ಕೊರೋನ ಸಾಂಕ್ರಮಿಕದಿಂದ ಸಂಕಷ್ಟದಲ್ಲಿ ಇದ್ದಾಗ ಪ್ರಾಣದ ಹಂಗು ತೊರೆದು ಸ್ವಚ್ಛತೆಗೆ ಆದ್ಯತೆ ನೀಡಿ ಜನರ ಜೀವ ಉಳಿಸಿದ ಪೌರ ಕಾರ್ಮಿಕರು ನಮ್ಮೆಲ್ಲರ ಕಣ್ಣಿಗೆ ಕಾಣುವ ದೇವರು ಎಂದರು.
ಇದೇ ತಿಂಗಳು 16ನೇ ತಾರೀಖು ದಾಸರಹಳ್ಳಿಯಲ್ಲಿ 305 ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಎಸ್.ಬೊಮ್ಮಾಯಿರವರು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಮತದಾರ ಕೊಟ್ಟ ಒಂದು ಮತ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಬದಲಾವಣೆಯತ್ತ ಸಾಗಿದೆ ಸಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತಾಡಿದ ಎಂ.ಸೋಮಶೇಖರ್, ಯಶ್ವಸಿನಿ ಫೌಂಡೇಷನ್ ಶಿಕ್ಷಣ, ಆರೋಗ್ಯ ಮತ್ತು ಪರಿಸರ ರಕ್ಷಣೆಗೆ ಸೇವೆ ಮಾಡುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ಹಾಗೂ ಪರಿಸರ ಜಾಗೃತಿ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯ ರಾಮಪ್ಪ, ಮೋಹನ್ ಕುಮಾರ್, ಕೆ.ಉಮೇಶ್ ಶೆಟ್ಟಿ, ದಾಸೇಗೌಡ, ಶಿಲ್ಪ ಶ್ರೀಧರ್, ಮುಖಂಡರುಗಳಾದ ಕನಕಪುರ ರಾಜಣ್ಣವೇಣು, ರಾಜಪ್ಪ,ಕೊಳಗೇರಿ ನಿರ್ಮೂಲನ ಮಂಡಳಿ ನಿರ್ದೇಶಕ ಕ್ರಾಂತಿರಾಜುರವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನೂರಾರು ಪೌರ ಕಾರ್ಮಿಕರಿಗೆ ಉಲ್ಲನ್ ಕಂಬಳಿ ವಿತರಿಸಲಾಯಿತು.




