ಮುಂಬೈ: ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಬಿಗ್ ಬಾಸ್ 13 ವಿಜೇತ ಮತ್ತು ನಟ ಸಿದ್ಧಾರ್ಥ್ ಶುಕ್ಲಾ (40) ಕಾಲವಶರಾಗಿದ್ದಾರೆ. ಅವರು ನಿನ್ನೆ ರಾತ್ರಿ ಮಲಗುವ ಮುನ್ನ ಕೆಲವು ಔಷಧಗಳನ್ನು ಸ್ವೀಕರಿಸಿದ್ದರು. ಅನಂತರ ಅವರು ಎದ್ದೇಳಲು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಅವರಿಗೆ ಮುಂಜಾನೆ ತೀವ್ರ ಹೃದಯಾಘಾತವಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಬಾಲಿಕಾ ವಧು ಮತ್ತು ಇತರ ದೂರದರ್ಶನ ಕಾರ್ಯಕ್ರಮಗಳಲ್ಲಿ ಜನಪ್ರಿಯರಾಗಿದ್ದರು. ತಾಯಿ ಮತ್ತು ಇಬ್ಬರು ಸೋದರಿಯರನ್ನು ಅವರು ಅಗಲಿದ್ದಾರೆ.



