ಕೆಂಭಾವಿ: ಇಡೀ ಜಗತ್ತನ್ನು ಸಹಾನುಭೂತಿ ಮತ್ತು ಸಹಿಷ್ಣುತೆಯ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸಿದವನು ಮಹಾತ್ಮ ಗೌತಮ ಬುದ್ಧ ಎಂದು ಗ್ರಾ.ಪಂ. ಸದಸ್ಯ ಆರ್. ಎಸ್ ಮಾಲಗತ್ತಿ ಹೇಳಿದರು.
ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಹುಣ್ಣಿಮೆ ನಿಮ್ಮಿತ್ತ ಹಮ್ಮಿಕೊಂಡಿದ್ದ ಧಮ್ಮದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೌತಮ ಬುದ್ಧ ಬೌದ್ಧ ಧರ್ಮದವರಿಗೆ ಮಾತ್ರ ಸೀಮಿತವಾಗಿಲ್ಲ. ಬದುಕುವ ರೀತಿ, ಅದಕ್ಕಾಗಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ತಿಳಿ ಹೇಳಿ, ಜಗತ್ತಿಗೆ ಗುರುವಾದವರು. ಅರಸೊತ್ತಿಗೆಯನ್ನು ತ್ಯಜಿಸಿ, ಬದುಕಿನಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ಅರಿಸಿ, ವಿರಾಗಿಯಾಗಿ ಭರತಖಂಡದುದಕ್ಕೂ ಶಾಂತಿ, ಅಹಿಂಸಾ ತತ್ವಗಳನ್ನು ಸಾರಿದವರು ಎಂದರು.
ಲೋಕದ ಸಂಕಟಗಳಿಗೆ ಪರಿಹಾರ ಹುಡುಕಿಕೊಟ್ಟ ಆಧ್ಯಾತ್ಮಿಕಲೋಕದ ಸಂಕಟಗಳಿಗೆ ಪರಿಹಾರ ಹುಡುಕಿಕೊಟ್ಟ ಆಧ್ಯಾತ್ಮಿಕ ಪುರುಷ. ಧ್ಯಾನ, ದಾನ ಜೀವನದ ಬಗ್ಗೆ ಸದಾಕಾಲ ಚಿಂತಿಸಿ ಅದನ್ನು ಜನರಿಗೆ ತಿಳಿಸಿ ಅಪಾರ ಅನುಯಾಯಿಗಳನ್ನು ಗಳಿಸಿಕೊಂಡವರು ಎಂದರು.
ಗೌತಮ ಬುದ್ಧನ ಚಿಂತನೆಯನ್ನು ಅನುಸರಿಸುವ ಮೂಲಕ ನಾವು ಸಂತೋಷದ ಜೀವನವನ್ನು ನಡೆಸೋಣ ಎಂದರು.
ಮುಖ್ಯೋಪಾಧ್ಯಾಯ ಬಸವರಾಜ ಮಲ್ಲೆ ಮಾತನಾಡಿ,
ಬುದ್ಧನ ಚಿಂತನೆಗಳಿಗೆ ಮಾರು ಹೋಗದವರೇ ಇಲ್ಲ. ಸ್ವಾಮಿ ವಿವೇಕಾನಂದ, ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳಿಗೆ ಬುದ್ಧನ ಆದರ್ಶಗಳು, ಪ್ರೇರಕ ಶಕ್ತಿಯಾಗಿವೆ ಎಂದರು.
ಜೀವನ ಎಂಬುದು ನಶ್ವರ. ಜಗತ್ತು ದುಃಖ ದುಮ್ಮಾನಗಳಿಂದ ಕೂಡಿದ್ದು, ಇವುಗಳಿಗೆ ಪರಿಹಾರ ಹುಡುಕಬೇಕು ಎಂಬ ತುಡಿತ ಬುದ್ಧನಲ್ಲಿತ್ತು. ಆಗ ರಾತ್ರೋರಾತ್ರಿ ಹೆಂಡತಿ, ಮಗನನ್ನು ಬಿಟ್ಟು ಲೋಕ ಸಂಚಾರನಾಗಿ ಹೊರಡುತ್ತಾನೆ. ಮುಂದೆ ಜ್ಞಾನೋದಯವಾಗಿ ಬುದ್ಧನಾಗುತ್ತಾನೆ ಎಂದರು.
ಇಂದಿನ ಹುಣ್ಣಿಮೆ ಪೂಜೆ ಮತ್ತು ಪ್ರಸಾದನವನ್ನು ಉಪಾಸಕರಾದ ರೇಖಾ ಮಂಜುನಾಥ ಕೊಂಬಿನ್ ನಡೆಸಿಕೊಟ್ಟರು. ಟ್ರಸ್ಟ್ ಅಧ್ಯಕ್ಷ ಲಾಲಪ್ಪ ಹೊಸ್ಮನಿ, ಮಲ್ಲಿಕಾರ್ಜುನ ಬಡಿಗೆರ ಕರಡಕಲ್, ಶರಣಪ್ಪ ಗಾಯಕವಾಡ, ಮಾನಪ್ಪ ಬಡಿಗೆರ ಹದನೂರ, ಶರಣಪ್ಪ ವಾಡಿ, ಮಡಿವಾಳಪ್ಪ ಕಟ್ಟಿಮನಿ, ಶರಣು ನಾಗರಡ್ಡಿ, ಸಂಗಣ್ಣ ಚಿಂಚೋಳಿ , ಬಸವಣ್ಣೆಪ್ಪ ಕೆಂಭಾವಿಕರ್ , ಮರೆಪ್ಪ ಗೌಂಡಿ , ಧರ್ಮಣ್ಣ ಬಡಿಗೇರ, ಬಸವರಾಜ ಮುದನೂರ, ಶಾಂತಪ್ಪ ಆಣಿಗೇರಿ , ಬಸವರಾಜ ಚಿಂಚೋಳಿ ಸುಭಾಷ್ ಕಟ್ಟಿಮನಿ, ಸಂತೋಷ ಯಾಕ್ತಾಪೂರ, ಪರಶುರಾಮ ಮಾಳಳ್ಳಿಕರ್, ಶಿವಣ್ಣ ನಾಟ್ಟೆಕಾರ, ಯಲಪ್ಪ ಭಾವಿಮನಿ, ಮರೆಪ್ಪ ಕಟ್ಟಿಮನಿ, ಬಸವಭೀಮ್ ಕಾಖಂಡಕಿ, ಬಸವರಾಜ ಯಡಿಯಾಪೂರ, ಸಿಂದ್ದಣ್ಣ ಧಣಿ, ಶಂಕರ್ ಮಲ್ಲಾ, ಪರಶುರಾಮ ಮುಂದನೂರ, ರಾಜು ಯಾಳಗಿ, ಪರಶುರಾಮ ಚಿಂಚೋಳಿ, ಮಲ್ಲಿಕಾರ್ಜುನ ಕಟ್ಟಿಮನಿ, ಯಲ್ಲಪ್ಪ ಮಾನಸುಣಗಿ ಬಸಮ್ಮ ಮಾಳಳ್ಳಿಕರ್, ಶಿಲ್ಪಾ ಆರ್. ಮಾಲಗತ್ತಿ, ಭೀಮಬಾಯಿ, ಭಾಗ್ಯಶ್ರೀ ನೀಲಮ್ಮ, ಜಯಶ್ರೀ, ರೇಣುಕಾ, ಬೋರಮ್ಮಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು ವಿವಿಧ ಗ್ರಾಮದ ಉಪಾಸಕ ಉಪಾಸಕಿಯರು ಭಾಗವಹಿಸಿದ್ದರು.




