ದೆಹಲಿ/ಬೆಂಗಳೂರು: ಕನ್ನಡ ರಂಗಭೂಮಿಯ ಹಿರಿಯ ನಟ, ನಿರ್ದೇಶಕ ಡಾ. ಬಿ.ವಿ. ರಾಜಾರಾಮ್ ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸದಸ್ಯರಾಗಿ ಮತ್ತು ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ, ರಂಗ ನಿರ್ದೇಶಕ, ಕಲಾ ಗಂಗೋತ್ರಿ ತಂಡದ ಸಂಘಟಕ ಹಾಗೂ ಬೆಂಗಳೂರು ರಂಗ ಕಲಾವಿದರ ಸಹಕಾರ ಸಂಘದ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ರವಿಚಂದ್ರನ್ ಅಭಿನಯದ ಗೋಪಿಕೃಷ್ಣ ಚಿತ್ರದಲ್ಲಿ ಖಳನಾಯಕರಾಗಿ ಕೂಡ ಅವರು ಛಾಪು ಮೂಡಿಸಿದ್ದಾರೆ.




