ಬಿಜೆಪಿ, ಆರ್.ಎಸ್.ಎಸ್. ಸಂವಿಧಾನವನ್ನು ನಾಶ ಮಾಡಲು ಸಂಚು ರೂಪಿಸಿವೆ: ಮಲ್ಲಿಕಾರ್ಜುನ ಖರ್ಗೆ

2 years ago

ಬೆಂಗಳೂರು: ದೇಶದಲ್ಲಿ ಬಿಜೆಪಿ ಮತ್ತು ಆರ್ಎ್ಸ್ಎನಸ್ ಸಂಘಟನೆಗಳು ಸಂವಿಧಾನವನ್ನು ನಾಶ ಮಾಡಲು ಯತ್ನಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಸಂಘ ಪರಿವಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರವಾದ ಆರೋಪವನ್ನು ಹೊರಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವರು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಾ, ತಮ್ಮದೇ ಮಹಾನ್ ಸಾಧನೆ, ತಮ್ಮಿಂದಲೇ ಎಲ್ಲಾ ಎಂದು ಹೇಳಿಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳದೆ ಪರೋಕ್ಷವಾಗಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ, ಆರ್ಎ ಸ್ಎಗಸ್ ಸಂವಿಧಾನವನ್ನು ನಾಶ ಮಾಡಲು ಸಂಚು ರೂಪಿಸಿದೆ. ಸ್ವಾತಂತ್ರ್ಯ, ಸಂವಿಧಾನ ಉಳಿದರೆ ಮುಂದಿನ ಪೀಳಿಗೆಗೆ ಅವಕಾಶ ಇರುತ್ತದೆ. ಇಲ್ಲವಾದರೆ ಯಾರಿಗೂ ಅವಕಾಶ ಸಿಗುವುದಿಲ್ಲ. ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ಸಿಗರು ಪಣ ತೊಡಬೇಕಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನ ಹೋರಾಟದ ಮೂಲಕ ಗೆಲ್ಲಬೇಕು ಎಂದು ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಕರೆ ನೀಡಿದರು.

ಸಂವಿಧಾನವನ್ನು ಅರ್ಪಿಸುವಾಗ ಅಂಬೇಡ್ಕರ್ ಅವರು ಸಂವಿಧಾನ ಒಳ್ಳೆಯದಾಗಿ ಅನುಷ್ಠಾನಕ್ಕೆ ತರಬೇಕು, ಅದನ್ನು ಜಾರಿ ಮಾಡುವವರು ಒಳ್ಳೆಯವರಾಗಿದ್ದರೆ ಮಾತ್ರ ಜನರಿಗೆ ಒಳ್ಳೆಯದಾಗುತ್ತದೆ. ಇಲ್ಲವಾದರೆ ಕೆಟ್ಟದಾಗುತ್ತದೆ ಎಂದು ಹೇಳಿದ್ದರು. 1949ರಲ್ಲಿ ಅಂಬೇಡ್ಕರ್ ಹೇಳಿದ ಮಾತು ಇಂದು ನಿಜವಾಗುತ್ತಿದೆ. ದೇಶದಲ್ಲಿಂದು ಸಂವಿಧಾನ ಜಾರಿ ಮಾಡುವ ಜನ ಸರಿ ಇಲ್ಲದಿದ್ದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರು.

ದೇಶದಲ್ಲಿ ಸಮೃದ್ಧಿ ಬಂದಿದೆ ಎಂದು ಬಿಂಬಿಸಲಾಗುತ್ತಿದೆ, ಎಲ್ಲಿದೆ ಸಮೃದ್ಧಿ? ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗೆ ದೇಶದ ಒಟ್ಟು ಸಾಲ 55 ಲಕ್ಷ ಕೋಟಿ ಮಾತ್ರವಿತ್ತು. ಕಳೆದ 10 ವರ್ಷದಲ್ಲಿ ಅದು ಏಕಾಏಕಿ ದುಪ್ಪಟ್ಟು ಹೆಚ್ಚಾಗಿದೆ. ಪ್ರಸ್ತುತ ದೇಶದ ಇಂದಿನ ಸಾಲ 1.50 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನಕ್ಕೆ ಧಕ್ಕೆಯಿದೆ. ನಿರುದ್ಯೋಗ ಹೆಚ್ಚಳದಿಂದ ಯುವ ಸಮುದಾಯಕ್ಕೆ ಧಕ್ಕೆಯಾಗಲಿದೆ. ಹಣದುಬ್ಬರದಿಂದ ಜನ ಸಾಮಾನ್ಯರಿಗೆ ಸಂಕಷ್ಟಗಳಿವೆ ಎಂದರು.

ನಮ್ಮ ಪಕ್ಷ ಬಡವರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಹೆಣ್ಣುಮಕ್ಕಳು, ಎಸ್ಸಿ, ಎಸ್ಟಿಗಳ ಬಗ್ಗೆ ಕಾಳಜಿ ಹೊಂದಿದೆ. ಸಂವಿಧಾನದೊಂದಿಗೆ ಹೆಣ್ಣುಮಕ್ಕಳಿಗೆ ಸಂವಿಧಾನದೊಂದಿಗೆ ಮತದಾನದ ಹಕ್ಕು ನೀಡಲಾಯಿತು. ಮುಂದುವರೆದ ದೇಶದಲ್ಲೇ ಮಹಿಳೆಯರಿಗೆ ಮತದಾನದ ಹಕ್ಕಿರಲಿಲ್ಲ. ಅಂತಹ ಕಾಲದಲ್ಲಿ ಅಂಬೇಡ್ಕರ್ ಮತ್ತು ನೆಹರು ಅವರು ಹೆಣ್ಣು ಮಕ್ಕಳ ಸಮಾನತೆಗೆ ವಿಶ್ವದಲ್ಲೇ ಮೊಟ್ಟಮೊದಲಿಗೆ ಆದ್ಯತೆ ನೀಡಿದರು ಎಂದರು.

ಶ್ರೀಮಂತರು, ಪ್ರಭಾವಿಗಳು, ಬಡವರು, ಕಾರ್ಮಿಕರು ಎಂಬ ಬೇಧವಿಲ್ಲದೆ ಸಂವಿಧಾನ ಎಲ್ಲರಿಗೂ ಸಮಾನವಾದ ಮತದಾನದ ಹಕ್ಕು ನೀಡಿದೆ. ಟಾಟಾ-ಬಿರ್ಲಾ, ಅಂಬಾನಿ-ಅದಾನಿಯವರ ಮತಕ್ಕೆ ಇರುವಷ್ಟೆ ಮೌಲ್ಯ, ಜನಸಾಮಾನ್ಯರ ಮತಕ್ಕೂ ಇದೆ. ಬಹಳಷ್ಟು ಮಂದಿಗೆ ಇತಿಹಾಸವೇ ಗೊತ್ತಿಲ್ಲ. ಅನಗತ್ಯವಾಗಿ ಟೀಕೆ ಮಾಡುತ್ತಾರೆ. ಯುವಕರಿಗೂ ಕೂಡ ಯಾರು ಸ್ವಾತಂತ್ರ್ಯ ತಂದು ಕೊಟ್ಟರು, ಹೋರಾಟ ಮಾಡಿದ್ಯಾರು ಎಂಬ ಮಾಹಿತಿ ತಿಳಿದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

Leave a Reply