ಭರತನಾಟ್ಯ ಕಲೆ ದೇಶದ ಸಂಸ್ಕೃತಿ, ಸಂಪ್ರಾದಯದ ಪ್ರತೀಕ

3 years ago

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಯುವ ಕಲಾವಿದ ಜೆ.ಮನುರವರು ಪ್ರಥಮ ಸ್ಥಾನಗಳಿಸಿ, ರಾಜ್ಯಕ್ಕೆ ಕೀರ್ತಿ ತಂದರು.

ಇದೇ ಸಂದರ್ಭದಲ್ಲಿ ಯುವ ಕಲಾವಿದ ಜೆ.ಮನುರವರನ್ನು ಶಾಸಕ ದಿನೇಶ್ ಗುಂಡೂರಾವ್, ಡಾ.ವೀಣಾ ಮೂರ್ತಿ ವಿಜಯ್ ಸನ್ಮಾನಿಸಿದರು.

ಯುವ ಭರತನಾಟ್ಯ ಕಲಾವಿದ ಜೆ.ಮನು ಮಾತನಾಡಿ, ಶಿಷ್ಯ, ಗುರು ಪರಂಪರೆ ಮತ್ತು ದೇಶದ ಸಂಸ್ಕೃತಿ ಸಂಪ್ರಾದಯದ ಭರತನಾಟ್ಯ ಕಲೆ ಉಳಿಸಿ, ಬೆಳಸಲು 5 ವರ್ಷದ ಬಾಲಕನಾಗಿದ್ದಾಗಿನಿಂದ ಅವಿರತ ಶ್ರಮ ಪಡುತ್ತಿದ್ದೇನೆ ಎಂದರು.

ಭರತನಾಟ್ಯ, ಕೂಚುಪುಡಿ ನೃತ್ಯ ಭಾರತೀಯ ಗುರು ಶಿಷ್ಯ, ಪರಂಪರೆ ಸಾರುವ ಕಲೆಯಾಗಿದೆ.ಬವಿಶ್ವದ ಎಲ್ಲ ದೇಶಗಳಲ್ಲಿ ಭರತನಾಟ್ಯ ಕಲೆ ವಿಶೇಷ, ಗೌರವ ಸ್ಥಾನಮಾನವಿದೆ. ಕಲೆ ಉಳಿದರೆ ನಾಡಿನ ಇತಿಹಾಸ ತಿಳಿಯಬಹುದು. ಅದರಿಂದ ಭರತನಾಟ್ಯ ಕಲೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಉಚಿತವಾಗಿ ಭರತನಾಟ್ಯ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.

ಭರತನಾಟ್ಯ ಕಲೆ ಉಳಿಸಲು ಚೀನಾ, ಮಲೇಶಿಯ, ಸಿಂಗಪೂರ್, ನೇಪಾಳ, ಗೋವಾ, ಮಹಾರಾಷ್ಟ್ರ, ನವದೆಹಲಿ ವಿವಿಧ ರಾಜ್ಯಗಳಲ್ಲಿ ಯುವ ಜನೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ರಾಜ್ಯ ಸರ್ಕಾರ ಭರತನಾಟ್ಯ ಕಲೆ ಉಳಿಸಲು ಯುವ ಕಲಾವಿದರಿಗೆ ಸಹಕಾರ, ಪ್ರೋತ್ಸಾಹ ನೀಡಬೇಕು ಎಂದರು.

Leave a Reply