ಗುಜರಾತಿ ವ್ಯಾಪಾರಿಗಳಿಗೆ ಮಾರಿಕೊಂಡ ಕರ್ನಾಟಕದ ಬಿಜೆಪಿ ‘ನಾಯಕ’ರು..!?
ಗುಜರಾತಿಗಳು ಮೂಲತಃ ವ್ಯಾಪಾರಿಗಳು, ವ್ಯಾಪಾರ, ವಹಿವಾಟೆಂದರೆ ಅವರು ಏನನ್ನಾದರೂ ಮಾಡಬಲ್ಲರು..! ಏನನ್ನಾದರೂ ಮಾರಬಲ್ಲರು, ಏನನ್ನಾದರೂ ಕೊಳ್ಳಬಲ್ಲರು ಅನ್ನಲಿಕ್ಕೆ ದೇಶದ ಆಸ್ತಿಗಳನ್ನೇ ಮಾರುತ್ತಿರುವ ಮೋದಿ, ಅದಾನಿಗಳನ್ನು ಮತ್ತು ಆ ಆಸ್ತಿಗಳನ್ನು ಕೊಳ್ಳುತ್ತಿರುವ ಅಂಬಾನಿ ಅದಾನಿಗಳನ್ನು ನಾವು ನೋಡಿದ್ದೇವೆ. ಇಲ್ಲಿ ಮಾರುವವರು ಮತ್ತು ಕೊಳ್ಳುವವರು ಇಬ್ಬರೂ ಗುಜರಾತಿಗಳೇ ಎನ್ನುವುದು ಗಮನಾರ್ಹ. ಇವರ ವ್ಯಾಪಾರದ ವಿಷಯದಲ್ಲಿ ಯಾವುದೇ ideology, sense of belongingness, ಗಳೆಂಬ ಯಾವುದೇ ಸಿದ್ದಾಂತಗಳು, ಭಾವನೆಗಳು ಇರುವುದಿಲ್ಲ. ಅದಕ್ಕೇ ಇವರು ಯಾವುದನ್ನೂ ಹೃದಯದಿಂದ ನಿರ್ವಹಿಸುವುದಿಲ್ಲ ಕೇವಲ ಮೆದುಳಿನಿಂದಲೇ ಎಲ್ಲವನ್ನೂ ನಿರ್ವಹಿಸುತ್ತಾರೆ. ಇವರಿಗೆ ಲಾಭನಷ್ಟಗಳನ್ನು ಹೊರತುಪಡಿಸಿ ಮತ್ತೇನೂ ಕಾಣುವುದೂ ಇಲ್ಲ, ಮುಖ್ಯವೂ ಅಲ್ಲ. ಇದು ಕೇವಲ ಇಂದು, ನಿನ್ನೆಯದಲ್ಲ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಇವರ ವ್ಯಾಪಾರ ದಾಹ ಅರ್ಥವಾಗುತ್ತದೆ!
ಜಗತ್ತಿನಲ್ಲಿ ಅಥವಾ ದೇಶದಲ್ಲಿ ಎಲ್ಲೇ ಆಗಲಿ ಲಾಭವಾಗುವಂತದ್ದು ಏನೇ ಇದ್ದರೂ ಅದು ಇವರಿಗೇ ಬೇಕು..!
ಸುಮ್ಮನೆ Chronology ಯನ್ನು ಗಮನಿಸಿ.. “ನಂದಿನಿಯನ್ನು ಅಮುಲ್ ನೊಂದಿಗೆ ವಿಲೀನಗೊಳಿಸುತ್ತೇವೆ” ಎಂಬ ಅರ್ಥದಲ್ಲಿ ಅಮಿತ್ ಷಾ ಎಂಬ ಗುಜರಾತಿ ಮಾರ್ವಾಡಿ ಮತ್ತು ರಾಜಕಾರಣಿ ಮಾತಾಡಲು ಆರಂಭಿಸಿದರು. ಇದನ್ನು ಕಂಡೂ ಕಾಣದಂತೆ ಮೋದಿ ಎಂಬ ಮತ್ತೊಬ್ಬ ಗುಜರಾತಿ ರಾಜಕಾರಣಿ ಜಾಣಮೌನ ವಹಿಸಿದ್ದರು. ನಮ್ಮವರು ಆರಿಸಿ ಕಳಿಸಿದ ಇಪ್ಪತ್ತಾರು ಮಂದಿ ನಫ್ತಟಾಲ್ ಲೋಕಸಭಾ ಸದಸ್ಯರು ದ್ವನಿಮಾಡಲಿಲ್ಲ! ಈ ಅನೈತಿಕ ವಿಲೀನಕ್ಕೆ ವಿರುದ್ದವಾಗಿ ಕನ್ನಡಪರ ಸಂಘಟನೆಗಳ ಮತ್ತು ಸಾರ್ವಜನಿಕ ಪ್ರತಿರೋಧ ಬಂದಾಕ್ಷಣ ಗುಜರಾತಿ ಲೀಡರ್ ಗಳು ಮತ್ತು ಅವರ ಚೇಲಾಗಳಾದ ಕರ್ನಾಟಕದ ಅನ್ನ ತಿನ್ನುವ ಪುಡಾರಿಗಳು ತೆಪ್ಪಗಾದರು.
ನಿದಾನಕ್ಕೆ ನಂದಿನಿ ಮೊಸರಿನ ಮೇಲೆ ‘ದಹಿ’ ಅಂತ ಮುದ್ರಿಸಿ ಪ್ರತಿಕ್ರಿಯೆಗಾಗಿ ಕಾದು ಕುಳಿತರು. ಈ ಸಲ ಕನ್ನಡ ಸಂಘಟನೆಗಳನ್ನು ಹೊರತುಪಡಿಸಿ ಸಾರ್ವಜನಿಕರಿಂದ ಅಂತಹ ಪ್ರತಿರೋಧ ಬರಲಿಲ್ಲ.. ಕೆಲವು ಮಂದಿ ನಾರ್ಥೀಗಳಿಗೆ ಹುಟ್ಟಿದವರು “ಹಿಂದಿಯಲ್ಲಿ ಮುದ್ರಿಸಿದರೆ ಏನು ತಪ್ಪು..?” ಎಂದು ತಮ್ಮ ‘ರಾಷ್ಟ್ರಪ್ರೇಮ’ ಮೆರೆದರು.
ಇದನ್ನು ಅರ್ಥಮಾಡಿಕೊಂಡ ಗುಜರಾತಿಗಳು ಮೆಲ್ಲಗೆ ಅಮುಲ್ ಹಾಲನ್ನು ಕರ್ನಾಟಕದ ಮಾರುಕಟ್ಟೆಗೆ ಬಿಡತೊಡಗಿದರು! ಇದು ನಮ್ಮ ನಂದಿನಿ ಹಾಲಿನ ಮಾರಾಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆಂದು ಕರ್ನಾಟಕದ ಬಿಜೆಪಿ ನಾಯಕರಿಗೆ ಗೊತ್ತಿಲ್ಲದಿರಲಿಲ್ಲ! ಇದು ಕರ್ನಾಟಕದ ನಂದಿನಿ ಮಾರುಕಟ್ಟೆಯ ಮೇಲೆ ಅದೆಷ್ಟು ಪರಿಣಾಮ ಬೀರುತ್ತದೆಂದು ಊಹಿಸದ ಕೆಲವರು “ಏನು ತಪ್ಪು.. ಕರ್ನಾಟಕದಲ್ಲಿ ಅಮುಲ್ ಹಾಲನ್ನು ಯಾಕೆ ಮಾರಬಾರದು..? ಗುಜರಾತ್ ಭಾರತದಲ್ಲಿಲ್ಲವೆ?” ಎಂದು ಕುರುಡುವಾದ ಮಂಡಿಸುತಿದ್ದಾರೆ.
ಕೆ.ಎಂ.ಎಫ್ ಸಹಕಾರಿ ಸಂಘದಲ್ಲಿ 24.36 ಲಕ್ಷ ಹಾಲು ಉತ್ಪಾದಕರಿದ್ದು ಅದರಲ್ಲಿ 4.34 ಲಕ್ಷ ಮಂದಿ ಭೂಹೀನ ವರ್ಗದವರಿದ್ದಾರೆ, 9.01 ಲಕ್ಷ ಸಣ್ಣ ರೈತರಿದ್ದಾರೆ. 7.11 ಲಕ್ಷ ಮಾರ್ಜಿನಲ್ ರೈತರಿದ್ದಾರೆ. 3.90 ಲಕ್ಷ ಇತರರಿದ್ದಾರೆ, ಒಟ್ಟಾರೆ 8.66 ಲಕ್ಷ ಮಹಿಳೆಯರಿದ್ದಾರೆ. 3.94 ಲಕ್ಷ ಮಂದಿ ಎಸ್.ಸಿ ಮತ್ತು ಎಸ್.ಟಿ.ಸಮುದಾಯದವರಿದ್ದಾರೆ. ಗುಜರಾತಿಗಳ ಈ ಒಂದು ವ್ಯಾಪಾರಿ ನಡೆಯಿಂದ ಕರ್ನಾಟಕದ ರೈತ ಕುಟುಂಬಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ಇಲ್ಲಿನ ಬಿಜೆಪಿ ಪುಡಾರಿಗಳು ಅರಿಯಲು ಪ್ರಯತ್ನಿಸಲಿಲ್ಲ! ಹಾಲು ಉತ್ಪಾದಕ ರೈತರಿಗೆ ಪ್ರತಿದಿನ ಅಂದಾಜು ಹತ್ತೊಂಬತ್ತು ಕೋಟಿ ಹಣವನ್ನು ಕೆ.ಎಂ.ಎಫ್. ನೀಡುತ್ತಿದೆ. “ನಂದಿನಿ ಡೈರಿ ಫಾರ್ಮರ್ಸ್ ವೆಲ್ಫೇರ್ ಟ್ರಸ್ಟ್” ನಿಂದ ರೈತರ ಮಕ್ಕಳಿಗೆ ಹಾಸ್ಟೆಲ್ ಗಳನ್ನು ನಡೆಸುತಿದ್ದಾರೆ. ಇದಕ್ಕೆ 12.96 ಕೋಟಿ ಖರ್ಚಾಗುತ್ತಿದೆ. 252 ಮಂದಿ ವಿದ್ಯಾರ್ಥಿನಿಯರು ಮತ್ತು 246 ಮಂದಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತಿದ್ದಾರೆ. ಲಕ್ಷಾಂತರ ಮಂದಿ ಕೃಷಿಕರು, ಕೃಷಿಕೂಲಿಕಾರರ ಕುಟುಂಬಗಳು ನಂದಿನಿಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ‘ನಂದಿನಿ’ಯ ಕತ್ತು ಹಿಚುಕಲು ಗುಜರಾತಿ ವ್ಯಾಪಾರಿಗಳು ಹೊರಟಿದ್ದಾರೆ. ಇದನ್ನು ನಮ್ಮ ಬಿಜೆಪಿ ನಾಯಕರು ಲಕ್ವ ಹೊಡೆದವರಂತೆ ನೋಡುತ್ತಾ ನಿಂತಿದ್ದಾರೆ
ಇಂತಹ ಪ್ರಯೋಗವನ್ನು ಗುಜ್ಜುಗಳು ಇತರೆ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣಗಳಲ್ಲಿ ಮಾಡ ಹೊರಟಿದ್ದರೆ ಈ ಗುಜ್ಜುಗಳನ್ನು ಕೆರದಲ್ಲಿ ಹೊಡೆದು ಓಡಿಸುತ್ತಿದ್ದರು. ಬಿಜೆಪಿ ಆಳ್ವಿಕೆಯ ಇಲ್ಲಿನ ನಾಡದ್ರೋಹಿಗಳು, ನಯವಂಚಕರು ಮಾತ್ರ ಇದರ ವಿರುದ್ಧ ಉಸಿರೆತ್ತುವ ದೈರ್ಯ ತೋರದೆ ಗುಜ್ಜುಗಳ ಗುಲಾಮರಾಗಿದ್ದಾರೆ.
ಇಲ್ಲಿನ ಬಿಜೆಪಿ ನಾಯಕರ ದುಸ್ಥಿತಿ ಹೇಗಿದೆಯೆಂದರೆ ಮೊನ್ನೆ ಒಬ್ಬ ಹಿರಿಯ ಬಿಜೆಪಿ ನಾಯಕರೊಂದಿಗೆ ಮಾತಾಡುತ್ತಿದ್ದೆ. ಆತ ತಮ್ಮ ಅಸಹಾಯಕತೆಗೆ ತಾವೇ ನಗುತ್ತಾ “ಸರ್, ಹಿಂದೆ, ನಾವು ದ್ವನಿಯೆತ್ತಿದರೆ ನಮ್ಮ ಲೀಡರ್ ಗಳು ನಮ್ಮ ಬಾಲ ಮಾತ್ರ ಕೊಯ್ಯುತಿದ್ದರು.. ಈಗ ಮುಂದೇನೆ ಕೊಯ್ದು ಬಿಡುತ್ತಾರೆ ಸಾರ್.. ಅಷ್ಟೇ..”
– ಸಿ.ಎಸ್.ದ್ವಾರಕಾನಾಥ್, ಹಿರಿಯ ನ್ಯಾಯವಾದಿ




