ಚಿಕ್ಕನಾಯ್ಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ, ಹುಳಿಯಾರು ಹೋಬಳಿ, ಹೋಯ್ಸಲಗಟ್ಟೆ ಗ್ರಾಮಪಂಚಾಯ್ತಿ ಜಯಚಂದ್ರ ನಗರದ ಅಲೆಮಾರಿ ಫಲಾನುಭವಿಗಳ ಹಲವಾರು ಸಮಸ್ಯೆಗಳಿಗೆ ಪರಿಹಾರಗಳನ್ನು ಸ್ಥಳೀಯ ಅಧಿಕಾರಿಗಳು ಯಾವುದೇ ಪೂರ್ವಾಗ್ರಗಳಿಲ್ಲದೆ ಈಡೇರಿಸಲು ಪ್ರಯತ್ನಿಸಿದ್ದಾರೆ. ಹತ್ತು ಗುಂಟೆಗಿಂತಲೂ ಅರ್ಧ ಎಕರೆಯಷ್ಟು ಭೂಮಿಯನ್ನು ಸ್ಮಶಾನ ಜಾಗಕ್ಕೆ ಕಾಯ್ದಿರಿಸಿರುವರು. ಹೊಯ್ಸಲಗಟ್ಟೆ ಗ್ರಾಮಪಂಚಾಯ್ತಿಗೂ ಕಂದಾಯ ಇಲಾಖಾವತಿಯಿಂದ ಕಡತ ಹೋಗಿದೆ.
ಈಗಾಗಲೇ ನೂತನ ಸ್ಮಶಾನದಲ್ಲಿ ಸುಡಗಾಡುಸಿದ್ದರ ಸಮುದಾಯದ ಒಂದು ಶವಸಂಸ್ಕಾರವೂ ನಡೆದಿದೆ. ಜನವಸತಿಗಾಗಿ ಸುಡುಗಾಡುಸಿದ್ದರಿಗೆ ಪ್ರತ್ಯೇಕ ಎರಡು ಎಕರೆ ಜಾಗ ಕೇಳಲಾಗಿದೆ. ಪ್ರಸ್ತಾವನೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದೆ. ಅದನ್ನೂ ಗುರುತಿಸಲಾಗಿದೆ. ಇತರೆ ಸಮುದಾಯಗಳ ಜೊತೆಯಲ್ಲೂ ಇವರಿಗೆ ನಿವೇಶನಗಳನ್ನು ಗುರುತಿಸುವ ಕೆಲಸಗಳಾಗಿವೆ ಎಂದು ಹೊಯ್ಸಲಕಟ್ಟೆ ಗ್ರಾಮಲೆಕ್ಕಾಧಿಕಾರಿ ತಿಳಿಸಿದ್ದಾರೆ. ಗೆಳೆಯರು, ಹುಳಿಯಾರು ಹೋಬಳಿ ಕಂದಾಯ ವೃತ್ತನಿರೀಕ್ಷಕರು ಶ್ರೀನಿವಾಸ್ ಈಗ ಅಲ್ಲಿ ಹೊಸದಾಗಿ ವರ್ಗಾವಣೆಗೊಂಡು ಬಂದಿರುವ ಕಂದಾಯ ತನಿಖಾಧಿಕಾರಿ. ಶ್ರೀನಿವಾಸ್ ಸಹ ಅಲೆಮಾರಿಗಳ ಭೂ ದಾಖಲಾತಿ ಕಡತಗಳನ್ನು ಪರಿಶೀಲಿಸಿದರು. ಅಗತ್ಯಕ್ರಮವಹಿಸುವ ಪ್ರಯತ್ನದಲ್ಲಿ ಅವರೂ ಇದ್ದಾರೆ.
ಸರ್ಕಾರಿ ಸರ್ವೆ ನಂಬರ್ ಒಂದಕ್ಕೆ ಅಲೆಮಾರಿಗಳು 57 ಅಡಿಯಲ್ಲಿ ಭೂ ಮುಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಪಡೆದವರು ಸ್ವೀಕೃತಿಯನ್ನೂ ನೀಡಿದ್ದಾರೆ. ಸ್ವೀಕೃತಿಗೆ ಪಲಾನುಭವಿಗಳು ಲ್ಯಾಮನೇಷನ್ ಮಾಡಿಕೊಂಡು ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಇದು ಪ್ರಯೋಜನವಾಗಬಹುದು. ಇವರು ಜಾಗ ಹಿಡಿದು ಉಳುಮೆ ಮಾಡಬೇಕು. ನಿರ್ದಿಷ್ಟ ಜಾಗದಲ್ಲಿ ಬೆಳೆ ಬೆಳೆಯತೊಡಗಿ ಅನುಭವದಲ್ಲಿರಬೇಕು, ಅನುಭವ ಮುಂದುವರಿಸಿಕೊಂಡು ಸದರಿ ಹಿಡುವಳಿಯ ಭೂ ಮುಂಜೂರಾತಿಗೆ ಅರ್ಜಿ ಸಲ್ಲಿಸಬೇಕು.
ಇಂತಹ ಸಾರ್ವಕಾಲಿಕವಾದ ದೀರ್ಘಕಾಲದ ಪ್ರಯತ್ನವಾದರೆ ಒಳ್ಳೆಯದು. ಬಗರ್ ಹುಕುಂ ಸಾಗುವಳಿಯ ಸಮಿತಿ ಮುಂದೆ ಇವರ ಅರ್ಜಿಗಳಿವೆ. ಶಾಸಕರು ತಹಸಿಲ್ದಾರರು ಸಮಿತಿಯ ಸಭೆ ಕರೆದಾಗ ಪರಿಶೀಲಿಸಿ ಭೂಮುಂಜೂರಾತಿ ನೀಡಬೇಕು. ಇವರು ಅರ್ಜಿ ಸಲ್ಲಿಸಿರುವ ಜಾಗದಲ್ಲೂ ಸರ್ಕಾರಿ ಭೂಮಿ ಇದೆ. ಗುರ್ತಿಸಿ ಇವರಿಗೆ ಭೂ ಮುಂಜೂರು ಮಾಡುವಂತೆ ಶಾಸಕರು ಗಮನಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ, ಜಿಲ್ಲಾ ಘಟಕ ಕಾರ್ಯೋನ್ಮಖವಾಗಲಿದೆ.
ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಗೌರವಾಧ್ಯೆಕ್ಷರು ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಹಾಗು ರಾಜ್ಯದ ಹಿರಿಯ ಕಾನೂನು ತಜ್ಞರಾದ ಸಿ. ಎಸ್. ದ್ವಾರಕಾನಾಥ್ ಅವರ ಗಮನಕ್ಕೂ ತಂದು, ಅಲೆಮಾರಿಗಳಿಗೆ ಸಾಗುವಳಿ ಭೂಮಿ ದೊರೆಯಲು ಪ್ರಯತ್ನ ಮಾಡಲಾಗುವುದು. ರಾಜ್ಯಾಧ್ಯಕ್ಷರು ಹನುಮಂತಪ್ಪ ಅವರೂ ಈ ನಿಟ್ಟಿನಲ್ಲಿ ಕಾರ್ಯೋನ್ಮಖರಾಗಿರುವರು.
ತಹಸಿಲ್ದಾರರನ್ನು ಭೇಟಿಯಾಗಿ ಅಲೆಮಾರಿಗಳ ಸಮಸ್ಯೆಗಳನ್ನು ಮನವರಿಕೆ ಮಾಡುವ ಸಲುವಾಗಿ ಪ್ರಯತ್ನಿಸಲಾಯಿತಾದರೂ ಅವರು ಕಚೇರಿಯಲ್ಲಿ ಇರಲಿಲ್ಲ. ಚಿಕ್ಕನಾಯ್ಕನಹಳ್ಳಿ ತಹಸಿಲ್ದಾರ್ ಕಾರ್ಯಾಲಯ ತಹಸಿಲ್ದಾರ್ ವರ್ಗಾವಣೆಯ ಸಮಸ್ಯೆ ಎದುರಿಸುತ್ತಿದೆ. ಬರಗಾಲದ ಇಂತಹ ಪರಿಸ್ಥತಿಯಲ್ಲಿ ಭೇಟಿ ಮಾಡಲು ಕಚೇರಿಗೆ ಹೋದರೆ ಖಾಯಂ ತಹಸಿಲ್ದಾರರು ಇಲ್ಲವಾಗಿದೆ ಎಂದು ಜನರು ರೋಸಿ ಹೋಗೆ ಆಡುತ್ತಿದ್ದ ಮಾತುಗಳೂ ಕೇಳಿಬಂದವು. ಬಿಡಿ ಅದು ಅಲೆಮಾರಿಗಳ ಸಮಸ್ಯೆ ಅಲ್ಲ. ಜಯಚಂದ್ರ ನಗರಕ್ಕೆ ಅಂಗನವಾಡಿ ಕೇಂದ್ರ ಮುಂಜೂರಾತಿ ಅತಿ ಜರೂರಾಗಿ ಆಗಬೇಕಾಗದೆ.
ಸಿಡಿಪಿಒ ಹೊನ್ನಪ್ಪ ಖಂಡಿತವಾಗಿಯೂ ಸಮಸ್ಯೆಯನ್ನು ಸಮಾಲೋಚಿಸುತ್ತಾರೆ. ಶಾಸಕ ಸುರೇಶ್ ಬಾಬು ಅವರೂ ಅಲೆಮಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಬಲ್ಲರು. ಅಲೆಮಾರಿಗಳ ವಾಸ್ತವ ಸ್ಥತಿಗಳನ್ನು ಸಮಾಲೋಚಿಸಲು ಶಾಸಕರನ್ನು “ದಿನದ ಮಟ್ಟಿಗೆ ಅಲೆಮಾರಿಗಳ ಜೊತೆಯಲ್ಲಿ ಸನಿವಾಸ” ಕ್ರಾರ್ಯಕ್ರಮಕ್ಕೆ ಆಹ್ವಾನಿಸುವಂತಹ ಪ್ರಯತ್ನವನ್ನೂ ಮಾಡಬೇಕೆಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ ಕಾರ್ಯೋಪಯುಕ್ತ ಕಲಾಪವನ್ನೂ ಮುಂದೆ ಕಾರ್ಯಾಲೋಚನೆ ಮಾಡಲಿದೆ.
– ಉಜ್ಜಜ್ಜಿ ರಾಜಣ್ಣ
ಜಿಲ್ಲಾ ಅಧ್ಯಕ್ಷರು
ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾ ಸಭಾ
ತುಮಕೂರು ಜಿಲ್ಲೆ, ತಿಪಟೂರು
9448747360




