ಜೆಡಿಎಸ್ ಮೈತ್ರಿಯೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 180ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ: ಆರ್ ಅಶೋಕ್

1 year ago

ಪದ್ಮನಾಭನಗರ ವಿಧಾನಸಭಾ ಮಂಡಲ ಬಿಜೆಪಿ ಅಧ್ಯಕ್ಷರಾಗಿ ಎನ್.ಲಕ್ಷ್ಮಿಕಾಂತ್ ಪದಗ್ರಹಣ

ಬೆಂಗಳೂರು: ಪದ್ಮನಾಭನಗರ ಶಾಸಕರ ಕಛೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್.ಲಕ್ಷ್ಮಿಕಾಂತ್ ರವರ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ತೇಜಸ್ವಿಸೂರ್ಯ, ನಗರ ದಕ್ಷಿಣ ಜಿಲ್ಲಾಧ್ಯಕ್ಷ, ಶಾಸಕರಾದ ಸಿ.ಕೆ.ರಾಮಮೂರ್ತಿ ಬಿಜೆಪಿ ಪಕ್ಷದ ಧ್ವಜವನ್ನು ನೂತನ ಮಂಡಲ ಅಧ್ಯಕ್ಷ ಎನ್.ಲಕ್ಷ್ಮಿಕಾಂತ್ ರವರಿಗೆ ಹಸ್ತಾಂತರ ಮಾಡುವ ಮೂಲಕ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆರ್.ಅಶೋಕ್ ಮಾತನಾಡಿ, ಅಧ್ಯಕ್ಷ ಪದವಿ ಎಂದರೆ ಗೌರವ ಎಂದು ತಿಳಿಯಬೇಡಿ. ಬಹಳ ಸಂಕಷ್ಟ. ಬೈಯಸಿಕೊಳ್ಳಲು ರೆಡಿ ಇರಬೇಕು. ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ, ಸಂಘಟನೆ ಮಾಡುವುದು ಬಹಳ ಕಷ್ಟ. ಅಧಿಕಾರ ಸಿಕ್ಕ ಮೇಲೆ ಜನರಿಗೆ ನ್ಯಾಯ ಒದಗಿಸಬೇಕು. ವಿಧಾನಸಭಾ ಚುನಾವಣೆ 55 ಸಾವಿರ ಅತ್ಯಧಿಕ ಮತ ಬಂದಿದೆ. ಈಗ ಅದಕ್ಕಿಂತ ಹೆಚ್ಚು ಮತಗಳ ಲೀಡ್ ಬರುವಂತೆ ಸಂಘಟನೆ ಮಾಡಬೇಕು ಎಂದರು.

ವಿದ್ಯೆ ಕೊಡುವ 10 ವಿಶ್ವವಿದ್ಯಾಲಯಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚುತ್ತಿದೆ. ಆಸ್ಪತ್ರೆಯಲ್ಲಿ ವೈದ್ಯರಿಗೆ ಸಿಬ್ಬಂದಿಗಳಿಗೆ ಸಂಬಳ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರದ ಹಣವಿಲ್ಲ. ಇ-ಖಾತ ಪಡೆಯಲು 12 ಸಾವಿರ ಹೇಳುತ್ತಿದ್ದಾರೆ. ಆದರೆ ಪದ್ಮನಾಭನಗರದಲ್ಲಿ ಒಂದು ರೂಪಾಯಿ ಪಡೆಯದೇ ಇ-ಖಾತಾ ಮಾಡಿಕೊಡಲಾಗುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದವರು ಬಿಜೆಪಿ ಸರ್ಕಾರದ ವಿರುದ್ಧ  40 ಪರ್ಸೆಂಟ್ ಸರ್ಕಾರ ಎಂದು ಹೇಳಿದರು. ಆದರೆ ಒಂದು ದಾಖಲೆ ನೀಡಿಲ್ಲ, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಮೇಲೆ ಅಮಾಯಕರು, ಮಕ್ಕಳು ಎಂದು ಡಿ.ಕೆ.ಶಿವಕುಮಾರ್ ಹೇಳಿದರು ಎಂದರು.

ಮುಂದಿನ ಬಾರಿ ಕಾಂಗ್ರೆಸ್ ಪಕ್ಷದ ಅಲೆ ಇರುವುದಿಲ್ಲ. ಕಾಂಗ್ರೆಸ್ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ  ಮೂರು ಬಾರಿ ಸೊನ್ನೆ ಫಲಿತಾಂಶ ಪಡೆದಿದೆ. ಜೆಡಿಎಸ್ ಪಕ್ಷದ ಮೈತ್ರಿಯೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 180ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.

ಅಕ್ಕಿ ಅನ್ನನಾ ಹೇಳುತ್ತದೆ ನೀನು ಹೆಂಗೆ ಅನ್ನವಾದೆ ಎಂದು. ಅಕ್ಕಿ ಹೇಳಿತು, ನೀರಿನ ಜೊತೆ ಬೆರೆತೆ, ಬೆಂಕಿ ಸ್ಪರ್ಶ ಮಾಡಿತು ಅದಕ್ಕೆ ಮೃದುವಾಗಿ  ಅನ್ನವಾದೆ ಅನ್ನ ಎಂಬ ದೈವತ್ವ ಪಡೆದೆ ಎಂದು ಹೇಳಿತು. ಅದೇ ರೀತಿ ಕಾರ್ಯಕರ್ತ ಬೆಂಕಿಯಲ್ಲಿ ಬೆಂದು, ನೀರಿನಲ್ಲಿ ಬೆರೆತು ದೇವರ ಪ್ರಸಾದದ ಅನ್ನವಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ತೇಜಸ್ವಿ ಸೂರ್ಯ ಮಾತನಾಡಿ, ಭಾರತೀಯ ಜನತಾ ಪಾರ್ಟಿ ವಿಶೇಷತೆ ಎಂದರೆ ಅಧ್ಯಕ್ಷರಾಗಿ ಮೂರು ವರ್ಷ ಸೇವೆ ಸಲ್ಲಿಸಿದ ನಂತರ ಇನ್ನೊಬ್ಬರಿಗೆ ಅಧಿಕಾರ ಹಸ್ತಾಂತರ ಮಾಡುವ ಸಂಪ್ರದಾಯ ಬಿಜೆಪಿ ಪಕ್ಷದಲ್ಲಿ ಇದೆ. ಕಾರ್ಯಕರ್ತರ ಪರಿಶ್ರಮದಿಂದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ 50 ಸಾವಿರ ಅತ್ಯಧಿಕ ಮತಗಳಿಂದ ಜಯ ದಾಖಲಿಸಲಾಗಿದೆ ಎಂದರು.

ಯುವಕರಿಗೆ ಹೆಚ್ಚಿನ ರೀತಿಯಲ್ಲಿ ಅವಕಾಶ ಸಿಗಲಿದೆ. ಪದ್ಮನಾಭನಗರ ಕ್ಷೇತ್ರದ ಕಾರ್ಯಕರ್ತರ ಪರಿಶ್ರಮದಿಂದ ನನಗೆ ರಾಷ್ಟ್ರ ಪ್ರವಾಸ ಮತ್ತು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರಿಗೆ ರಾಜ್ಯ ಪ್ರವಾಸ ಮಾಡಲು ಅನುಕೂಲವಾಗಿದೆ ಎಂದರು

ಸಿ.ಕೆ.ರಾಮಮೂರ್ತಿ ಮಾತನಾಡಿ, ದಕ್ಷ್ಮಿಣ ಲೋಕಸಭಾ ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನ ಮತ್ತು ಬೂತ್ ಸಮಿತಿ ಶೇಕಡ 100ರಷ್ಟು ಮಾಡಲಾಗಿದೆ. ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಸಂಘಟನೆ ಮಾಡುವುದು ಅಧ್ಯಕ್ಷರ ಜವಾಬ್ದಾರಿಯಾಗಿದೆ. ಬಿಜೆಪಿ ಪಕ್ಷ ಎಂದರೆ ಶಿಸ್ತು ಮತ್ತು ನಿಷ್ಟಾವಂತ ಕಾರ್ಯಕರ್ತರಿಗೆ ಉತ್ತಮ ಅವಕಾಶ ಸಿಗಲಿದೆ.  ಆರ್.ಅಶೋಕ್ ರವರು ವಿರೋಧ ಪಕ್ಷದ ನಾಯಕರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಎನ್.ಲಕ್ಷ್ಮಿಕಾಂತ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಕಾರ್ಯನಿರ್ವಹಿಸುತ್ತ ನಂತರ ಬಿಜೆಪಿ ಪಕ್ಷದಲ್ಲಿ 35 ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಬಿಜೆಪಿ ಪಕ್ಷದ ನಗರ ಘಟಕ ಮತ್ತು ಹಿಂದುಳಿದ ವರ್ಗಗಳ ವಿಭಾಗ ಇದೀಗ ಮಂಡಲ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿರವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂಘಟನೆ ಮಾಡಿದ ಕಾರಣ ದೇಶದಲ್ಲಿ ಉತ್ತಮ ರಾಜಕಾರಣಿಗಳ ರಾಜಕಾರಣಕ್ಕೆ ಬಂದರು. ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಮತ್ತು 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ಕಾರ್ಯಕರ್ತ ಆಧಾರಿತ ವಿಶ್ವದ ದೇಶ ಸದಸ್ಯತ್ವ  ಹೊಂದಿರುವ ಪಕ್ಷವಾಗಿದೆ ಎಂದರು.

ಪ್ರಮೀಳ ಅಶೋಕ್, ಯುವ ಮುಖಂಡ ಶರತ್ ಅಶೋಕ್ ,ಪೂರ್ಣಿಮಾ ಪ್ರಕಾಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಎ.ಹೆಚ್.ಬಸವರಾಜ್, ಸಂಗಾತಿ ವೆಂಕಟೇಶ್, ಚನ್ನಗಿರಿಯಪ್ಪ, ಯೋಶೋಧ ಲಕ್ಷ್ಮಿಕಾಂತ್, ಸಂಗಾತಿ ವೆಂಕಟೇಶ್, ಬಿಜೆಪಿ ಮುಖಂಡ ಎಂ.ಆರ್.ವಿ.ಪ್ರಸಾದ್, ಉಮೇಶ್ ಕಬ್ಬಾಳು, ಅಂಜನಪ್ಪ, ಪುರುಷೋತ್ತಮ, ರವಿ, ವಿಜಯ್ ಎನ್.ಎ.ಕಿಶೋರ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Leave a Reply