ವಿಧಾನಸಭೆ ಚುನಾವಣೆಗೆ ಭರದ ಸಿದ್ದತೆ ನಡೆಸಿರುವ ಬಿಜೆಪಿ

3 years ago

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಭರದ ಸಿದ್ದತೆ ನಡೆಸಿರುವ ಬಿಜೆಪಿ ಇದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಿ, ತಕ್ಷಣವೇ ಕೆಲಸ ಆರಂಭಿಸುವಂತೆ ಸೂಚಿಸಲಾಗಿದೆ.

ಮೊನ್ನೆ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಕೈಗೊಂಡ ನಿರ್ಧಾರದಂತೆ ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿ, ಜಿಲ್ಲಾ ಮೋರ್ಚಾ, ಫಲಾನುಭವಿಗಳ ಸಮ್ಮೇಳನ, ಯಾತ್ರಾ ಪ್ರಮುಖ್ ಸೇರಿದಂತೆ ಮತ್ತಿತರ ಸಮಿತಿಗಳಿಗೆ ನೇಮಕ ಮಾಡಿದೆ.

ಯಾತ್ರಾ ಪ್ರಮುಖ್‍ಗೆ ಸಚಿವ ಸಿ.ಸಿ.ಪಾಟೀಲ್, ವಿಧಾನಪರಿಷತ್ ಸದಸ್ಯ ರವಿಕುಮಾರ್ ಹಾಗು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಅವರನ್ನು ನೇಮಿಸಿದೆ.

ಯಾತ್ರೆ 1ಕ್ಕೆ ಎಂ.ರಾಜೇಂದ್ರ ಸಂಚಾಲಕರು, ಎಂ.ದತ್ತಾತ್ರಿ, ಕಿಶೋರ್ ಅವರನ್ನು ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ. ಯಾತ್ರೆ 2ಕ್ಕೆ ಸಂಚಾಲಕರಾಗಿ ಛಲವಾದಿ ನಾರಾಯಣಸ್ವಾಮಿ ಹಾಗೂ ಸಚ್ಚಿದಾನಂದಮೂರ್ತಿ, ಅ.ದೇವೇಗೌಡ ಅವರು ಸಹಸಂಚಲಾಕರಾಗಿದ್ದಾರೆ. ಯಾತ್ರೆ 3ಕ್ಕೆ ಅರುಣ್ ಶಹಾಪುರ ಸಂಚಾಲಕರು ಹಾಗೂ ವಿವೇಕಾನಂದ ಡಬ್ಬಿ, ಮತ್ತು ಮಲ್ಲಿಕಾರ್ಜುನ ಬಾಳೆಕಾಯಿ ಅವರುಗಳನ್ನು ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ. ಯಾತ್ರೆ 4ಕ್ಕೆ ರಘುನಾಥರಾವ್ ಮಲ್ಕಾಪುರೆ ಸಂಚಾಲಕರು, ಅಮರನಾಥ್ ಪಾಟೀಲ್ ಮತ್ತು ಸಿದ್ದೇಶ್ ಯಾದವ್ ಅವರುಗಳನ್ನು ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ.

ಮೋರ್ಚಾಗಳ ಜಿಲ್ಲಾ ಸಮಾವೇಶಕ್ಕೆ ಸಂಚಾಲಕರಾಗಿ ಬಿ.ವೈ.ವಿಜಯೇಂದ್ರ, ಸಹಸಂಚಾಲಕರಾಗಿ ಜಗದೀಶ್ ಹೀರೇಮನಿ ಮತ್ತು ಯಶಪಾಲ್ ಸುವರ್ಣ ಅವರನ್ನು ನೇಮಿಸಲಾಗಿದೆ. ಸದಸ್ಯರಾಗಿ ಈರಣ್ಣ ಕಡಾಡಿ, ಛಲವಾದಿ ನಾರಾಯಣಸ್ವಾಮಿ, ಗೀತಾ ವಿವೇಕಾನಂದ, ನರೇಂದ್ರಬಾಬು, ತಿಪ್ಪರಾಜು ಹವಾಲ್ದಾರ್, ಸಂದೀಪ್‍ಕುಮಾರ್ ಹಾಗೂ ಸಯ್ಯದ್ ಸಲಾಂ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

Leave a Reply