ದೇಶದ ಅಭಿವೃದ್ಧಿಗೆ ಬಿ.ಜೆ.ಪಿ. ಮಹತ್ವವಾದ ಕೊಡುಗೆ ನೀಡಿದೆ: ಎಂ.ಗೌತಮ್ ಕುಮಾರ್

3 years ago

ಬೆಂಗಳೂರು: ದೇಶದ ಅಭಿವೃದ್ಧಿಗೆ ಬಿ.ಜೆ.ಪಿ. ಮಹತ್ವವಾದ ಕೊಡುಗೆ ನೀಡಿದೆ ಎಂದು ಬಿಬಿಎಂಪಿ ಮಾಜಿ ಮೇಯರ್ ಎಂ.ಗೌತಮ್ ಕುಮಾರ್ ಹೇಳಿದರು.

ಶಾಂತಿನಗರ ವಿಧಾನಸಭಾ ಕ್ಷೇತ್ರ, ಹಲಸೂರು, ಸೋಮೇಶ್ವರ ಕ್ಷೇಮಾಭಿವೃದ್ಧಿ ಸಂಘದ ಸಭಾಂಗಣದಲ್ಲಿ ಅಭಿಮಾನಿಗಳು, ಸ್ನೇಹಿತರು ಬಳಗದಿಂದ ಶಾಂತಿನಗರ ವಿಧಾನಸಭಾ ಕ್ಷೇತ್ರದ ನಾಯಕರು, ತಮ್ಮ ಹುಟ್ಟುಹಬ್ಬದ ಅಚರಣೆಯಲ್ಲಿ ಮಾತಾಡಿದ ಅವರು,

ಬಾಲ್ಯದಲ್ಲಿ ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಒಡನಾಟದಿಂದ ಸಮಾಜಸೇವೆ, ರಾಷ್ಟ್ರ ಭಕ್ತಿ, ಶಿಸ್ತ್ರು ಜೀವನದಲ್ಲಿ ಕಲಿತೆ. ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನ ಹೊಂದಿರುವ ಬಿ.ಜೆ.ಪಿ.ಪಕ್ಷದ ಸದಸ್ಯರೆಂದರೇ ಹೆಮ್ಮೆ ಪಡುವ ಸಂಗತಿ ಎಂದರು.

ಬಿ.ಜೆ.ಪಿ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರು ಉನ್ನತ ಸ್ಥಾನ ಅಲಂಕರಿಸಬಹುದು. ನನಗೆ ಎರಡು ಬಾರಿ ಜೋಗುಪಾಳ್ಯ ವಾರ್ಡ್ ಬಿ.ಬಿ.ಎಂ.ಪಿ. ಸದಸ್ಯನಾಗಿ, ಮಹಾಪೌರನಾಗಿ ಸೇವೆ ಮಾಡಲು ಅವಕಾಶ ನೀಡಿದೆ ಎಂದರು.

ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರಮೋದಿರವರು ಅಭಿವೃದ್ಧಿ ಪರ ಚಿಂತನೆಯಿಂದ ದೇಶ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಜನಪರ ಆಡಳಿತ ನೀಡಿ ಜನ ಮೆಚ್ಚುಗೆ ಪಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದೆ ಎಂದರು.

ಬಿ.ಜೆ.ಪಿ. ನಾಯಕರು, ಶಾಂತಿನಗರ ವಿಧಾನಸಭಾ ಕ್ಷೇತ್ರದ ಜನರ ಸಹಕಾರ, ಬೆಂಬಲದಿಂದ ಇನ್ನು ಹೆಚ್ಚಿನ ಜನಸೇವೆ ಮಾಡುತ್ತೇನೆ. ಬಿ.ಜೆ.ಪಿ. ಕೊಡುವ ಜವಾಬ್ದಾರಿಯನ್ನ ಯಶ್ವಸಿಯಾಗಿ ನಿಭಾಸುತ್ತೇನೆ ಎಂದರು.

ವಿಧಾನಪರಿಷತ್ ಸದಸ್ಯರಾದ ತುಳಸಿ ಮುನಿರಾಜುಗೌಡ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಲಕ್ಷ್ಮೀನಾರಾಯಣ್(ಗುಂಡಣ್ಣ), ಮತ್ತು ಸಪ್ತಗಿರಿಗೌಡ, ಮಹಾಪ್ರಭು ಯದುಕುಮಾರ್ ಗೌಡ, ರವೀಂದ್ರನಾಥ್ ರವರು ಮಹಿಳಾ ಮುಖಂಡರುಗಳು ಇದ್ದರು.

Leave a Reply