ಕೇಂದ್ರ ಸರಕಾರ ಉಚಿತವಾಗಿ ನೀಡುವಾಗ ರಾಜ್ಯ ಸರಕಾರದ ಲಸಿಕೆ ಖರೀದಿ ಯಾಕೆ ?: ಸಿಪಿಐಎಂ

5 years ago

ಬೆಂಗಳೂರು: ಭಾರತ ಸರಕಾರ ಮತ್ತು ಅದರ ಪ್ರಧಾನಿ ದೇಶದಾದ್ಯಂತ ಜನತೆಗೆ ಉಚಿತವಾಗಿ ಲಸಿಕೆ ಹಾಕಿಸಲಾಗುವುದು ಎಂದು ಪ್ರಕಟಿಸಿರುವಾಗ, ಕರ್ನಾಟಕ ಸರಕಾರ ಖಾಸಗೀ ಆಸ್ಪತ್ರೆಗಳ ಮೂಲಕ ಕೋವಿಡ್ ಲಸಿಕೆಯನ್ನು ಪ್ರತಿ ಡೋಸ್ ಗೆ 780 ರೂ.ಗಳಂತೆ ಖರೀದಿಸುತ್ತಿರುವುದು ಆಶ್ಚರ್ಯಕರವಾಗಿದೆಯೆಂದು ಸಿಪಿಐಎಂ ಹೇಳಿದೆ.

ಪ್ರಧಾನಿ ದೇಶದ ಜನತೆಗೆ ಉಚಿತವಾಗಿ ಲಸಿಕೆ ಹಾಕಲಾಗುವುದೆಂದು ಬಹಿರಂಗವಾಗಿ ಪ್ರಕಟಿಸಿ, ಒಳಗೊಳಗೆ ರಾಜ್ಯದ ಮೇಲೆ ಒತ್ತಡ ಹೇರಿ ಖಾಸಗಿಯಾಗಿ ಖರೀದಿಸಲು ಹೇಳಿದ್ದಾರೆಯೇ? ಅಥವಾ ರಾಜ್ಯ ಸರಕಾರದ ಈ ರೀತಿಯ ಖರೀದಿ ಏಕೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ರಾಜ್ಯದ ಜನತೆಗೆ ವಿವರಿಸಬೇಕೆಂದು ಸಿಪಿಐಎಂ ಒತ್ತಾಯಿಸಿದೆ.

ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ 700 ಕೋಟಿ ರೂ  ದುರ್ಬಳಕೆ – CPIM ಖಂಡನೆ

ಕೋವಿಡ್ ಲಸಿಕೆಯ ಖರೀದಿಗಾಗಿ ರಾಜ್ಯ ಸರಕಾರವು, ಬಡ ಕಟ್ಟಡ ಕಾರ್ಮಿಕರ ದುಡಿಮೆಯಿಂದ ರೂಪಿಸಲಾಗಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಸುಮಾರು 700 ಕೋಟಿ ರೂ.ಗಳ ದುರ್ಬಳಕೆ ಮಾಡುತ್ತಿರುವ ಹಗರಣ ಬಯಲಾಗಿದೆ. ಸಿಪಿಐಎಂ ಈ ಅಕ್ರಮವನ್ನು  ಖಂಡಿಸಿದೆ.

ಇದೆಲ್ಲವೂ ಕೋವಿಡ್ ಲಸಿಕೆ ನೀಡುವ ವಿಚಾರವೂ ಮತ್ತು ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ದುರ್ಬಳಕೆಯು ಎಲ್ಲವೂ ಸರಕಾರಗಳ ನಡೆಗಳು ಪಾರದರ್ಶಕವಾಗಿರದೇ, ಅನುಮಾನಾಸ್ಪದವಾಗಿರುವುದನ್ನು ತೋರುತ್ತಿವೆ ಎಂದು ಶಂಕೆ ವ್ಯಕ್ತಪಡಿಸಿದೆ.

ರಾಜ್ಯ ಸರಕಾರ ಬಡವರ ಕಲ್ಯಾಣ ನಿಧಿಯನ್ನು ಅವರ ಕಲ್ಯಾಣ ಕಾರ್ಯಕ್ರಮಗಳಿಗಾಗಿಯಲ್ಲದೇ ಅನ್ಯ ಕಾರ್ಯಕ್ರಮಗಳ ಹೆಸರಿನಲ್ಲಿ ದುರ್ಬಳಕೆ ಮಾಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

Leave a Reply