ಪೌರ ಕಾರ್ಮಿಕರಿಗೆ ಕುಕ್ಕರ್, ಸೀರೆ ವಿತರಣೆ ಮತ್ತು ಅಂಧರಿಗೆ ವಾಕಿಂಗ್ ಸ್ಟಿಕ್, ಬ್ಯಾಗ್ ಹಾಗೂ ವಿಕಲಚೇತನರಿಗೆ ವೀಲ್ ಚೇರ್ ವಿತರಣೆ, ರಕ್ತದಾನ ಶಿಬಿರ ಕಾರ್ಯಕ್ರಮ
ಬೆಂಗಳೂರು: 500 ವರ್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಚಿಂತನೆಯಿಂದ ಬೆಂಗಳೂರು ನಗರ ಸ್ಥಾಪನೆಯಾಯಿತು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡ್ ನಲ್ಲಿ ಜನ ಸಂಪರ್ಕ ಕಛೇರಿ ಉದ್ಘಾಟನೆಯ ನಂತರ ಮಾತಾಡಿದ ಅವರು, ಎಲ್ಲ ವರ್ಗ, ಜಾತಿ, ಧರ್ಮದವರಿಗೆ ಉದ್ಯೋಗ ಅನುಸಾರವಾಗಿ ಪೇಟೆಗಳನ್ನು ಕೆಂಪೇಗೌಡರು ನಿರ್ಮಾಣ ಮಾಡಿದರು. ಧ್ವನಿ ಇಲ್ಲದ, ಆಸರೆ ಇಲ್ಲದ ಸಮಾಜದ ಕಟ್ಟಕಡೆಯ ಜನರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಿದಾಗ ದೇಶ ಅಭಿವೃದ್ದಿ ಸಾಧ್ಯ ಎಂದರು.
ಪ್ರಧಾನಿ ನರೇಂದ್ರ ಮೋದಿರವರು ಮತ್ತು ಸರಳ, ಸಜ್ಞನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರ ಸಹಕಾರದಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 260 ಹಾಸಿಗೆ ಸಾಮ್ಯರ್ಥವುಳ್ಳ ಹೈಟೆಕ್ ಆಸ್ಪತ್ರೆ ಶೀಘ್ರದಲ್ಲಿ ಲೋಕರ್ಪಣೆಯಾಗಲಿದೆ ಎಂದರು.
ಕೆ.ಉಮೇಶ್ ಶೆಟ್ಟಿ ಮಾತನಾಡಿ, ನನ್ನ ಗುರುಗಳು, ಮಾಗದರ್ಶಕರಾದ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ನಾಗರಭಾವಿ, ಗೋವಿಂದರಾಜನಗರ ವಾರ್ಡ್ ನಲ್ಲಿ ಪಾಲಿಕೆ ಸದಸ್ಯನಾಗಿ ಸೇವೆ ಮಾಡಿದ್ದೇನೆ. ಜನರ ಸಲಹೆ, ಸಹಕಾರದಿಂದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ, ಚಂದ್ರಗಿರಿ ಉದ್ಯಾನವನ, ಕನಕದಾಸರ ಉದ್ಯಾನವನ, ಅಟಲ್ ಕ್ರೀಡಾ ಸಂಕೀರ್ಣ ಮತ್ತು ರೆಫರಲ್ ಆಸ್ಪತ್ರೆ ಮತ್ತು ಹಲವಾರು ಅಭಿವೃದ್ದಿ ಕೆಲಸಗಳು ಪರಿಪೂರ್ಣ ಮಾಡಲಾಗಿದೆ ಎಂದರು.



