ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್: ಕೋವಿಡ್-19 ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಜುಲೈ 15 ಕೊನೆ ದಿನ

5 years ago

ಬೆಂಗಳೂರು: ಕೋವಿಡ್-19ರ 2ನೇ ಅಲೆಯ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತಿತರೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿ ಆದೇಶಿಸಿರುವುದರಿಂದ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ರೂ. 3000/- ಗಳ ಪರಿಹಾರ ಧನವನ್ನು ನೀಡಲು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿ ಆದೇಶ ಹೊರಡಿಸಲಾಗಿದೆ.

ಪರಿಹಾರ ಧನವನ್ನು ಅನ್‍ಲೈನ್ ಮೂಲಕ “ಸೇವಾ ಸಿಂಧು” ವೆಬ್ ಪೋರ್ಟಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 27-05-2021ರಂದು ಬೆಳಿಗ್ಗೆ 11.00 ರಿಂದ ಪ್ರಾರಂಭಿಸಲಾಗಿದೆ.  ದಿನಾಂಕ: 05-07-2021ರಲ್ಲಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು ಜುಲೈ 15, 2021  ಕೊನೆಯ ದಿನಾಂಕ ನಿಗದಿಪಡಿಸಲಾದೆ.

ಅರ್ಹ ಫಲಾನುಭಾವಿಗಳು ಸರ್ಕಾರ ನಿಗದಿಪಡಿಸಿರುವ ಕೊನೆಯ ದಿನಾಂಕ: 15-07-2021ರ ಸಂಜೆ 6.00 ಗಂಟೆಯೊಳಗೆ ಅರ್ಜಿಗಳನ್ನು ಅನ್‍ಲೈನ್ ಮೂಲಕ “ಸೇವಾ ಸಿಂಧು” ಅಂತರ್ಜಾಲದಲ್ಲಿ ಸಲ್ಲಿಸಿ ಪರಿಹಾರ ಧನ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಿದ ಅರ್ಹ ಫಲಾನುಭಾವಿಗಳಿಗೆ ಪರಿಹಾರಧನವನ್ನು ಅವರ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ವರ್ಗಾಯಿಸಲಾಗುವುದು. ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರು ಈ ಯೋಜನೆ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply