ಮತ ಕೊಯ್ಲಿನ ಪ್ರಣಾಳಿಕೆಗಳ ಬದಲಾಗಿ ಜನಪರವಾಗಬೇಕು

3 years ago

ಮತ ಕೊಯ್ಲಿನ ಪ್ರಣಾಳಿಕೆಗಳ ಬದಲಾಗಿ ಜನಪರವಾಗಬೇಕು

ಬಹುತೇಕ ರಾಜಕೀಯ ಪಕ್ಷಗಳು ಒಂದು ಥಿಂಕ್ ಟ್ಯಾಂಕ್ ರೀತಿಯಲ್ಲಿ ಜನ ಪರವಾಗಿ ಕೆಲಸ ಮಾಡುವ ಬುದ್ಧಿಜೀವಿಗಳು, ಸಾಮಾಜಿಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಬೌದ್ಧಿಕ ರಾಜಕಾರಣಿಗಳ ಒಂದು ತಂಡ ರಚಿಸಿ ಪ್ರಣಾಳಿಕೆಯನ್ನು ರಚಿಸುತ್ತವೆ. ಈ ಸಂದರ್ಭಗಳಲ್ಲಿ ಜನಪರವಾದ, ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ, ವಿದ್ಯಾರ್ಥಿಗಳ, ಮಹಿಳೆಯರ, ಅಲೆಮಾರಿಗಳ, ರೈತರ ಪರವಾಗಿ ಪ್ರಗತಿಗೆ ಪೂರಕವಾದ ಸಾಕಷ್ಟು ಅಂಶಗಳು ಪ್ರಣಾಳಿಕೆಗಳಲ್ಲಿ ಬುದ್ಧಿಜೀವಿಗಳು ಸೇರಿಸುತ್ತಾರೆ. ಉದಾಹರಣೆಗೆ, ಉಚಿತ ಶಿಕ್ಷಣ, ಸಮಾನ ಶಿಕ್ಷಣ, ಉಚಿತ ಆರೋಗ್ಯ ಅಥವಾ ರೈತರಿಗೆ ದಲ್ಲಾಳಿಗಳಿಲ್ಲದೆ ವಸ್ತುಗಳು ಖರೀದಿಸುವ ಮತ್ತು ಮಾರಾಟ ಮಾಡುವಂತಹ ಯೋಜನೆಗಳು, ಜಿಲ್ಲೆಗೊಂದು ರೈತ ಮಾಲ್ಗಳು, ಸಬ್ಸಿಡಿ ದರದಲ್ಲಿ ಮಧ್ಯವರ್ತಿಗಳು ಇಲ್ಲದೆ ನೇರ ಫ್ಯಾಕ್ಟರಿಗಳಿಂದ ಸರಕಾರದ ಸಬ್ಸಿಡಿಯೊಂದಿಗೆ ಟ್ರ್ಯಾಕ್ಟರ್, ಬಿತ್ತನೆ ಬೀಜಗಳು, ಕ್ರಿಮಿನಾಶಕಗಳು ಒಳಗೊಂಡ ಹಾಗೆ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ಸಿಗುವಂತಹ  ಯೋಜನೆಗಳನ್ನು ಪ್ರತಿ ವರ್ಷ ರೂಪಿಸುತ್ತಾರೆ. ಆದರೆ ಅಂತಿಮಗೊಳ್ಳುವುದು ರಾಜಕಾರಣಿಗಳಿಗೆ ಲಾಭವಾಗುವ, ಕೇವಲ ಮತ ಪಡೆಯುವಂತಹ ಪ್ರಣಾಳಿಕೆಗಳು ಅಥವಾ ಬಜೆಟ್ ಗಳು. ಈ ಪ್ರಣಾಳಿಕೆಗಳು ಬಹುತೇಕ ಇರುವುದು ಇತ್ತೀಚಿನ ದಿನಗಳಲ್ಲಿ ದುರ್ಲಭವಾಗುತ್ತಿವೆ.

ಹೀಗೆ ಆಗುವುದಾದರೆ ಪ್ರಣಾಳಿಕೆ ತಯಾರಿಸುವವರ ಉದ್ದೇಶ ಅಸಫಲವಾದಂತೆ. ಈಗಲೂ ಸಾಕಷ್ಟು ಪ್ರಾಮಾಣಿಕ ರಾಜಕಾರಣಿಗಳು ಈ ಪ್ರಣಾಳಿಕೆ ಅಥವಾ ಬಜೆಟ್ ತಯಾರಿಯಲ್ಲಿ ಕೆಲಸ ಮಾಡುತ್ತಾರೆ. ಅಂತಿಮವಾಗಿ ಭ್ರಷ್ಟರಾದಂತಹ ಕೆಲವರ ಅಧ್ಯಕ್ಷತೆಯಲ್ಲಿ ಮೂಲೆಗುಂಪಾಗಿ ಮತ್ತೆ ಕೆಲ ಭ್ರಷ್ಟ ರಾಜಕೀಯ ಲಾಭದ ನಾಯಕರಿಂದ ಅವು ಅಂತಿಮವಾಗಿ ಜಾರಿ ಅಗುವುದಿಲ್ಲ. ಜನರಿಗೆ ಮೋಸ ಮಾಡುವ ಪ್ರಣಾಳಿಕೆಯಲ್ಲಿ ಮುನ್ನೆಲೆಗೆ ಬರುತ್ತವೆ .ಕಾರಣ ಉಚಿತ ಶಿಕ್ಷಣ ನೀಡಿದರೆ ಖಾಸಗಿ ಶಾಲೆ, ಕಾಲೇಜುಗಳ(ಮೆಡಿಕಲ್ ಕಾಲೇಜುಗಳು ಒಳಗೊಂಡಂತೆ)ನ್ನು ನಡೆಸುವ ರಾಜಕಾರಣಿಗಳಿಗೆ ನಷ್ಟವಾಗುತ್ತದೆ. ನಾವು ನೀಡುವ ತೆರಿಗೆಯಲ್ಲಿ ಇವು ಉಚಿತ ನೀಡಿದರೆ ಭ್ರಷ್ಟಾಚಾರ ನಿರ್ಮೂಲನೆ, ಮೀಸಲಾತಿಯ ಸಮಸ್ಯೆಗೆ ಪರಿಹಾರ, ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.

ಪ್ರಬುದ್ಧ ರಾಜಕಾರಣಿಗಳು ತಯಾರಿಸುವ ಪ್ರಣಾಳಿಕೆಗಳು ಯಥಾವತ್ತಾಗಿ ಜಾರಿಯಾಗುವ ಹಾಗೆ ರಾಜಕೀಯ ಪಕ್ಷಗಳು ನೋಡಿಕೊಳ್ಳುವ  ಹೊಣೆಗಾರಿಕೆ ಬರಬೇಕು. ಪ್ರಣಾಳಿಕೆ ಬರಿ ಪೊಳ್ಳು ಎಂದು ಜನರಿಗೆ ಹಾಗೂ ಅದನ್ನು ರೂಪಿಸುವವರಿಗೆ ಅನಿಸಿದರೆ ನಂಬಿಕೆಯನ್ನು ಪಕ್ಷಗಳು ಕಳೆದುಕೊಳ್ಳಲಿವೆ. ಪಕ್ಷಗಳ ಪ್ರಣಾಳಿಕೆ ತಯಾರಿಯಲ್ಲಿರುವ  ಪ್ರಬುದ್ಧ ಹಾಗೂ ಪ್ರಾಮಾಣಿಕ ರಾಜಕಾರಣಿಗಳು ಹೇಳುವಂತೆ ಜನಪರವಾಗಿ, ಜೀವಪರವಾಗಿ, ನಾಡಿನ ಸ್ವಾಸ್ತ್ಯಕ್ಕಾಗಿ, ದೇಶ ಅಥವಾ ರಾಜ್ಯದ ಪ್ರಗತಿಗೆ ಪೂರಕವಾದ ಯಾವುದೇ ಕೆಲಸಗಳು, ಪ್ರಣಾಳಿಕೆಗಳು ಅಥವಾ ಯೋಜನೆಗಳು ಬಜೆಟ್ ಗಳು ಜಾರಿಯಾಗುವುದು ಕಷ್ಟ.  ಬಹುತೇಕ ವೈಯಕ್ತಿಕ ಲಾಭಕ್ಕಾಗಿಯೇ ಪಕ್ಷಗಳು ನಡೆಯುವುದು, ಕೆಲಸ ಮಾಡುವುದು ದುರಂತ.


ಮುಂದಿನ ದಿನಗಳಲ್ಲಿ  ವೈಯಕ್ತಿಕ ರಾಜಕೀಯ ಲಾಭಕ್ಕಿಂತ ಪ್ರಗತಿಗೆ ಪೂರಕವಾದ, ಜನರಿಗೆ, ಬಡವರಿಗೆ ನಿರ್ಗತಿಕರಿಗೆ ಅನುಕೂಲವಾಗುವ ರಾಜಕೀಯ ಕೆಲಸಗಳು ನಡೆದರೆ ಒಳಿತು.


– ಡಾ. ಎ ಆರ್ ಗೋವಿಂದ ಸ್ವಾಮಿ ನಾಯಕ್, ಅಮ್ಮನಪುರ

Leave a Reply