ರೌಡಿ ಹತ್ಯೆಗೆ ಸಂಚು ತಡೆದ ಸಿಸಿಬಿ ಪೊಲೀಸರು

2 years ago

#CCB #police #foiled #kill #Rowdy

ಬೆಂಗಳೂರು: ರೌಡಿ ರವಿ ಅಲಿಯಾಸ್ ಟ್ಯಾಂಗೋ ರವಿ ಕೊಲೆಗೆ ಸಂಚು ರೂಪಿಸಿದ್ದ ಸಂತು ಗ್ಯಾಂಗ್ ಅನ್ನು ಕೃತ್ಯಕ್ಕೂ ಮೊದಲೇ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ಯಾಂಗ್ ನ ಸಂತೋಷ್ ಅಲಿಯಾಸ್ ಸಂತು, ಕಿರಣ್ ಹರೀಶ್, ರಘು ಹಾಗೂ ಕುಮಾರ್ ನನ್ನು ಬಂಧಿಸಿದ್ದಾರೆ. ಆನಂದ್ ಕೊಲೆ ಪ್ರಕರಣದಲ್ಲಿ ಸೆರೆಮನೆಯಲ್ಲಿರುವ ಉಮೇಶ್ ಅಲಿಯಾಸ್ ಮಿಕಾನ ಸಹಚರ ಸಂತೋಷ್ ನ ಕೊಲೆಗೆ ಈ ಗ್ಯಾಂಗ್ ಸಂಚು ರೂಪಿಸಿರುವುದು ಗೊತ್ತಾಗಿದೆ.

ಕೆಲ ದಿನಗಳ ಹಿಂದೆ ನೆಲಮಂಗಲ ಬಳಿ ಇಸ್ವೀಟ್ ಅಡ್ಡೆಯಲ್ಲಿ ಭೇಟಿಯಾಗಿದ್ದ ರೌಡಿ ರವಿ ಮತ್ತು ಸಂತೋಷ್ ಗೆ ಫೈನಾನ್ಸ್ ವಿಚಾರದಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಟ್ಯಾಂಗೋ ರವಿ ಸಂತೂ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆ ವಿಚಾರವನ್ನು ಉಮೇಶ್ ಬಳಿ ಹೇಳಿಕೊಂಡಿದ್ದ. ಅದಾದ ನಂತರ ಟ್ಯಾಂಗೋ ರವಿಯನ್ನು ಕೊಲೆ ಮಾಡಲು ಸಂಚು ರೂಪಿಸಿ ಸುಮಾರು ಎಂಟರಿಂದ ಹತ್ತು ಜನ ಕಾರಿನಲ್ಲಿ ಟ್ಯಾಂಗೋ ಊರು ಅಮೃತೂರಿಗೆ ಹೋಗಿದ್ದರು. ಸಿಕ್ಕಸಿಕ್ಕಲ್ಲಿ ಹೊಡೆಯಬೇಕು ಎಂದು ಯೋಜನೆ ರೂಪಿಸಿದ್ದ ಇವರಿಗೆ ಸಿಕ್ಕದೆ ಟ್ಯಾಂಗೋ ಪರಾರಿಯಾಗಿದ್ದ. ಈ ವಿಚಾರ ತಿಳಿದ ನಂತರ ಕೂಡ ಅಮೃತೂರು ಪೊಲೀಸರು ಪ್ರಕರಣ ದಾಖಲಿಸದೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಅದಾದ ನಂತರ ಪೀಣ್ಯ ಬಳಿ ಟ್ಯಾಂಗೋ ರವಿ ಕೊಲೆಗೆ ಸಂತೂ ಮತ್ತೆ ಸಂಚು ರೂಪಿಸಿದ್ದ ಮಾಹಿತಿ ಲಭಿಸಿದ್ದ ಸಿಸಿಬಿಯ ಒಸಿಡ್ಲ್ಯೂ ವಿಭಾಗದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ರೌಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ ಮಚ್ಚು, ಲಾಂಗ್, ಪೆಪ್ಪರ್ ಸ್ಪ್ರೇಗಳನ್ನು ವಶಕ್ಕೆ ಪಡೆಯಲಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply