ಕರ್ನಾಟಕ ಬಿಜೆಪಿಯ ‘ವಂಶಾವಳಿ’ ಪೋಸ್ಟ್ ಮಾರ್ಟಂ!
ಪ್ರಧಾನಿ ಮೋದಿಯಿಂದ ಹಿಡಿದು ಬಿಜೆಪಿಯ ತಳಹಂತದ ನಾಯಕರವರೆಗೆ ಎಲ್ಲರೂ ‘ವಂಶಪಾರಂಪರ್ಯ ರಾಜಕಾರಣ’ದ ವಿರುದ್ಧ ಮಾತನಾಡುತ್ತಾರೆ. ಆದರೆ ಬಿಜೆಪಿಯಲ್ಲಿ ವಂಶಪಾರಂಪರ್ಯ ರಾಜಕಾರಣ ಇಲ್ಲವೇ? ಈ ಬಾರಿ ಟಿಕೆಟ್ ಪಡೆದ ‘ರಾಜಕೀಯ ವಂಶ’ಗಳ ಕುಡಿಗಳ ವಿವರ ಇಲ್ಲಿದೆ ನೋಡಿ.
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ವಂಶದಿಂದ ಬಂದವರು. ಅವರ ಅಪ್ಪ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು.
- ಬಿ.ಎಸ್.ಯಡಿಯೂರಪ್ಪ ಅವರ ಒಬ್ಬ ಮಗ ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ. ಇನ್ನೊಬ್ಬ ಮಗ ಬಿ.ವೈ.ವಿಜಯೇಂದ್ರ ಶಿಕಾರಿಪುರದಲ್ಲಿ ಅಭ್ಯರ್ಥಿ.
- ರವಿ ಸುಬ್ರಹ್ಮಣ್ಯ ಬಸವನಗುಡಿ ಅಭ್ಯರ್ಥಿ, ಅವರ ಅಳಿಯ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಸಂಸದ.
- ಜಿ.ಎಸ್. ಬಸವರಾಜು ಈಗಾಗಲೇ ತುಮಕೂರು ಸಂಸತ್ ಸದಸ್ಯ, ಅವರ ಪುತ್ರ ಜ್ಯೋತಿ ಗಣೇಶ್ ಬಿಜೆಪಿ ಅಭ್ಯರ್ಥಿ.
- ಅಣ್ಣತಮ್ಮಂದಿರಾದ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಇಬ್ಬರೂ ಬಿಜೆಪಿ ಅಭ್ಯರ್ಥಿಗಳು.
- ಉಮೇಶ್ ಕತ್ತಿ ಸಹೋದರ ಮತ್ತು ಪುತ್ರ ಇಬ್ಬರೂ ಈ ಬಾರಿ ಬಿಜೆಪಿ ಅಭ್ಯರ್ಥಿಗಳು.
- ಸೋದರರಾದ ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ ಇಬ್ಬರೂ ಬಿಜೆಪಿ ಅಭ್ಯರ್ಥಿಗಳು.
- ಸಂಸದ ಶ್ರೀನಿವಾಸ ಪ್ರಸಾದ ಅವರ ಅಳಿಯ ಹರ್ಷವರ್ಧನ್ ಬಿಜೆಪಿ ಅಭ್ಯರ್ಥಿ.
- ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರ ಪತ್ನಿ ಶಶಿಕಲಾ ಜೊಲ್ಲೆ ಬಿಜೆಪಿ ಅಭ್ಯರ್ಥಿ.
- ಮಾಜಿ ಸಚಿವ ನಾಗಪ್ಪ ಅವರ ಪುತ್ರ ಪ್ರೀತಂ ನಾಗಪ್ಪ ಬಿಜೆಪಿ ಅಭ್ಯರ್ಥಿ
- ಸಂಸದ ಉಮೇಶ್ ಜಾದವ್ ಅವರ ಪುತ್ರ ಅವಿನಾಶ್ ಜಾದವ್ ಬಿಜೆಪಿ ಅಭ್ಯರ್ಥಿ.
- ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಮಗ ಕುಮಾರ್ ಬಂಗಾರಪ್ಪ ಬಿಜೆಪಿ ಅಭ್ಯರ್ಥಿ.
- ಮಾಜಿ ಶಾಸಕ ಚಂದ್ರಶೇಖರ ಪಾಟೀಲ್ ರೇವೂರ ಮಗ ದತ್ತಾತ್ರೇಯ ಪಾಟೀಲ್ ಬಿಜೆಪಿ ಅಭ್ಯರ್ಥಿ.
- ಮಾವ-ಅಳಿಯ ಶ್ರೀರಾಮುಲು, ಸುರೇಶ್ ಬಾಬು ಬಿಜೆಪಿ ಅಭ್ಯರ್ಥಿಗಳು.
- ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್ ಮಗ ಅರವಿಂದ ಬೆಲ್ಲದ್ ಬಿಜೆಪಿ ಅಭ್ಯರ್ಥಿ.
- ಚಂದ್ರಕಾಂತ್ ಪಾಟೀಲ್ ಬಿಜೆಪಿ ಅಭ್ಯರ್ಥಿ. ಅವರ ಅಪ್ಪ ಮಾಜಿ ಎಂಎಲ್ ಸಿ
- ಸಪ್ತಗಿರಿ ಗೌಡ ಬಿಜೆಪಿ ಅಭ್ಯರ್ಥಿ. ಅವರ ತಂದೆ ರಾಮಚಂದ್ರಗೌಡ ಮಾಜಿ ಸಚಿವರು.
- ಮಾಜಿ ಶಾಸಕ ಅಯ್ಯಪ್ಪ ದೇಸಾಯಿ ಪುತ್ರ ಅಮೃತ್ ದೇಸಾಯಿ ಬಿಜೆಪಿ ಅಭ್ಯರ್ಥಿ.
- ಮಾಜಿ ಸಚಿವ ಆನಂದ್ ಸಿಂಗ್ ಮಗ ಸಿದ್ಧಾರ್ಥ್ ಸಿಂಗ್ ಬಿಜೆಪಿ ಅಭ್ಯರ್ಥಿ.
- ಮಾಜಿ ಸಚಿವ ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿ.
ಸಾಕಾ? ಇನ್ನೂ ಬೇಕಾ?
ಬಿಜೆಪಿಯವರು ‘ವಂಶಪಾರಂಪರ್ಯ’ ‘ಪರಿವಾರವಾದ’ ಎಂದು ತಲೆತಿನ್ನಲು ಬಂದರೆ, ಈ ಪಟ್ಟಿ ಮೂತಿಗೆ ಹಿಡಿದು ಇದೆಲ್ಲ ಏನ್ರಪ್ಪ ಎಂದು ತಪ್ಪದೇ ಪ್ರಶ್ನಿಸಿ.
– ದಿನೇಶ್ ಕುಮಾರ್ ಎಸ್.ಸಿ., ಹಿರಿಯ ಪತ್ರಕರ್ತರು




