ಉಚಿತ ಆರೋಗ್ಯ ತಪಾಸಣೆ, ಪೌರ ಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಣೆ
ಆಟೋ ಚಾಲಕರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ
ಬೆಂಗಳೂರು: ಹೆಬ್ಬಾಳ, ಮನೋರಾಯನ ಪಾಳ್ಯ ಮಾಜಿ ಪಾಲಿಕೆ ಸದಸ್ಯರು, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು, ಸ್ನೇಹಿತರು ಕಣ್ಣಿನ ಪರೀಕ್ಷೆ , ಕಣ್ಣಿನ ಶಸ್ತ್ರ ಚಿಕಿತ್ಸೆ,ಕನ್ನಡಕ ವಿತರಣೆ, ಪೌರ ಕಾರ್ಮಿಕ ಮಹಿಳೆಯರಿಗೆ ಸೀರೆ, ಬ್ಲಾಂಕೇಟ್ ವಿತರಣೆ, ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ, ಪಿಂಚಣಿ ಮಂಜೂರಾತಿ ಆದೇಶ, ಕಾರ್ಮಿಕರಿಗೆ ಲೇಬರ್ ಕಾರ್ಡ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಭೈರತಿ ಸುರೇಶ್ ಅವರು ಮಾತನಾಡಿ, ಜನರ ನೋವು ನಲಿವುಗಳಿಗೆ, ಜನರ ನಡುವೆ ಇರುವವರು ಜನನಾಯಕರಾಗಿ ಬೆಳೆಯುತ್ತಾರೆ. ಕಾಂಗ್ರೆಸ್ ಪಕ್ಷ ಬಡವರ ಪರ, ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ನೀಡಿದ ಪಕ್ಷ. ಇಂದು ಕೋಮುವಾದ, ಜಾತಿವಾದಗಳಿಂದ ಆತಂಕ ಸ್ಥಿತಿಯಲ್ಲಿ ದೇಶ ನಲುಗುತ್ತಿದೆ. ಎಲ್ಲ, ಧರ್ಮ, ಜಾತಿಯವರು ಸ್ನೇಹ, ಸಹಬಾಳ್ವೆಯಿಂದ ಬದುಕಿದರೆ ದೇಶ ಅಭಿವೃದ್ದಿ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ವಾಜಿದ್, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ದಿನೇಶ್ ಗುಂಡೂರಾವ್, ಶಾಸಕ ಭೈರತಿ ಸುರೇಶ್ ಅವರ ಸಹಕಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಶಕ್ತಿಯುತವಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಕಾಂಗ್ರೆಸ್ ಪಕ್ಷ ಎಲ್ಲ ಧರ್ಮ, ಜಾತಿಯವರನ್ನು ಸರಿಸಮಾನವಾಗಿ ಕಾಣುವ ಬಡವರ, ದೀನದಲಿತರ ಪರ ಇರುವ ಪಕ್ಷ ಎಂದರು.
ಕಾಂಗ್ರೆಸ್ ಪಕ್ಷ ಆಡಳಿತದ ಅವಧಿಯಲ್ಲಿ ಬಡವರ ಹಸಿವಿನಿಂದ ಬಳಲಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ರಾಜ್ಯದ 4 ಕೋಟಿ ಜನರಿಗೆ ಇದರ ಲಾಭ ತಲುಪಿದೆ ಮತ್ತು ಜನತೆಗೆ ನೀಡಿದ 165 ಭರವಸೆಗಳನ್ನು ಪೂರೈಸಿದ ದೇಶದ ಮೊಟ್ಟ ಮೊದಲ ಸರ್ಕಾರ ಎಂದು ಕಾಂಗ್ರೆಸ್ ಪಕ್ಷಕ್ಕೆ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಿರೋಧಿ ಆಡಳಿತದಿಂದ ಜನರ ನೊಂದು ಹೋಗಿದ್ದಾರೆ. ಮುಂಬರುವ ಬಿ.ಬಿ.ಎಂ.ಪಿ. ಮತ್ತು ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದರು.



