ಬೆಂಗಳೂರಿನ ಹೋಟೆಲ್, ಬಾರ್ ಅಂಡ್ ರೆಸ್ಟೊರೆಂಟ್ ಗಳಲ್ಲಿ ಸಿಸಿಟಿವಿ ಕಡ್ಡಾಯ

2 years ago

#CCTV #mandatory #hotel #bars# #restaurants #Bangalore

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ದೃಷ್ಟಿಯಿಂದ ನಗರ ವ್ಯಾಪ್ತಿಯ ಎಲ್ಲಾ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮರ ಅಳವಡಿಸಲು ಆದೇಶಿಸಲಾಗಿದೆ.

ಪೊಲೀಸರ ಆದೇಶದಂತೆ ಸಿಸಿ ಕ್ಯಾಮೆರಾ ಅಳವಡಿಸದ ಮಾಲೀಕರಿಗೆ ದಂಡ ವಿಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಎಚ್ಚರಿಕೆ ನೀಡಿದ್ದಾರೆ.

ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಪ್ರಕಾರ 100ಕ್ಕೂ ಹೆಚ್ಚು ಸಾರ್ವಜನಿಕರು ಬರುವ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮರ ಅಳವಡಿಸಬೇಕು ಎಂದು ನಿಯಮವಿದೆ. ಸಿಸಿ ಕ್ಯಾಮೆರಾಗಳನ್ನೂ ಪೋಲೀಸರ ಮಾರ್ಗದರ್ಶನದಲ್ಲಿ ಅಳವಡಿಸಬೇಕು ಎಂದು ಹೇಳಿದರು.

ರಸ್ತೆ ಸುತ್ತಮುತ್ತಲಿನ ಪ್ರದೇಶಗಳು ಕಾಣುವಂತೆ, ಸಿಸಿ ಕ್ಯಾಮೆರಾ ಅಳವಡಿಸಬೇಕು. ಅವುಗಳು ಹೆಚ್ಚು ಕ್ವಾಲಿಟಿ ಇರಬೇಕು, ಸ್ಟೋರೇಜ್ ಹೆಚ್ಚಾಗಿ ಇರಬೇಕು, ಕ್ಯಾಮೆರಾ ಯಾವಕಡೆ ಇರಬೇಕು, ನಿರ್ವಹಣೆ ಮಾಡುವುದರ ಬಗ್ಗೆ ಪೋಲೀಸರು ಸಲಹೆ ನೀಡುತ್ತಾರೆ. ಒಂದು ಸಿಸಿ ಟಿವಿ, ಒಬ್ಬರು ಪೋಲೀಸ್ ರೀತಿ ಎಂದು ತಿಳಿಸಿದರು.

Leave a Reply