ಬೆಂಗಳೂರು: ಸಾರ್ವಜನಿಕರು ಮನೆಯಿಂದ ಹೊರಬರುವ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಸ್ಯಾನಿಟೈಸರ್ ನಿಂದ ಕೈ ಸ್ವಚ್ಛಗೊಳಿಸಿ ಮತ್ತು ಪ್ರತಿಯೊಬ್ಬ ನಾಗರಿಕರು ಕೊವಿಡ್-19 ಲಸಿಕೆ ಹಾಕಿಸಿಕೊಳ್ಳಿ ಎಂದು ಜನ ಜಾಗೃತಿ ಅಭಿಯಾನ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡ ಟಿ.ಎನ್.ರಾಧಕೃಷ್ಣ ಹೇಳಿದರು.
ಕಾಮಾಕ್ಷಿಪಾಳ್ಯ ವಾರ್ಡ್ ನಲ್ಲಿ ಕೊರೋನ ವೈರಸ್ ಸಾಂಕ್ರಮಿಕ ರೋಗ ಹರಡದಂತೆ ತಡೆಗಟ್ಟಲು ಸೋಂಕು ನಿವಾರಕ ಔಷಧಿ ಸಿಂಪಡನೆ ಮಾಡಲಾಯಿತು. ಟಿ.ಎನ್.ರಾಧಕೃಷ್ಣ, ಕಾರ್ಯಕರ್ತರು ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿದರು.
ಇದೇ ವೇಳೆ ಮಾಜಿ ಮೇಯರ್ ಪದ್ಮಾವತಿ ನೇತೃತ್ವದಲ್ಲಿ ಕಾಮಾಕ್ಷಿ ಪಾಳ್ಯ ವಾರ್ಡ್ ನಲ್ಲಿ ಕೊವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಆಹಾರ ಪ್ಯಾಕೇಟ್ ವಿತರಿಸಲಾಯಿತು. ಕೊರೋನ ಸಾಂಕ್ರಮಿಕ ರೋಗ ಮೂರನೇ ಅಲೆ ಬರುವ ಸಾಧ್ಯತೆ ಇರುವುದರಿಂದ ವಾರ್ಡ್ ನ ರಸ್ತೆಗಳಿಗೆ ಸೋಂಕು ನಿವಾರಣೆ ಔಷಧಿ ಸಿಂಪಡಿಸಲಾಗಿದೆ.




