CAA ಮತ್ತು NRC ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಲ್ಲಿ ಗೊಂದಲ ಎಬ್ಬಿಸಿ, ಭೀತಿ ಮೂಡಿಸುವ ಯತ್ನ

3 years ago

CAA ಮತ್ತು NRC ಗೆ ಸಂಬಂಧಿಸಿದಂತೆ ಈ ಹಿಂದೆ ಜನರಿಂದ ಸಾಕಷ್ಟು ವಿರೋಧ ಎದುರಿಸಿದ್ದ ಕೇಂದ್ರ ಸರ್ಕಾರವು ತನ್ನ ಗೃಹ ಸಚಿವ ಅಮಿತ್ ಷಾ ಅವರ ಮೂಲಕ ಅಂತಹ ಯಾವುದೇ ಪ್ರಸ್ತಾಪವು ಸರ್ಕಾರದ ಮುಂದೆ ಇಲ್ಲವೆಂದು ಹೇಳಿತ್ತು.

ಆದರೆ ಇದೀಗ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಮತ್ತೊಮ್ಮೆ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಗೊಂದಲ ಎಬ್ಬಿಸಿ ಅವರಲ್ಲಿ ಭೀತಿ ಮೂಡಿಸಲು ಪ್ರಯತ್ನಿಸುತ್ತಿದೆ.

ಈಗಾಗಲೇ ಹಲವು ಬಾರಿ ಹೇಳಲಾದಂತೆ ಪ್ರಜಾಪ್ರಭುತ್ವ ದೇಶವಾದ ಭಾರತವು ಸಾಮರಸ್ಯದ ತತ್ವವನ್ನು ಅಳವಡಿಸಿಕೊಂಡ ನೆಲವಾಗಿದೆ.

ಬುದ್ಧನ ಕಾಲದಲ್ಲೇ ಈ ದೇಶವು ಪೌರತ್ವ ಮತ್ತು ಪ್ರಜಾಪ್ರಭುತ್ವವನ್ನು ಅನುಭವಿಸಿದ್ದು ನಮಗೆ ಪೌರತ್ವ ಕೊಡಿ ಎಂದು ಕೇಳುವಂತಹ ದುರ್ಗತಿ ಬರುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ.

ಮೂಲತಃ ಶೋಷಿತ ವರ್ಗಗಳ ವಿರೋಧಿಗಳಾಗಿರುವ ಮನುವಾದಿ ಬಿಜೆಪಿಗರು ಕ್ರಮೇಣ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಪಡಿಸಿ ಅವರಲ್ಲಿ ಭೀತಿ ಹುಟ್ಟಿಸಿ ನಂತರ ಅದನ್ನು ದಲಿತರು, ಆದಿವಾಸಿಗಳು ಮತ್ತು ಹಿಂದುಗಳಿದ ವರ್ಗಗಳ ಮೇಲೂ ಆ ಭೀತಿಯನ್ನು ಹೇರುತ್ತಾರೆ.

ಹೀಗಾಗಿ ಯಾರಿಗೋ ತೊಂದರೆ ಅಥವಾ ಭೀತಿ ಉಂಟಾದರೆ ನಮಗೇನು ಎಂದು ನಾವು ಈ ದಿನ ಸುಮ್ಮನೇ ಕುಳಿತರೆ ಮುಂದೆ ನಮಗೆ ತೊಂದರೆ ಆದಾಗ ನಮ್ಮ ಪರವಾಗಿ ಹೋರಾಟ ನಡೆಸಲು ಯಾರೂ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು, ದೇಶದ ಒಳಗೆ ಒಡಕು ಮೂಡಿಸುವ ಉದ್ದೇಶದೊಂದಿಗೆ ಜಾರಿಗೊಂಡಿರುವ CAA  ಕಾಯ್ದೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ

ಆಡಳಿತಾತ್ಮಕ ವೈಫಲ್ಯ ಮತ್ತು ಚುನಾವಣಾ ಬಾಂಡ್ ಗಳ ಚರ್ಚೆಯ ದಿಕ್ಕು ತಪ್ಪಿಸಲು ಮನಸ್ಸಿಗೆ ಬಂದಂತೆ ನಿರ್ಧಾರ ಕೈಗೊಳ್ಳುತ್ತಿರುವ ಬಿಜೆಪಿಗರ ಸರ್ವಾಧಿಕಾರಕ್ಕೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ತಕ್ಕ ಪಾಠ ಕಲಿಸಬೇಕು.

– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Leave a Reply